ಲೋಕಸಭೆ ಚುನಾವಣೆಗೂ ಮುನ್ನವೇ ಪ್ರಧಾನಿ ಭೇಟಿ ಮಾಡಿದ ಮುಖ್ಯಮಂತ್ರಿ ಹೆಚ್ಡಿಕೆ..!!!

09 Mar 2019 3:07 PM | General
192 Report

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ರಾಜ್ಯ ರಾಜಕಾರಣ ಕಾವೇರುತ್ತಿದೆ. ಒಂದು ಕಡೆ ನೆತ್ತಿಯನ್ನು ಸುಡುವ ಧಗಧಗ ಬೇಸಿಗೆ, ಮತ್ತೊಂದು ಕಡೆ ಸ್ಟ್ರಾಂಗ್ ರಾಜಕಾರಣದ ಫೈಯರಿಂಗ್. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಫೇವರೀಟ್ ಕ್ಷೇತ್ರ ಜೆಡಿಎಸ್ ಭದ್ರ ಕೋಟೆ ಮಂಡ್ಯವನ್ನು ಪಡೆದುಕೊಳ್ಳುವಲ್ಲಿ ಜೆಡಿಎಸ್’ಗಿದು ಅಳಿವು-ಉಳಿವಿನ ಪ್ರಶ್ನೆ.  ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ಪ್ರಧಾನಿ ಬಳಿ ಬಾಕಿಯಿರುವ ಅನುದಾನವನ್ನು ಬಿಡುಗಡೆ ಮಾಡುವಂತೇ ಕೋರಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ವೇತನ ಮತ್ತು ಸಾಮಗ್ರಿ, ಅನುದಾನವನ್ನು ರಿಲೀಸ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಎಎನ್ಐ ಮಾಹಿತಿಯಿಂದ ತಿಳಿದು ಬಂದಿದೆ.ರಾಜ್ಯದಲ್ಲಿ ಅತೀವೃಷ್ಟಿ, ಅನಾವೃಷ್ಟಿ ಆಗಿದ್ದರ ಪರಿಣಾಮ ಈಗಾಗಲೇ ಜನ ತತ್ತರಿಸಿ ಹೋಗಿದ್ದಾರೆ. ನಷ್ಟದಲ್ಲಿದೆ ರಾಜ್ಯ.32,335 ಕೋಟಿ ರೂ. ರಾಜ್ಯ ಬೊಕ್ಕಸಕ್ಕೆ ನಷ್ಟವಾಗಿದೆ. ಇದರಿಂದಾಗಿ ರಾಜ್ಯದ ಆರ್ಥಿಕತೆಯ ಮೇಲೆ ನಕರಾತ್ನಕವಾಗಿ ಪರಿಣಾಮ ಬೀರಿದೆ ಎಂದು ಪ್ರಧಾನಿ ಬಳಿ ಹೇಳಿಕೊಂಡಿದ್ದಾರೆಂಬ ಮಾಹಿತಿ ಇದೆ. ಈ ಉದ್ದೇಶದಿಂದ ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಿದ್ರೆ ಸರ್ಕಾರ ಆಮೂಲಕ ಬಡವರಿಗೆ ಸಹಾಯಕವಾಗುವಂತೇ ಯೋಜನೆಯಲ್ಲಿ ಅದನ್ನು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments