ನಿಖಿಲ್ ಕುಮಾರಸ್ವಾಮಿ ರಾಜಕೀಯ ಸ್ಪರ್ಧೆಗೆ ಎಸ್.ಎಂ ಕೃಷ್ಣ ಪ್ರತಿಕ್ರಿಯೆ..?

11 Mar 2019 5:28 PM | General
257 Report

ಲೋಕಸಭಾ ಚುನಾವಣೆ ರಂಗೇರುತ್ತಿದೆ. ಕರ್ನಾಟಕದಲ್ಲಿ  ಎಲೆಕ್ಷನ್ ಕಾವು ಜೋರಾಗುತ್ತಿದೆ. ಅಂದಹಾಗೇ ಪಕ್ಷದ ನಾಯಕರು ದಿನಕ್ಕೊಂದು ರೀತಿ ಹೇಳಿಕೆಗಳನ್ನು ನೀಡುತ್ತಾ  ಚುನಾವಣ ಕಣವನ್ನು ಮತ್ತಷ್ಟು ರಂಗೇರಿಸುತ್ತಿದ್ದಾರೆ.  ಇದರ ಮಧ್ಯೆ ನಿಖಿಲ್ ಕುಮಾರ ಸ್ವಾಮಿ ಅವರು ಲೋಕಸಭಾ ಚುನಾವಣಾ  ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ಕಡೆ ದೋಸ್ತಿ ಸರ್ಕಾರದಿಂದಲೇ ಅಭ್ಯರ್ಥಿಗಳಿಗೆ ಟಿಕೆಟ್ ಕೊಡೋಕೆ ಗೊಂದಲವಿದೆ. ಅದರ ಮಧ್ಯೆ ನಿಖಿಲ್ ಕುಮಾರಸ್ವಾಮಿ ಪರ ಬ್ಯಾಟಿಂಗ್ ಬೀಸಿದ ಮಾಜಿ ಮುಖ್ಯಮಂತ್ರಿ ಏನ್ ಹೇಳಿದ್ದಾರೆ ಗೊತ್ತಾ..?

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪರೋಕ್ಷವಾಗಿ ಸಮ್ಮತಿ ನೀಡಿದ್ದಾರೆ.  ಅಂದಹಾಗೇ ನಿಖಿಲ್ ಅವರ ರಾಜಕೀಯ ಎಂಟ್ರಿ ಬಗ್ಗೆ  ಪ್ರತಿಕ್ರಿಯೆ ನೀಡಿದ ಅವರು 25 ವರ್ಷ ವಯಸ್ಸಾಗಿರುವವರು ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಅವರು ಸ್ಪರ್ಧೆ ಮಾಡೋದಕ್ಕೆ ಯಾವುದೇ ವಿರೋಧವಿಲ್ಲ. ಸ್ಪರ್ಧಿಸಿದಾಗ ಜನ  ಯೋಚಿಸುತ್ತಾರೆ. ಬುದ್ಧಿವಂತಿಕೆಯಿಂದ ಆಯ್ಕೆ ಮಾಡುತ್ತಾರೆ. ನಮ್ಮ ಅಭ್ಯರ್ಥಿನಾ. ನಮ್ಮ ಅಭ್ಯರ್ಥಿನಾ ಅಂತಾ ಜನ ನಿರ್ಧರಿಸುತ್ತಾರೆ. ಜತೆಗೆ ಕುಟುಂಬ ರಾಜಕಾರಣ ಮಾಡಬಾರದು ಅಂತಾ ಏನಾದ್ರೂ ಕಾನೂನಿದ್ಯಾ, ರಾಜ್ಯಾಂಗದಲ್ಲಿ ನಿರ್ಬಂಧವೇನಿಲ್ಲ. ದೇವೇಗೌಡರ ಕುಟುಂಬ ವರ್ಗದವರು ಐಆರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಿಲ್ಲ ಅಂತ ಎಸ್.ಎಂ.ಕೃಷ್ಣ ಹೇಳಿದ್ದಾರೆ.

Edited By

Kavya shree

Reported By

Kavya shree

Comments