ಧಾರವಾಡದಲ್ಲೊಂದು ಹೃದಯವಿದ್ರಾವಕ ಘಟನೆ : ಹೆಂಡತಿ ಬದುಕಿ ಬರುವವರೆಗೂ ಗಂಡ ಬರಲ್ಲವೆಂದು ಪಟ್ಟು...!!!

22 Mar 2019 12:54 PM | General
224 Report

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 15 ಕ್ಕೂ ಹೆಚ್ಚು ಮಂದಿ ಸಾವನಪ್ಪಿರುವ ಘಟನೆ ಧಾರವಾಡದಲ್ಲಿ ನಡೆಯಿತು. ದಿನದಿಂದ ದಿನಕ್ಕೆ ಮೃತರ ಸಂಖ್ಯೆ ಏರಿಕೆ ಆಗುತ್ತಿದ್ದರೂ ಅವಶೇಷಗಳ ಅಡಿ ಸಿಲುಕಿ ಹಾಕಿಕೊಂಡವರ ನರಳಾಟ ಕೇಳಿ ಬರುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 58 ಗಂಟೆಗಳಿಂದ  ಜೀವ ಹಿಡಿದುಕೊಂಡು ಕಟ್ಟಡ ಅವಶೇಷಗಳ ಅಡಿ ಬದುಕಿರುವ ಪತಿ-ಪತ್ನಿ ಸಾವಿನ ಅಂಚಿನಲ್ಲೂ  ತಮ್ಮ ಪ್ರೀತಿ ಮೆರೆದಿದ್ದಾರೆ. ದಂಪತಿಗಳಿಬ್ಬರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ.

ಪತಿ ದಿಲೀಪ್ ಅವರು ಹೊರ ಬರುವ ಅವಕಾಶವಿದ್ದರೂ ದಿಲೀಪ್ ಮಾತ್ರ ತಾನು ಹೊರ ಬರುವುದಿಲ್ಲವೆಂದು ಹಠ ಹಿಡಿದಿದ್ದಾರಂತೆ.  ತನ್ನ ಪತ್ನಿ ಕಟ್ಟಡದ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದಾಳೆ, ಪ್ಲೀಸ್ ಅವಳನ್ನು ಮೊದಲು ಹೊರ ತನ್ನಿ, ಅವಳು ಇಲ್ಲದೇ ನಾನು ಇರಲಾರೆ ಎಂದು ಗೋಳಾಡುತ್ತಿದ್ದ  ಮನ ಕಲಕುವ ದೃಶ್ಯ ಧಾರವಾಡದ ಕಟ್ಟಡ ಕಾರ್ಯಾಚರಣೆ ವೇಳೆ ನಡೆದಿದೆ.ರಕ್ಷಣಾ ಪಡೆಯ ನಿರಂತರ ಕಾರ್ಯಾಚರಣೆ ವೇಳೆ  ನಿನ್ನೆ  ತಳಹದಿ ಮಹಡಿಯಲ್ಲಿ ಹಲವರು ಸಿಲುಕಿ ಹಾಕಿಕೊಂಡಿದ್ದಾರೆ.ಇದರ ಸುಳಿವು ಸಿಗುತ್ತಿದ್ದಂತೇ ರಕ್ಷಣಾ ಪಡೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಸದ್ಯ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದ ಸಂಗನಗೌಡ ಮತ್ತು ರಾಮನಗೌಡರನ್ನು ಹೊರ ತರಲಾಗಿದೆ. ಇನ್ನು ದಿಲೀಪ್ ಪತ್ನಿಯ ಕೈ-ಕಾಲು ಮುರಿದಿದೆ. ಅವರನ್ನು ಹೊರ ತರಲು ರಕ್ಷಣೆ ಪಡೆ ಇನ್ನಿಲ್ಲದ ಕಸರತ್ತು ನಡೆಸಿದೆ. ದಿಲೀಪ್ ತಾನು ಪತ್ನಿಯನ್ನು ಬಿಟ್ಟು ಹೊರ ಬರಲಾರೆ ಎಂದು ಪಟ್ಟು ಹಿಡಿದಿದ್ದಾರೆ. ರಕ್ಷಣಾ ಪಡೆಯವರು ಇಬ್ಬರನ್ನು ಸುರಕ್ಷಿತವಾಗಿ ಹೊರ ತರಲು ಹರಸಾಹಸ ಪಡುತ್ತಿದ್ದಾರೆ.

Edited By

Kavya shree

Reported By

Kavya shree

Comments