ಸ್ಯಾಂಡಲ್’ವುಡ್ ನ ಖ್ಯಾತ ನಟಿ ಈಗ 'ಮಾನಸಿಕ ಅಸ್ವಸ್ಥೆ' ಅಂತೆ..!! ಜಗ್ಗೇಶ್ ಈಗಂತ ಹೇಳಿದ್ದು ಯಾರಿಗೆ..?

16 Mar 2019 9:39 AM | General
96 Report

ಸ್ಯಾಂಡಲ್ ವುಡ್ ನಲ್ಲಿ ಟ್ವೀಟ್ ವಾರ್ ಕಾಮನ್ ಆಗಿಬಿಟ್ಟಿದೆ.. ಅವರವರೆ ಕಾಲೆಳೆದುಕೊಳ್ಳುತ್ತಿರುತ್ತಾರೆ.. ಸ್ಯಾಂಡಲ್ ವುಡ್ ನಲ್ಲಿ ಅಷ್ಟೆ ಅಲ್ಲದೆ ಎಲ್ಲಾ ರಂಗದಲ್ಲೂ ಕೂಡ ಈ ಟ್ವೀಟ್ ಸಮರ ನಡೆಯುತ್ತಲೆ ಇರುತ್ತದೆ... ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿವೆ… ಮಾಜಿ ಸಂಸದೆ ನಟಿ ರಮ್ಯ ಯಾವಾಗಲೂ ಪ್ರಧಾನಿ ಮೋದಿಯವರನ್ನು ಟೀಕಿಸಿ ಟ್ವೀಟ್ ಮಾಡುತ್ತಲೆ ಇರುತ್ತಾರೆ… ಈ ಬಗ್ಗೆ ಜಗ್ಗೇಶ್ ಪ್ರತಿಕ್ರಿಯಿಸಿದ್ದು ರಮ್ಯಾ ಮತ್ತು ಜಗ್ಗೇಶ್  ಮಧ್ಯೆ ಟ್ವೀಟ್ ಸಮರ ಪ್ರಾರಂಭವಾಗಿದೆ.

ರಮ್ಯಾರ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ 'ಆಕೆ ಮಾನಸಿಕ ಅಸ್ವಸ್ಥೆ' ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮಿಡೀಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. 'ಈ ಸಲ ಮತದಾನಕ್ಕೆ ಅರ್ಹರಾಗಿರುವ ಎಲ್ಲರೂ ಹೆಸರನ್ನು ನೋಂದಾಯಿಸಿಕೊಳ್ಳಿ. ಕಾಲ ಸರಿಯುತ್ತಿದೆ. ಬೇಗ ಹೆಸರು ನೋಂದಾಯಿಸಿಕೊಳ್ಳಿ. ಮತದಾನ ಮಾಡಿ. ಭವಿಷ್ಯ ನಿಮ್ಮ ಕೈಯಲ್ಲಿದೆ' ಎಂದು ಚಿತ್ರನಟಿ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಚಿತ್ರನಟ ಜಗ್ಗೇಶ್, 'ಬಾಳುವವರಿಗೆ ಒಂದೆ ಮಾತು! ಬಾಳೆಗೆ ಒಂದೆ ಗೊನೆ! ನಮ್ಮ ಹಳ್ಳಿಯ ಗಾದೆ! ಆಕೆ ಮಾನಸಿಕ ಅಸ್ವಸ್ಥೆ! ಯಾರಿಗೆ ವಂಶವಾಹಿನಿ ಅರಿವಿರುತ್ತದೆಯೋ ಅವರು ಜವಾಬ್ದಾರಿ ಮನುಷ್ಯರು! ಮನುಷ್ಯರಿಗೆ ಬುದ್ಧಿ ಹೇಳಬಹುದು, ಮೃಗಕ್ಕೆ ಅಲ್ಲಾ!' ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಮತ್ತೆ ರೀಟ್ವೀಟ್ ಮಾಡಿರುವ ರಮ್ಯಾ'ಕಂಡ ಕಂಡೋರಿಗೆ ಮಾನಸಿಕ ಅಸ್ವಸ್ಥರು ಅನ್ನೋ ಕೊಳಕು ಮನಸ್ಸಿನ ಕೊಚ್ಚೆ ಬಾಯಿಯ ಉತ್ತರಕುಮಾರ ಒಬ್ಬನನ್ನ ಇವತ್ತಿಂದ ನಾವು ಪ್ರೀತಿಯಿಂದ 'ಹುಚ್ಚೇಶ' ಅಂತ ನಾಮಕರಣ ಮಾಡ್ತೀದೀವಿ. ಹೆಸರು ಇಷ್ಟ ಆದ್ರೆ ಶೇರ್ ಮಾಡಿ' ಎಂದು ಟ್ವೀಟ್ ಮಾಡಿದ್ದಾರೆ… ರಮ್ಯಾ ಪ್ರಧಾನಿ ವಿರುದ್ದ ಸಾಕಷ್ಟು ಟ್ವೀಟ್ ಗಳನ್ನು ಮಾಡಿ ಸಾಕಷ್ಟು ಬಾರಿ ನೆಟ್ಟಿಗರ ಕೋಪಕ್ಕೆ ತುತ್ತಾಗುತ್ತಿದ್ದಾರೆ.. ಸ್ಯಾಂಡಲ್ ವುಡ್ ಪದ್ಮಾವತಿ ಯ ವಿರುದ್ದ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿವೆ.

Edited By

Manjula M

Reported By

Manjula M

Comments