ರಮ್ಯಾಗೆ ಟ್ವೀಟ್’ನಲ್ಲಿಯೇ ನೀರಿಳಿಸಿದ ನವರಸ ನಾಯಕ ಜಗ್ಗೇಶ್..!!

15 Mar 2019 1:54 PM | General
1542 Report

ಯಾವಾಗಲೂ ಒಂದಿಲ್ಲೊಂದು ವಿಚಾರಕ್ಕಾಗಿಯೇ ಸ್ಯಾಂಡಲ್ ವುಡ್ ಪದ್ಮಾವತಿ ಟೀಕೆಗೆ ಗುರಿಯಾಗುತ್ತಿರುತ್ತಾರೆ.. ಯಾವಾಗಲು ಪ್ರಧಾನಿ ಮೋಡಿಯವರ ಕಾಲೆಳೆಯುತ್ತಲೆ ಬಂದಿರುವ ರಮ್ಯಾ ನೆಟ್ಟಿಗರು ಯಾವಾಗಲೂ ತರಾಟೆಗೆ ತೆಗೆದುಕೊಳ್ಳುತ್ತಾರೆ.. ಯಾವಾಗಲೂ ಕೂಡ ಮೋದಿ ಅಭಿಮಾನಿಗಳನ್ನ ಕೆಣಕುವಂತಹ ಟ್ವೀಟ್ ಗಳನ್ನು ಹಾಕುತ್ತಿರುತ್ತಾರೆ.. ಇದರಿಂದ ಮೋದಿ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿರುತ್ತಾರೆ..  ಇದೀಗ ರಮ್ಯ ಟ್ವಿಟ್ ಗೆ ನವರಸ ನಾಯಕ ಜಗ್ಗೇಶ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮತ್ತು ಮೋದಿ ವಿರುದ್ದ ಸಾಕಷ್ಟು ಟ್ವೀಟ್’ಗಳನ್ನು ಮಾಡುತ್ತಲೇ ಇರುತ್ತಾರೆ.. ಹಿಂದೊಮ್ಮೆ ಮೋದಿ ಬೆಂಬಲಿಗರು ಮೂರ್ಖರು ಎಂದಿದ್ದರು ರಮ್ಯಾ..ಆದರೆ ಇದೀಗ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ಮಂಡ್ಯದ ಮಾಜಿ ಸಂಸದೆ ಮತ್ತು ನಟಿ ರಮ್ಯ ವಿರುದ್ದ ಇದೀಗ ಜಗ್ಗೇಶ್ ಟ್ವೀಟ್ ನಲ್ಲಿಯೇ ಕಿಡಿಕಾರಿದ್ದಾರೆ . ಮಂಡ್ಯದ ಮಾಜಿ ಸಂಸದೆಯಾದ ನೀವು ಮತದಾನವನ್ನೆ ಮಾಡಿಲ್ಲ.. ಮೋದಿ ಅವರನ್ನು ಟೀಕಿಸುವ ಮೊದಲು ಈ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದಿದ್ದಾರೆ. ಜಗ್ಗೇಶ್ ಮಾಡಿರುವ ಟ್ವೀಟ್ ಈ ಕೆಳಕಂಡಂತೆ ಇದೆ ನೀವೆ ನೋಡಿ.

Edited By

Manjula M

Reported By

Manjula M

Comments