ಸಾಲುಮರದ ತಿಮ್ಮಕ್ಕನ ಈ ನನ್ನ ಕಸನು ನನಸಾಗಲಿಲ್ಲವಂತೆ..!! ಆಕೆ ಕಂಡ ಕನಸು ಏನು..?

23 Mar 2019 9:25 AM | General
443 Report

ಸಾಲು ಮರದ ತಿಮ್ಮಕ್ಕ… ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಪರಿಸರವನ್ನು ನೋಡುವಾಗ ಆನಂದಿಸುವಾಗ ನಮಗೆ ನೆನಪಿಗೆ ಬರುವುದು ಸಾಲು ಮರದ ತಿಮ್ಮಕ್ಕ… ಮಕ್ಕಳಿಲ್ಲದ ಆಕೆ ಮರಗಳನ್ನೆ ನೆಟ್ಟು ಅವುಗಳನ್ನು ಮಕ್ಕಳೆಂದು ಪೋಷಿಸಿ ಬೆಳೆಸಿದರು.. ಬರೀ ತಿಮ್ಮಕ್ಕ ಆಗಿದ್ದ ಆಕೆ ಸಾಲು ಮರದ ತಿಮ್ಮಕ್ಕ ಆದರು.. ಇತ್ತಿಚಿಗಷ್ಟೆ ಅವರಿಗೆ ಪದ್ಮಶ್ರೀ ಕೊಟ್ಟು ಗೌರವಿಸಲಾಯಿತು.. ಮುಂಬರುವ ಶೈಕ್ಷಣಿಕ ಸಾಲಿನಿಂದ ಪ್ರೌಢಶಾಲೆ ಮಕ್ಕಳು ಒಂದು ಗಿಡ ಬೆಳೆಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಇದೀಗ ಮನವಿ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೌಪರ್ಣಿಕಾ ಸಂಸ್ಥೆಯ ಅಂಗ ಸಂಸ್ಥೆ 'ಸೌಪರ್‌ಬೀ', 'ಸೌಪರ್ಣಿಕಾ- ಗಿಡಗಳನ್ನು ಬೆಳೆಸುವ ಯೋಜನೆ' ಸಂಬಂಧ ಸಿದ್ದಪಡಿಸಿದ್ದಂತಹ ಸಂವಾದ ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ ಪರಿಸರ ಉಳಿಸಿ, ಬೆಳೆಸುವ ಕುರಿತಂತೆ ಮಾತನಾಡಿದರು. ಬಾಲ್ಯದಿಂದಲೇ ಮಕ್ಕಳಲ್ಲಿ ಪರಿಸರ ಸ್ನೇಹಿ ಮನೋಭಾವವನ್ನು ಬೆಳೆಸಬೇಕು. ಒಬ್ಬ ವಿದ್ಯಾರ್ಥಿ ಒಂದು ಗಿಡ ನೆಡುವ ಸಂಸ್ಕೃತಿ ಬೆಳೆಸಿಕೊಂಡಲ್ಲಿ ನಾಡು ಹಸಿರುಮಯವಾಗುತ್ತದೆ.

ಮಕ್ಕಳು ಗಿಡದ ಪ್ರತಿ ಹಂತದ ಬೆಳವಣಿಗೆಯನ್ನು ಆನಂದಿಸಬೇಕು. ಗಿಡ ನೆಡುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಅಂಕಗಳನ್ನು ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ದಾರೆ.. ಒಂದು ಮಗು ಒಂದು ಗಿಡ ನೆಟ್ಟರೆ ಸಾಕು ಅದು ಎಷ್ಟೊ ಜನರಿಗೆ ನೆರಳು ನೀಡುತ್ತದೆ ಎಂದರು. ಅದೇ ಸಮಯದಲ್ಲಿ ನನ್ನ ಊರು ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬುದು ನನ್ನ ಮಹದಾಸೆ. ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಆಸ್ಪತ್ರೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.

ಆದರೆ, ಈಗಿನ ಮೈತ್ರಿ ಸರ್ಕಾರ ಈ ಬಗ್ಗೆ ಗಮನಹರಿಸಲಿಲ್ಲ. ಈ ಊರಿನ ಮಹಿಳೆಯರು ಹೆರಿಗೆಗಾಗಿ ಮಾಗಡಿಗೆ ಹೋಗಬೇಕು. ಹತ್ತಿರದಲ್ಲಿ ಎಲ್ಲೂ ಆಸ್ಪತ್ರೆಗಳಿಲ್ಲ ಎಂದು ಸಾಲುಮರದ ತಿಮ್ಮಕ್ಕ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಮೈತ್ರಿ ಸರ್ಕಾರ ಸ್ವಲ್ಪ ಗಮನಹರಿಸಬೇಕು ಎಂದು ಸಾಲು ಮರದ ತಿಮ್ಮಕ್ಕ ತಿಳಿಸಿದರು.

Edited By

Manjula M

Reported By

Manjula M

Comments