ಸುಮಲತಾ ವಿರುದ್ಧ ರೇವಣ್ಣ ಹೇಳಿಕೆಗೆ ನಿಖಿಲ್ ರಿಯಾಕ್ಷನ್...? ಹೇಗಿತ್ತು ಗೊತ್ತಾ...?!!!

09 Mar 2019 4:25 PM | General
565 Report

ಈಗಾಗಲೇ ಮಂಡ್ಯ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗುತ್ತಿದೆ. ಕ್ಯಾಂಪೇನ್ ಮಾಡಲು ಸ್ಟಾರ್ ನಟರಾದಿಯಾಗಿ ರಾಜಕೀಯ ನಾಯಕರು ಅಖಾಡಕ್ಕೆ ಧುಮುಕುತ್ತಿದ್ದಾರೆ. ಮತ್ತೊಂದು ಕಡೆ ಟಿಕೆಟ್, ಅಭ್ಯರ್ಥಿ, ಕ್ಷೇತ್ರ ಅಂತಾ ನಾನಾ ಗೊಂದಲದ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದರ ಮಧ್ಯೆ ಜೆಡಿಎಸ್'ನ ಪಟ್ಟದ ಕ್ಷೇತ್ರ ಮಂಡ್ಯದ ಜನರೇ ಜೆಡಿಎಸ್ ನಾಯಕರ ವಿರುದ್ಧ ತಿರುಗಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಿಸಿ ಬಿಸಿ ಮಧ್ಯೆಯೇ ಜೆಡಿಎಸ್ ಮುಖಂಡರು ನಾಲಿಗೆ ಹರಿಬಿಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜೆಡಿಎಸ್ ಯುವರಾಜ ನಿಖಿಲ್, ರೇವಣ್ಣ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ...? ಗೊತ್ತಾ..?

ಅಂದಹಾಗೇ ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶದ ಬಗ್ಗೆ ಜೆಡಿಎಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದಿನಕ್ಕೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ವಿವಾದಗಳನ್ನು ತಲೆ ಮೇಲೆ ಎಳೆದುಕೊಳ್ಳುತ್ತಿದ್ದಾರೆ ಜೆಡಿಎಸ್ ಪಕ್ಷದ ಮುಖಂಡರು.  ಲೋಕಪಯೋಗಿ ಸಚಿವ  ರೇವಣ್ಣ ಅವರು ಸುಮಲತಾ ವಿರುದ್ಧ ಹೇಳಿಕೆಗೆ ಮಂಡ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಜೆಡಿಎಸ್ ನಾಯಕರಲ್ಲೇ, ಅದರಲ್ಲೂ ಮನೆಯ ಸದಸ್ಯರಲ್ಲೇ ರೇವಣ್ಣ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಂದಹಾಗೇ ಸುಮಲತಾ ಅಂಬರೀಶ್ ಅವರು ರಾಜಕೀಯ ಎಂಟ್ರಿಯ ಬಗ್ಗೆ ರೇವಣ್ಣ ಅವರು, ಇನ್ನು ಗಂಡ ಸತ್ತು ಆರು ತಿಂಗಳಾಗಿಲ್ಲಾ, ಸುಮಲತಾ ಅವರಿಗೆ ಇದೆಲ್ಲಾ ಬೇಕಿತ್ತಾ ..? ಕುಟುಂಬ ರಾಜಕಾರಣ. ರಾಜಕೀಯದಲ್ಲಿ ಸಹಜ ಎಂದು ಸುಮಲತಾ ಅಂಬರೀಶ್ ಬಗ್ಗೆ ಹೆಚ್ಡಿ ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರೇವಣ್ಣ ಅವರ ಈ ಮಾತಿಗೆ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೇವಣ್ಣ ಯಾವ ಅರ್ಥದಲ್ಲಿಈ ಮಾತು  ಹೇಳಿದ್ದಾರೆ ನಿಜವಾಗಿಯೂ ನನಗೆ ಗೊತ್ತಿಲ್ಲ. ಅವರ ಹೇಳಿಕೆ ವಿರುದ್ಧ ನನಗೂ ಅಸಮಧಾನವಿದೆ ಎಂದಿದ್ದಾರೆ. ನನಗೆ ನನ್ನ ಅಪ್ಪ – ಅಮ್ಮ , ಕುಟುಂಬ ಒಳ್ಳೆಯ ನಡತೆಯನ್ನು ಹೇಳಿಕೊಟ್ಟಿದೆ. ನನ್ನ ಕುಟುಂಬ ಮಹಿಳೆಯರಿಗೆ ಗೌರವ ಕೊಡೋದನ್ನು ಹೇಳಿಕೊಟ್ಟಿದೆ. ಒಳ್ಳೆ ಸಂಸ್ಕಾರ ಕಲಿಸಿದೆ ಎಂದಿದ್ದಾರೆ. ರೇವಣ್ಣ ವಿರುದ್ಧ ನಿಖಿಲ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By

Kavya shree

Reported By

Kavya shree

Comments