ಕೊನೆಗೂ ಗೃಹಪ್ರವೇಶ ಮಾಡಿದ್ದಾರೆ ನಟಿ ಸುಮಲತಾ : ಆ ಲಕ್ಕಿ ಹೌಸ್ ಯಾವುದು ಗೊತ್ತಾ..?!!!

13 Mar 2019 9:04 AM | General
198 Report

ಲೋಕಸಭೆ  ಚುನಾವಣೆ ಅಖಾಡಕ್ಕೆ ಧುಮುಕಿರುವ ನಟಿ ಸುಮಲತಾ ಮಂಡ್ಯದಲ್ಲಿ ವಾಸ್ತವ್ಯ ಹೂಡಲು ಸಜ್ಜಾಗಿದ್ದಾರೆ. ಈಗಾಗಲೇ ಮಂಡ್ಯದ ಕೆಲವು ಕಡೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಸದ್ಯ ಕರ್ನಾಟಕದಲ್ಲಿ ಹಾಟ್ ಸ್ಪಾಟ್ ಆಗಿರುವ ಮಂಡ್ಯ  ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿದೆ. ಇದೀಗ ಸ್ಟಾರ್’ಗಳ ಆಗಮನದಿಂದ ಜಿಲ್ಲೆ  ಮತ್ತಷ್ಟುರಾಜಕೀಯ ರಣರಂಗವಾಗಿದೆ. ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೇ  ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಸದ್ಯ ಮಂಡ್ಯದಲ್ಲಿ ನಟಿ ಸುಮಲತಾ ಉಳಿದುಕೊಳ್ಳಲು, ಅಭಿಮಾನಿಗಳನ್ನು ಭೇಟಿ ಮಾಡಲು, ಮನೆಯೊಂದನ್ನು ಖರೀದಿಸ ಬೇಕಾಗಿದೆ. ಈ ಬಗ್ಗೆ ಯೋಚಿಸಿ ಸುಮಲತಾ ಲಕ್ಕಿ ಮನೆಯೊಂದನ್ನು ತೆಗದುಕೊಂಡಿದ್ದಾರೆ. ಆ ಲಕ್ಕಿ ಮನೆ ಯಾವುದು ಗೊತ್ತಾ…?

ಮಂಡ್ಯದ ಚಾಮುಂಡೇಶ್ವರಿ ನಗರದ 3ನೇ ಕ್ರಾಸ್ ನಲ್ಲಿರುವ ಮನೆಗೆ ಗೃಹ  ಪ್ರವೇಶ ಮಾಡಲು ಸುಮಲತಾ ನಿರ್ಧರಿಸಿದ್ದಾರಂತೆ. ಈ ಹಿಂದೆ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಕೂಡ ಅದೇ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಅದು ಅವರಿಗೆ ಲಕ್ಕಿ ಮನೆಯಾಗಿತ್ತು. ಈ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ ಅಂಬರೀಶ್ ಮಂಡ್ಯ ರಾಜಕೀಯದಲ್ಲಿ ಯಶಸ್ಸು ಕಂಡಿದ್ದರು.ಈಗ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ ಅಂಬಿ ಪತ್ನಿ.  ಅದೇ ಲಕ್ಕಿ ಮನೆಗೆ ಸುಮಲತಾ ಅಂಬರೀಶ್ ಶಿಫ್ಟ್ ಆಗಲಿದ್ದಾರೆ. ಮನೆ ಬಾಡಿಗೆ ಪಡೆಯುವ ಬಗ್ಗೆ ನಿನ್ನೆ ರಾತ್ರಿ ಮನೆಯ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ. ಸುಮಲತಾ ಅವರಿಗೆ ಮನೆ ಬಾಡಿಗೆಗೆ ನೀಡಲು ಮಾಲೀಕರು ಕೂಡ ಒಪ್ಪಿಗೆ ನೀಡಿದ್ದಾರೆ. ವಾರದೊಳಗೆ ಸುಮಲತಾ ಅವರು ಬಾಡಿಗೆ ಮನೆಗೆ ಶಿಫ್ಟ್ ಆಗಲಿದ್ದಾರೆ. ಅಂಬರೀಶ್ ಗೆ ತಾವು ಹೋದ ಸ್ಥಳಗಳಲ್ಲಿ ಕಂಫರ್ಟ್ ಆಗಿರ ಬೇಕು ಎಂದು ಬಯಸುವವರು. ಅದೇ ರೀತಿ ಮಂಡ್ಯ ರಾಜಕಾರಣಕ್ಕೆ ಧುಮುಕಿದಾಗ  ಆ ಮನೆಯಿಂದಲೇ ರಾಜಕೀಯ ಹೋರಾಟ ಆರಂಭವಾಗಿತ್ತಂತೆ. ಒಟ್ಟಾರೆ ಸುಮಲತಾ ಕೂಡ  ಅದೇ ಲಕ್ಕಿ ಮನೆಗೆ ಹೋಗಲು ನಿರ್ಧಾರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅದೇ ಮನೆಯಲ್ಲಿ ಚುನಾವಣೆ ಮುಗಿಯೋ ತನಕ ವಾಸಿಸಲಿದ್ದಾರೆಂಬ ಮಾಹಿತಿ ಇದೆ. ಆ ಮನೆ ಮೂಲಕ ಸುಮಲತಾ ರಾಜಕೀಯ ಕಾರ್ಯಗಳನ್ನು ಆರಂಭಿಸಿದ್ದಾರೆ.  ಮಂಡ್ಯದಲ್ಲಿ ಈಗಾಗಲೇ ಬಿರುಸಿನ ಪ್ರಚಾರ ಕೈಗೊಂಡಿರುವ ರೆಬೆಲ್ ಪತ್ನಿಗೆ ಕ್ಷೇತ್ರದ ಜನ ಒಲವು ತೋರಿದ್ದಾರೆ. ಈ ನಡುವೆ ಜೆಡಿಎಸ್’ನಲ್ಲಿ ಮತ್ತೆ ಗೊಂದಲ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೊಮ್ಮೆ ಸುಮಲತಾ ಪರ ಜನ ವಾಲಿದರೇ ಜೆಡಿಎಸ್ ಗೆ ಈ ಬಾರಿ ಮುಖಭಂಗವಾಗೋದಂತೂ ಖಂಡಿತಾ. ಇಲ್ಲವೇ ಕುಟುಂಬ ರಾಜಕಾರಣ ಕಳಂಕವನ್ನು ತೊಡೆದು ಹಾಕಲು ನಿಖಿಲ್ ಮಂಡ್ಯದಿಂದ ಹಿಂದೆ ಸರಿಯುತ್ತಾರೆ ಎಂಬ ಭಾರೀ ಅನುಮಾನಗಳು ದಟ್ಟವಾಗ್ತಿರೋದಂತೂ ನಿಜ.

Edited By

Kavya shree

Reported By

Kavya shree

Comments