ನಿಖಿಲ್ ಕುಮಾರಸ್ವಾಮಿ ಬಗ್ಗೆ ಅಭಿಷೇಕ್ ಅಂಬರೀಶ್ ಹೇಳಿದ್ದೇನು ಗೊತ್ತಾ..?

16 Mar 2019 5:00 PM | General
1364 Report

ಮಂಡ್ಯ ಅಖಾಡ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬರುವವರೆಗೂ ತಣ್ಣಗೆ ಆಗುವ ಆಗೆ ಕಾಣಲ್ಲ… ಲೋಕಸಭೆಯ ಚುನಾವಣೆಯ ದಿನಾಮಕ ನಿಗಧಿಯಾದ ದಿನದಿಂದಲೂ ಕೂಡ ಬಿರುಸಿನ ಪ್ರಚಾರ ನಡೆಯುತ್ತಿದೆ.. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲ್ಲು ಅಣಿಯಾಗುತ್ತಿರುವ ಸುಮಲತಾ ಅಂಬರೀಶ್ ಗೆ ಮಗ ಅಭಿಷೇಕ್ ಸಾಥ್ ನೀಡುತ್ತಿದ್ದಾರೆ.

ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ರಂಗು ಪಡೆದುಕೊಳ್ಳುತ್ತಿದ್ದು, ಅಂಬರೀಶ್ ಪುತ್ರ ಅಭಿಷೇಕ್ ಮತ್ತು ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ ನಡೆಸಿದರು. ಮೈಸೂರಿನ ಕೆ.ಆರ್. ನಗರದಲ್ಲಿ ಇಂದು ನ ಮಾತನಾಡಿದ ಅವರು, ನಾನು ನಿಖಿಲ್ ತುಂಬಾ ಒಳ್ಳೆಯ ಸ್ನೇಹಿತರು. ಆದರೆ ರಾಜಕೀಯದಲ್ಲಿ ಅವರು ಬೇರೆ ಕಡೆ ನಾವು ಬೇರೆ ಕಡೆ ಅಷ್ಟೇ. ಆದರೆ ನಮ್ಮ ಸ್ನೇಹ ಈಗಲೂ ಕೂಡ ತುಂಬಾ ಚೆನ್ನಾಗಿದೆ ಮುಂದೇಯೂ ಕೂಡ ಚೆನ್ನಾಗಿಯೇ ಇರುತ್ತೆ ಎಂದು ಅಂಬರೀಶ್ ಪುತ್ರ ಅಭಿಷೇಕ್ ತಿಳಿಸಿದ್ದಾರೆ. ತಾಯಿ ಜೊತೆಗೆ ಪ್ರಚಾರಕ್ಕೆ ಆಗಮಿಸಿದ ಅಭಿಷೇಕ್ ಅಮ್ಮನ ಗೆಲುವಿಗಾಗಿ ಸಾಥ್ ನೀಡಿ ಎಂದು ಅಭಿಮಾನಿಗಳಲ್ಲಿ ಕೈ ಮುಗಿದು ಕೇಳಿಕೊಂಡರು.. ಯಾರು ಏನೆ ಮಾಡಿದರು ಕೂಡ ಮಂಡ್ಯದ ಜನರ ಒಲವು ಯಾರ ಕಡೆ ಇದೆಯೋ ಗೊತ್ತಿಲ್ಲ.. ಯಾರು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments

Cancel
Done