ಅಮ್ಮನಿಗಿರೋ ಜಾಣ್ಮೆ ಮಗನಿಗಿಲ್ಲ, ಅವರಿಗ್ಯಾಕೆ ಪ್ರಧಾನಿ ಪಟ್ಟ : ಕಾಂಗ್ರೆಸ್ ಮಾಜಿ ಸಚಿವ

18 Mar 2019 12:39 PM | General
339 Report

ಪ್ರಧಾನಿ ಹುದ್ದೆಗಾಗಿ ರಾಹುಲ್ ಗಾಂಧಿ ಮತ್ತು ಮೋದಿ ನಡುವೆ ಇದೀಗ ನೇರಾಹಣಹಣಿ ಆರಂಭವಾಗಿದೆ. ಒಂದ್ ಕಡೆ ರಾಜ್ಯ ರಾಜಕೀಯ  ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದು, ಇತ್ತ ದೆಹಲಿಯಲ್ಲೂ ಕೂಡ ಭಾರೀ ಜೋರಾಗಿಯೇ ಲೋಕಸಭೆ ಚುನಾವಣೆ ಸೌಂಡು ಮಾಡುತ್ತಿದೆ. ಅಂದಹಾಗೇ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗುವ ಮಟ್ಟಿಗೆ ಇನ್ನುಅವರ ಮನಸ್ಥಿತಿ ಬೆಳೆದಿಲ್ಲ. ಅವರು ಆ ಹುದ್ದೆಗೆ ಸೂಕ್ತರಲ್ಲ ಎಂದೇ ಕಾಂಗ್ರಸ್ ಮಾಜಿ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ

ರಾಹುಲ್ ಗಾಂಧಿ ಅವರು ಪ್ರಧಾನಿಯಾಗೋದನ್ನಾ ಅವರ ಪಕ್ಷದ ನಾಯಕರೇ ವಿರೋಧಿಸುತ್ತಿದ್ದಾರೆ.ಕಾಂಗ್ರೆಸ್ ಮಾಜಿ ಸಚಿವ ಮಾಲಕ ರೆಡ್ಡಿ ಅವರು ರಾಹುಲ್ ಗಾಂಧಿ ಅವರು  ಪ್ರಧಾನಿ ಹುದ್ದೆಗೆ ಸೂಕ್ತರಲ್ಲ. ದೇಶದ ರಕ್ಷಣೆ ಮುಖ್ಯ, ಸದ್ಯ ಇರುವ ಪರಿಸ್ಥಿತಿಯಲ್ಲಿ ಮೋದಿ ಅವರು ದೇಶದ ರಕ್ಷಣೆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ವಿಷಯದಲ್ಲಿ ನಾನು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಗೆ  ಅವರಮ್ಮ ಸೋನಿಯಾ ಗಾಂಧಿಯೇ ಮೇಲು. ಅವರ ರಾಜಕೀಯ ಚತುರತೆ, ಜಾಣ್ಮೆ ಅವರಿಗಿಲ್ಲ ಎಂದಿದ್ದಾರೆ. ರಾಹುಲ್ ಗಾಂಧಿಗೆ ರಾಜಕೀಯ ಅನುಭವ ಸಾಲದು ಎಂದಿದ್ದಾರೆ. ನಾನು ಎಂದಿಗೂ ಕಾಂಗ್ರೆಸ್ ಬಿಡುವುದಿಲ್ಲ. ಅನಾರೋಗ್ಯದಿಂದ ಚುನಾವಣೆಯಿಂದ ದೂರವಿದ್ದೇನೆ ಎಂದರು.

Edited By

Kavya shree

Reported By

Kavya shree

Comments