‘ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ’ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ಯಾಕೆ..!!

20 Mar 2019 5:57 PM | General
725 Report

ಲೋಕ ಸಮರದ ಹಿನ್ನಲೆಯಲ್ಲಿ ಮಂಡ್ಯ ಲೋಕಸಭಾ ಅಖಾಡದಷ್ಟು ಕಾವು ಹೆಚ್ಚಾಗಿಯೇ ಇದೆ..ಇಂದು ನಿಖಿಲ್ ಮತ್ತು ಸುಮಲತಾ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.  ಅಖಾಡದಲ್ಲಿ ಗೆಲುವು ಯಾರಿಗೆ ಸಿಗುತ್ತೋ ಗೊತ್ತಿಲ್ಲ.. ಆದರೆ ಪ್ರಚಾರ ಮಾತ್ರ ಬಿರುಸಿನಿಂದ ನಡೆಯುತ್ತಿದೆ.. ಬಿಸಿಲನ್ನು ಲೆಕ್ಕಿಸಿದೆ ಅಭ್ಯರ್ಥಿಗಳು ಪ್ರಚಾರಕ್ಕೆ ಇಳಿದಿದ್ದಾರೆ. ಸುಮಲತಾ ಕಡೆ ಈಗಾಗಲೆ ಸ್ಟಾರ್ ನಟರಾದ ಯಶ್ ಮತ್ತು ದರ್ಶನ್ ಪ್ರಚಾರ ಮಾಡುತ್ತಿದ್ದಾರೆ.  ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಲು ತಯಾರಿ ನಡೆಸುತ್ತಿದ್ದ ಸುಮಕ್ಕ ನ ಕಣ್ಣಲ್ಲಿ‌ ನೀರು ಇತ್ತು, ಕೇಳಿದಾಗ ನನ್ನಿಂದ ನಿಮಗಾಗಿ ತೊಂದರೆ ಆಗುತ್ತೆ. ಅವರ್ಯಾರೋ ನಿಮ್ಮ ಮನೆ ಮೇಲೆ ಐಟಿ ದಾಳಿ ಮಾಡುಸ್ತೀವಿ ಅಂತ ಹೇಳ್ತಾರೆ ಎಂದು  ಸುಮ್ಮಕ್ಕ ನಮ್ಮ ಮುಂದೆ ಅತ್ತುಬಿಟ್ಟರು.

ನಾವು ಅಂದಿನಿಂದಲೂ ಅಂಬರೀಶ್ ಕುಟುಂಬವನ್ನು ನೋಡಿಕೊಂಡು ಬಂದಿದ್ದೇವೆ.. ಆಗ ಸುಮಕ್ಕ ಕೇಳಿದ ಪ್ರಶ್ನೆಗೆ  ನಾನು ಈಗ ಉತ್ತರ ಕೊಡುತ್ತಿದ್ದೇನೆ.. ನಾವು ಸುಮಲತಾ ಅಕ್ಕಗೆ ಬೆಂಬಲ ಕೊಟ್ಟು, ಅವರ ಪರ ನಿಂತಿರುವುದನ್ನು ತಪ್ಪು ಅಂತ ಅಂದ್ಕೊಂಡಿಲ್ಲ, ಒಂದು ವೇಳೆ ಇದು ತಪ್ಪೇ ಆಂದ್ರೆ ನಾವು ಸಾಯೋವರೆಗೂ ಕೂಡ ನಾವು ಈ ತಪ್ಪನ್ನು ಮಾಡೇ ಮಾಡ್ತೀವಿ ಎಂದು ಯಶ್ ತಿಳಿಸಿದ್ದಾರೆ. ಅಷ್ಟೆ ಅಲ್ಲದೆ ನಾವೇನು ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ. ನಾವು ಸಿನಿಮಾದವ್ರು ಅಂತಾ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರಂತೆ. ನಾವೂ ಮಂಡ್ಯದ ಕಾಲುವೆ ನೀರು ಕುಡಿದು ಬೆಳದು ಬಂದವರು.

ಮಂಡ್ಯದ ಮಣ್ಣು ನಮ್ಮ ಮೈ ಕೂಡ  ಮೆತ್ತಿಕೊಂಡಿದೆ. ನಾವು‌ ಮಂಡ್ಯದ ಜೊತೆ ನಂಟನ್ನ ಬೆಳೆಸಿಕೊಂಡಿದ್ದೇವೆ.. ಪಾಲಳ್ಳಿ ಕೆರೆಯಲ್ಲಿ ಈಜಿದ್ದೇವೆ, ಮಂಡ್ಯ ಆಲೆ ಮನೆಯಲ್ಲಿ ಬೆಲ್ಲ ತಿಂದು ಬೆಳೆದಿದ್ದೇನೆ. ಇಡೀ ಕರ್ನಾಟಕಕ್ಕೆ ನಮ್ಮ ಋಣ ಇದೆ. ಮಂಡ್ಯಕ್ಕೆ ಸ್ವಲ್ಪ ಜಾಸ್ತಿಯಿದೆ ಎಂದು ರಾಕಿಂಗ್​ ಸ್ಟಾರ್​ ಯಶ್​ ಸುಮಲತಾ ಅವರ ರಾಜಕೀಯ ಸಮಾವೇಶದಲ್ಲಿ ಮಾತನಾಡಿದರು.. ಈ ಬಾರಿ ಸುಮಲತಾ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ತಿಳಿಸಿದರು. ನಾವು ನಟರಾಗಿ ಈಕೆಲಸವನ್ನು ಮಾಡುತ್ತಿಲ್ಲ, ಬದಲಿಗೆ ಅವರ ಮಕ್ಕಳಾಗಿ ಈ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

Edited By

Manjula M

Reported By

Manjula M

Comments