ರಜೆಯಲ್ಲಿದ್ದರೂ ಸೇನೆ ಸೇರಿಕೊಂಡ ಕಮಾಂಡರ್‌ ಅಭಿನಂದನ್‌ ವರ್ತಮಾನ್..!!

27 Mar 2019 4:03 PM | General
364 Report

ಪುಲ್ವಾಮ ದಾಳಿಯೂ ದೇಶದಲ್ಲಿ ಮಹತ್ತರವಾದ ಸಂಚಲನವನ್ನೆ ಮಾಡಿಬಿಟ್ಟಿತ್ತು.. ಅದೆಷ್ಟೋ ಸೈನಿಕರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರು.. ಅದೇ ಸಮಯದಲ್ಲಿ ಭಾರತೀಯ ವಾಯುಸೇನೆ ಪೈಲೆಟ್ ಅಭಿನಂದನ್ ಪಾಕ್ ಕಪಿ ಮುಷ್ಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.. ಇತ್ತೀಚೆಗಷ್ಟೇ ಪಾಕ್‌ ವಶದಿಂದ ಬಿಡುಗಡೆಯಾಗಿ ಬಂದು, 4 ವಾರಗಳ ರಜೆಯ ಮೇಲೆ ತೆರಳಿದ್ದ ಭಾರತೀಯ ವಾಯುಪಡೆಯ ವಿಂಗ್‌ಕಮಾಂಡರ್‌ ಅಭಿನಂದನ್‌, ಮತ್ತೆ ತಮ್ಮ ಸ್ಕ್ವಾಡ್ರನ್‌ ಸೇರಿಕೊಂಡಿದ್ದಾರೆ.

ವಿಶ್ರಾಂತಿ ತೆಗೆದುಕೊಳ್ಳಲೆಂದು ಅಭಿನಂದನ್ ಗೆ ರಜೆಯನ್ನು ನೀಡಿದ್ದರು. ರಜೆಯ ಅವಧಿಯನ್ನು ಚೆನ್ನೈನಲ್ಲಿನ ಕುಟುಂಬ ಸದಸ್ಯರ ಜೊತೆ ಕಳೆಯುವ ಬದಲು ಅಭಿನಂದನ್‌ ಅವರು ಸೇನಾ ನೆಲೆಯಲ್ಲೇ ಇರಲು ಬಯಸಿ, ಶ್ರೀನಗರಕ್ಕೆ ಆಗಮಿಸಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುನೆಲೆ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನ ಎಫ್‌-16 ಯುದ್ಧ ವಿಮಾನವೊಂದನ್ನು ಬೆನ್ನಟ್ಟಿಹೋಗಿದ್ದ ಅಭಿ, ಪಾಕ್‌ ಯೋಧರ ಕೈಗೆ ಸಿಕ್ಕಿಬಿದ್ದಿದ್ದರು. ಎರಡು ದಿನಗಳ ಕಾಲ ಅವರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಪಾಕ್‌, ಅವರಿಗೆ ಭಾರೀ ಮಾನಸಿಕ ಹಿಂಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲ ಪರೀಕ್ಷೆಗೆ ಗುರಿಪಡಿಸಿದ ಬಳಿಕ ನಾಲ್ಕು ವಾರಗಳ ಅನಾರೋಗ್ಯ ರಜೆ ಮೇಲೆ ಮನೆಗೆ ಕಳುಹಿಸಲಾಗಿತ್ತು. ಆದರೆ ದೇಶಕ್ಕಾಗಿ ದುಡಿಯಲು ನಾನು ಯಾವಾಗಲೂ ಕೂಡ ಸಿದ್ದ ಎನ್ನುವಂತೆ ರಜೆಯನ್ನು ಕೂಡ ನಾನು ಅಲ್ಲೆ ಕಳೆಯುತ್ತೇನೆ ಎಂದು ಅಭಿನಂದನ್ ಶ್ರೀ ನಗರಕ್ಕೆ ಹೋಗಿದ್ದಾರೆ.. ಪುಲ್ವಾಮ ದಾಳಿಯ ಯೋಧರ ಸಾವಿಗೆ ಇಡೀ ದೇಶವೆ ಮಮ್ಮುಲ ಮರುಗಿತು…

Edited By

Manjula M

Reported By

Manjula M

Comments