ಸುಮಲತಾ ಅಂಬರೀಶ್‌ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ..!?

21 Mar 2019 9:37 AM | General
346 Report

ಮಂಡ್ಯಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಮಂಡ್ಯದಲ್ಲಿ ಸುಮಲತಾ ಮತ್ತು ನಿಖಿಲ್ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.. ಈಗಾಗಲೇ ಇಬ್ಬರು ಕೂಡ ಪ್ರಚಾರದ ಕಾರ್ಯವನ್ನು ಶುರು ಮಾಡಿದ್ದಾರೆ.. ಬಿರಿಯೋ ಬಿಸಿಲಿನಲ್ಲಿ ಹೆಜ್ಜೆ ಹಾಕುತ್ತ ಮತ ಪ್ರಚಾರ ಮಾಡುತ್ತಿದ್ದಾರೆ.. ಒಂದು ಕಡೆ ಸುಮಲತಾ ಗೆ ಸ್ಟಾರ್ಸ್ ಗಳೆ ಪ್ರಚಾರ ಮಾಡುತ್ತಿದ್ದಾರೆ.. ಮತ್ತೊಂದು ಕಡೆ ನಿಖಿಲ್ ಜನಗಳ ಹಿಂದಿಕ್ಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ನೆನ್ನೆಯಷ್ಟೆ ನಾಮಪತ್ರ ಸಲ್ಲಿಸಿರುವ ಸುಮಲತಾ ಅವರ ಆಸ್ತಿ ಎಷ್ಟಿದೆ ಗೊತ್ತಾ..?

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ನೆನ್ನೆಯಷ್ಟೆ ನಾಮಪತ್ರ ಸಲ್ಲಿಸಿದ್ದಾರೆ.  ಮಂಡ್ಯ ಡಿಸಿ ಕಚೇರಿಗೆ ಆಗಮಿಸಿದ ಸುಮಲತಾ ಅವರು 3 ಸೆಟ್‍ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ನಿಯಮಗಳಂತೆ ನಾಮಪತ್ರದೊಂದಿಗೆ ತಮ್ಮೊಂದಿಗೆ ಇದ್ದ ಹಣ, ಆಸ್ತಿ, ಸಂಪತ್ತಿನ ವಿವರದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಸುಮಲತಾ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇದೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲವೂ ಕೂಡ ಇದೆ.. ಮಂಡ್ಯ ಜನತೆಯ ಸೇವೆ ಮಾಡಲು ಅವಕಾಶವನ್ನು ಕೇಳುತ್ತಿರುವ ಸುಮಲತಾ ಗೆ ಮಂಡ್ಯದ ಜನರು ಒಲವು ತೋರಿಸಿ ಅಧಿಕಾರದ ಚುಕ್ಕಾಣಿ ಹಿಡಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments