ಕ್ಯಾಂಪೆನ್ ಮಾಡಿ ಅಂದ್ರೆ, ನಿಖಿಲ್ ಮಂಡ್ಯದ ಹುಡುಗಿ ನ ಮದುವೆ ಆಗ್ತಿನಿ ಅಂತಿದ್ದಾರಲ್ಲ..!!!  ಪ್ರಚಾರದ ವೇಳೆ ಯಾಕ್ ಈ ಮಾತ್ ಬಂತು..!!!

22 Mar 2019 1:51 PM | General
1055 Report

ಲೋಕ ಸಮರವನ್ನು ಎದುರಿಸಲು ಈಗಾಗಲೇ ಎಲ್ಲಾ ಪಕ್ಷದವರು ಕ್ಯಾಂಪೆನ್ ಶುರುಮಾಡಿಕೊಂಡಿದ್ದಾರೆ.. ಆದರೆ ಮಂಡ್ಯ ಅಖಾಡದಷ್ಟು ಯಾವ ಅಖಾಡವು ಕೂಡ ಸುದ್ದಿಯಾಗಲಿಲ್ಲ.. ಒಂದು ಕಡೆ ಸುಮಲತಾ ಮತ್ತೊಂದು ಕಡೆ ನಿಖಿಲ್ ಇಬ್ಬರ ಮಧ್ಯೆಯೂ ಪ್ರಬಲ ಪೈಪೋಟಿ ಏರ್ಪಟ್ಟಿದೆ.. ಆದರೆ ನಿಖಿಲ್ ಕ್ಯಾಂಪೆನ್ ಮದ್ಯೆಯು ಕೂಡ ಮದುವೆ ಮಾತನ್ನು ಆಡಿದ್ದಾರೆ.

ಮಂಡ್ಯದಲ್ಲಿ ಹೆಣ್ಣು ಸಿಕ್ಕಿದ್ರೆ ಮದುವೆ ಆಗ್ತೀನಿ ಅಂತಾ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಮಂಡ್ಯದಲ್ಲಿ ನಡೆದ ಮೈತ್ರಿ ಪಕ್ಷಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್, ಶಾಸಕ ಸುರೇಶ್​ ಗೌಡ ಹೇಳಿಕೆಗೆ ಸ್ಪಷ್ಟನೆ ತಿಳಿಸಿದ್ದಾರೆ.. ಮನೆಯಲ್ಲಿ‌ ನನ್ನ ಮದುವೆಗೆ ಹೆಣ್ಣು ಹುಡುಕುತ್ತಿದ್ದಾರೆ. ಹೀಗಾಗಿ ನಿಖಿಲ್ ಮಂಡ್ಯ ಅಳಿಯ ಆದರೂ ಆಗಬಹುದು ಎಂದು ಸುರೇಶ್‌ಗೌಡ ಹೇಳಿದ್ದಾರೆ ಅಷ್ಟೇ. ಮಂಡ್ಯದಲ್ಲಿ ಹೆಣ್ಣು ಸಿಕ್ಕಿದ್ರೆ ಮದುವೆ ಆಗ್ತೀನಿ ಎಂದರು. ಇನ್ನು 25ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದ್ರು. ಇದೇ ವೇಳೆ ಯಾರೂ ಯಾರ ಬಗ್ಗೆಯೂ ಪರ್ಸನಲ್ ಆಗಿ ಮಾತನಾಡಬೇಡಿ, ಇದು ಒಳ್ಳೆಯದಲ್ಲ. ಜನರ ತೀರ್ಪೇ ಅಂತಿಮ ಎಂದು  ಕಾರ್ಯಕರ್ತರಿಗೆ  ನಿಖಿಲ್ ತಿಳಿಸಿದರು.. ಒಟ್ಟಿನಲ್ಲಿ ಮಂಡ್ಯದ ಅಳಿಯ ಆಗಲೂ ಕೂಡ ಸಿದ್ದ ಎಂಬ ಮಾತನ್ನು ನಿಖಿಲ್ ತಿಳಿಸಿದ್ದಾರೆ.

Edited By

Manjula M

Reported By

Manjula M

Comments