ದರ್ಶನ್ ಮನೆ ಮೇಲೆ ಕಲ್ಲು ತೂರಾಟ..!! ಈ ಬಗ್ಗೆ ಸುಮಲತಾ ಹೇಳಿದ್ದೇನು ಗೊತ್ತಾ..?

23 Mar 2019 5:45 PM | General
408 Report

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇತ್ತಿಚಿಗಷ್ಟೆ ನಾಮಪತ್ರ ಸಲ್ಲಿಸಿದ ಸುಮಲತಾ ಪರ ಯಶ್ ಮತ್ತು ದರ್ಶನ್ ಪ್ರಚಾರ ಮಾಡಿದ್ದರು.. ಸಮಾವೇಶದಲ್ಲಿ ಯಶ್ ಮತ್ತು ದರ್ಶನ್ ಸುಮಲತಾ ಅವರಿಗೆ ಸಾಥ್ ಕೊಟ್ಟಿದ್ದರು… ಅಷ್ಟೆ ಅಲ್ಲದೆ ಸುಮಲತಾ ಅವರನ್ನು ಬೆಂಬಲಿಸಿದ್ದಾಗಿ ಜೆಡಿಎಸ್ ಕಾರ್ಯಕರ್ತರು ದರ್ಶನ್ ಹಾಗೂ ಯಶ್ ವಿರುದ್ದ ಕೆಂಡಾಮಂಡಲವಾಗಿದ್ದರು.. ಅಷ್ಟೆ ಅಲ್ಲದೆ.. ಅವರಿಗೆ ಮಂಡ್ಯದಿಂದ ಗೋ ಬ್ಯಾಕ್ ಎಂಬ ಘೋಷಣೆಯನ್ನು ಕೂಡ ಕೂಗಿದ್ದರು.  ಆದರೆ ಇದ್ಯಾವುದಕ್ಕೂ ಜಗ್ಗದ ಯಶ್ ಮತ್ತು ದರ್ಶನ್ ಮಂಡ್ಯದಲ್ಲಿ ಸುಮಲತಾ ಪರ ಕ್ಯಾಂಪೇನ್ ಮಾಡಿದರು.. ಇದೇ ಹಿನ್ನಲೆಯಲ್ಲಿ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎನ್ನಲಾಗುತ್ತಿದೆ.

ನಟ ದರ್ಶನ್ ಅವರ ಮ್ಯಾನೇಜರ್ ಶ್ರೀನಿವಾಸ ಅವರು ಈ ಕುರಿತು ದೂರನ್ನು ದಾಖಲಿಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣವರ ಅವರು ತನಿಖೆ ಚುರುಕುಗೊಳಿಸುವಂತೆ ಎಸಿಪಿಗೆ ಸೂಚನೆ ಮಾಡಿದ್ದಾರೆ. ಈಗಾಗಲೇ ರಾಜರಾಜೇಶ್ವರಿ ನಗರ ಪೊಲೀಸರು ಹಾಗೂ ಕೆಂಗೇರಿ ಗೇಟ್ ಪೊಲೀಸ್ ಎಸಿಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಬಂಧ ಅವರ ಮನೆಯ ಸಿಸಿ ಟಿ ವಿ ಪೂಟೇಜ್ ಹಾಗೂ ಸುತ್ತಮುತ್ತಲಿನ ಪರಿಸರದ ಸಿಸಿ ಟಿವಿ ಪೂಟೇಜ್ ಪರಿಶೀಲನೆ ನಡೆಸಿ, ಅದನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಚಾಲೆಂಜಿಂಗ್ ಸ್ಟಾರ್. ಇದನ್ನೆಲ್ಲಾ ಚಾಲೆಂಜ್ ಆಗಿಯೇ ಸ್ವೀಕರಿಸುತ್ತಾರೆ ಎಂದಿದ್ದಾರೆ. ಯಶ್ ಮತ್ತು ದರ್ಶನ್ ರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಇದಕ್ಕೆಲ್ಲ ಯಶ್ ಮತ್ತು ದರ್ಶನ ತಲೆಕೆಡಿಸಿಕೊಳ್ಳಲ್ಲ, ಎಲ್ಲವನ್ನು ಚಾಲೆಂಜ್ ಎನ್ನುವ ರೀತಿಯಲ್ಲಿಯೇ ಆಗಿ ಸ್ವೀಕರಿಸುತ್ತಾರೆ, ದರ್ಶನ್ ಅವರ ಮತ್ತೊಂದು ಹೆಸರೇ ಚಾಲೆಂಜಿಂಗ್ ಸ್ಟಾರ್ ಎಂದರು ..ಒಟ್ಟಾರೆ ಸುಮಲತಾ ಪರ ಪ್ರಚಾರ ಮಾಡಿದ್ದಕ್ಕಾಗಿಯೇ ಈ ರೀತಿಯಲ್ಲೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ವಿರೋಧ ಪಕ್ಷದವರ ಕೈವಾಡವು ಕೂಡ ಇರಬಹುದು ಎಂದು ಶಂಕಿಸಲಾಗಿದೆ.

Edited By

Manjula M

Reported By

Manjula M

Comments