ರಾಕ್​ಲೈನ್ ವೆಂಕಟೇಶ್ ವಿರುದ್ಧ ದಾಖಲಾಯ್ತು ದೂರು..!! ಕಾರಣ ಏನ್ ಗೊತ್ತಾ..?

21 Mar 2019 9:23 AM | General
272 Report

ಲೋಕ ಸಮರ ಹತ್ತಿರವಾಗುತ್ತಿದ್ದಂತೆ ಎಲ್ಲರ ಎದೆಯಲ್ಲೂ ಡವ ಡವ ಶುರುವಾಗಿದೆ.. ಮಂಡ್ಯದಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದು ಸುಮಲತಾ ಮತ್ತು ನಿಖಿಲ್ ಮಧ್ಯೆ ಜಿದ್ದಾಜಿದ್ದಿ ಶುರುವಾಗಿದೆ.. ಇಬ್ಬರು ಈಗಾಗಲೇ ಪ್ರಚಾರವನ್ನು ಶುರುಮಾಡಿಕೊಂಡಿದ್ದಾರೆ.. ನೆನ್ನೆಯಷ್ಟೆ ಸುಮಲತಾ ನಾಮಪತ್ರವನ್ನು ಸಲ್ಲಿಸಿದ್ದಾರೆ.. ಇವರಿಗೆ ಚಿತ್ರರಂಗದ ದರ್ಶನ್, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಪುತ್ರ ಅಭಿಷೇಕ್ ಅಂಬರೀಶ್ ಸಾಥ್ ಕೊಟ್ಟಿದ್ದರು.

ಸುಮಲತಾ ಅಂಬರೀಶ್ ಚುನಾವಣಾ ಪ್ರಚಾರಕ್ಕೆ ಕನ್ನಡ ಚಿತ್ರೋದ್ಯಮದ ಹೆಸರನ್ನು ಬಳಸಿಕೊಂಡು ರಾಕ್ ಲೈನ್ ವೆಂಕಟೇಶ್ ಪ್ರಚಾರ ಮಾಡುತ್ತಿದ್ದಾರೆ ಅಂತಾ ಆರೋಪಿಸಿ ಅಖಂಡ ಕರ್ನಾಟಕ ಚಲನಚಿತ್ರೋದ್ಯಮ ಪರಿಷತ್‌ ರಾಜಾಧ್ಯಕ್ಷ ಟೇಶಿ ವೆಂಕಟೇಶ್‌ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ನೀಡಿದ್ದಾರೆ. ಮಾತೃ ಸಂಸ್ಥೆಯ ನಿಲುವನ್ನ ಕೇಳದೇ ಸುಮಲತ  ಅಂಬರೀಶ್ ಪರವಾಗಿ ಈ ರೀತಿಯ ಹೇಳಿಕೆ ನೀಡಿರೋದು ತಪ್ಪು. ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು ಅಂತಾ ದೂರು ನೀಡಿದ್ದಾರೆ. ಚಿತ್ರೋದ್ಯಮದ ಎಲ್ಲ ವಿಭಾಗಗಳನ್ನ ಗಣನೆಗೆ ತೆಗೆದುಕೊಳ್ಳದೆ ಬೆಂಬಲ ಕೊಡ್ತೀವಿ ಅಂದಿರೋದು ತಪ್ಪು.

ಈ ಬಗ್ಗೆ ಚಲನಚಿತ್ರ ವಾಣಿಜ್ಯಮಂಡಳಿ ಟೇಶಿ ವೆಂಕಟೇಶ್​ಗೆ ನೋಟಿಸ್​ ನೀಡಬೇಕು ಎಂದಿದ್ದಾರೆ.. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಮಾರ್ಚ್ ತಿಂಗಳು 29 ಕ್ಕೆ ಈ ಬಗ್ಗೆ ಕಾರ್ಯಕಾರಿಣಿ ಸಭೆಯನ್ನು ಕರೆದು ಚರ್ಚಿಸಲಾಗುವುದು. ಯಾವುದೇ ಸ್ಟಾರ್​ಗಳು ಕ್ಯಾಂಪೇನ್​​ನಲ್ಲಿ ಭಾಗವಹಿಸೋದು ಅವರವರ ವೈಯಕ್ತಿಕ ಅಭಿಪ್ರಾಯ ಅಂತಾ ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ ಸುಮಲತಾ ಪರ ದೊಡ್ಡ ಸ್ಟಾರ್ಸ್ ನಿಂತಿರೋದು  ದೋಸ್ತಿ ಸರ್ಕಾರಕ್ಕೆ ಶಾಕ್ ಆದಂತೆ ಆಗಿದೆ.. ಜೆಡಿಎಸ್ ನ ಭದ್ರ ಕೋಟೆಯಂತಿರುವ ಮಂಡ್ಯವನ್ನು ಸುಮಲತಾ ಎಲ್ಲಿ ತಮ್ಮ ತೆಕ್ಕೆಗೆ ತೆಗೆದುಕೊಂಡು ಬಿಡುತ್ತಾರೋ ಎಂಬ ಭಯ ಈಗಾಗಲೇ ದೋಸ್ತಿ ಸರ್ಕಾರಕ್ಕೆ ಕಾಡುವಂತಾಗಿದೆ.. ಹಾಗಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬುದು ಕೆಲವರ ವಾದವಾಗಿದೆ.

Edited By

Manjula M

Reported By

Manjula M

Comments