ಯಾವ ಆಫರ್ ಕೊಟ್ರೂ ನಾನು ಕಾಂಗ್ರೆಸ್ ಸೇರೋದಿಲ್ಲ : ಖ್ಯಾತ ಗಾಯಕಿ...!!!

25 Mar 2019 11:25 AM | General
696 Report

ಅಂದಹಾಗೇ ಒಂದಷ್ಟು ನಟಿಮಣಿಯರು ಈ ಪಕ್ಷಕ್ಕೆ ಸೇರುತ್ತಾರೆ, ಆ ಪಕ್ಷಕ್ಕೆ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಲೋಕ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಪ್ರೇರಿತ ಕೊಡುವ ಹೇಳಿಕೆಗಳಿಗೆ ಇವರು ಇದೇ ಪಕ್ಷ ಸೇರುತ್ತಾರೆಂದು ಅಂದಾಜಿಸಲಾಗುತ್ತಿದೆ. ಆದರೆ, ಖ್ಯಾತ ಗಾಯಕಿ  ಕಾಂಗ್ರೆಸ್ ಸೇರಿದ್ದಾರೆಂಬ ಹೇಳಿಕೆಗೆ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ ಹರ್ಯಾನಿ ಗಾಯಕಿ ಸಪ್ನಾ ಚೌಧರಿ.

ಇವರ ಎಐಸಿಸಿ ಪ್ರಧಾನ  ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಜೊತೆಗಿನ ಫೋಟೋವೊಂದು ವೈರಲ್ ಆಗಿದೆ.  ಆ ಫೋಟೋ ವೈರಲ್  ಆಗುತ್ತಿದ್ದಂತೇ    ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಒಂದಷ್ಟು ದಿನ ಹರಿದಾಡಿತ್ತು. ಆದರೆ ಪ್ರಿಯಾಂಕ  ಗಾಂಧಿ ಜೊತೆಗಿನ ಫೋಟೋ ವೈರಲ್ ಆಗಿದ್ದ ಮಾತ್ರಕ್ಕೆ  ನಾನು ಕಾಂಗ್ರೆಸ್ ಸೇರಿಕೊಳ್ಳುತ್ತೇನೆ ಎಂದು ಹೇಗೆ ಹೇಳುತ್ತೀರಿ. ಇದರ ಬಗ್ಗೆ ಮಾತನಾಡಿದ ಸಪ್ನಾ ಚೌಧರಿ ಅದು,ನಾನು ಪ್ರಿಯಾಂಕ ಜೊತೆಗೆ ಇರೋ ಹಳೆ ಫೋಟೋವಾಗಿದೆ. ನಾನು ಯಾವ ಪಕ್ಷದ ಪರ ಪ್ರಚಾರಕ್ಕೆ ಹೋಗುತ್ತಿಲ್ಲವೆಂದರು. ಯಾವ ಆಫರ್ ಕೊಟ್ಟರೂ ಕಾಂಗ್ರೆಸ್ ಸೇರಿಲ್ಲ, ಸೇರಿಕೊಳ್ಳುವುದಿಲ್ಲವೆಂದರು ಸಪ್ನಾ ಚೌಧರಿ. ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅವರನ್ನು ಸೋಲಿಸಲು ಸಪ್ನಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ. ಸಪ್ನಾ ಈ ಎಲ್ಲಾ ಹೇಳಿಕೆಗಳನ್ನು ಅಲ್ಲೆಗೆಳೆದಿದ್ದಾರೆ. ನನ್ನ ಹೆಸರು ಬಳಸಿಕೊಳ್ಳೋದು ತಪ್ಪು ಎಂದಿದ್ದಾರೆ. ಬಿಗ್'ಬಾಸ್ ಸೀಸನ್ 11 ರ ರಿಯಾಲಿಟಿ ಶೋ ಸ್ಪರ್ಧಿ ಕೂಡ ಆಗಿದ್ದರು. ತಮ್ಮ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರು ಸಪ್ನಾ.

Edited By

Kavya shree

Reported By

Kavya shree

Comments