ಮಹಿಳಾ ದಿನಾಚರಣೆಗೆ ಗೂಗಲ್ ಡೂಡಲ್ ವಿಶೇಷ ಗೌರವ : ಪ್ರಸಿದ್ಧ ಮಹಿಳೆಯರ ಸ್ಫೂರ್ತಿದಾಯಕ ನುಡಿ ಮೂಲಕ 'ಸ್ತ್ರೀ' ನಮನ!

08 Mar 2019 11:14 AM | General
219 Report

ಸ್ತ್ರೀ ಎಂದರೆ ಅಷ್ಟೇ ಸಾಕೇ…ಬೇರೆ ನಿನಗೆ ಹೆಸರು ಬೇಕೆ…. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.  ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ ಜೀವನ ಸಂಪೂರ್ಣವಾಗುವುದೇ ಒಂದು ಹೆಣ್ಣಿನಿಂದ. ಮಹಿಳಾ ದಿನಾಚರಣೆಗೆ ವಿಶೇಷವಾಗಿ ಗೂಗಲ್ ಡೂಡಲ್ ವಿಭಿನ್ನ ರೀತಿಯಲ್ಲಿ ತನ್ನ ಗೌರವನ್ನು ಸೂಚಿಸಿದೆ. ಜಗತ್ತಿನ ನಾನಾ ಭಾಗಗಳ 13 ಪ್ರಸಿದ್ಧ ಮಹಿಳೆಯರ  ಸ್ಫೂರ್ತಿದಾಯಕ ಕೋಟ್’ಗಳನ್ನು ಸಂಗ್ರಹಿಸಿ ಪ್ರಕಟಿಸುವುದರ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ.

ಅಂದಹಾಗೇ ಇದರಲ್ಲಿ ದೇಶ-ವಿದೇಶದ ಸ್ತ್ರೀಯರು ಹೇಳಿರುವ ಸೂರ್ತಿದಾಯಕ ಕೊಟೇಶನ್ಗಳಿದ್ದು, ಮಹಿಳಾ ಸಬಲೀಕರಣದ  ಕುರಿತಾದ ಹೇಳಿಕೆಗಳಾಗಿವೆ.  ಮೊದಲ ಮಹಿಳಾ ದಿನಾಚರಣೆಯನ್ನು 1909 ರ ಫೆ. 28 ರಂದು ನ್ಯೂರ್ಯಾಕ್ನಲ್ಲಿ  ಆಚರಿಸಲಾಯಿತು. ಆ ನಂತರ 2 ವರ್ಷಗಳ ಬಳಿಕ ವರ್ಷಕ್ಕೊಮ್ಮೆ ಆಚರಿಸಬೇಕೆಂದು  ಮಹಿಳಾ ಸಮ್ಮೇಳನದಲ್ಲಿ ತಿಳಿಸಲಾಯಿತು. ಆದರೆ ಮಹಿಳಾ ದಿನವನ್ನು ಅಧಿಕೃತವಾಗಿ ಆಚರಣೆಗೆ ಜಾರಿಗೆ ತಂದಿದ್ದು 1917ರ ಮಾರ್ಚ್​ 8ರಂದು.ಗೂಗಲ್ ಡೂಡಲ್ ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸುತ್ತಿದೆ. ಜಗತ್ತಿನ ಪ್ರತಿಭಾವಂತ ಮಹಿಳೆಯರಿಯಿಂದ ಈ ಡೂಡಲ್ ಸಿದ್ಧಪಡಿಸಿದೆ. ಗೂಗಲ್ ಡೂಡಲ್ ನಲ್ಲಿ 11 ಭಾಷೆಗಳಲ್ಲಿ ಮಹಿಳೆ ಎಂಬ ಪದವನ್ನು ಬರೆಯಲಾಗಿದೆ. ಭಾರತದ ಹಿಂದಿ, ಬೆಂಗಾಲಿ ಸೇರಿದಂತೇ 11 ಭಾಷೆಗಳಲ್ಲಿ ಸ್ತ್ರೀಯನ್ನು ಉಲ್ಲೇಖಿಸಲಾಗಿದೆ. ಇದನ್ನು ಕ್ಲಿಕ್ ಮಾಡಿದ್ರೆ ಸ್ಲೈಡ್ಗಳು ತೆರೆದುಕೊಳ್ಳಲಿವೆ. ಮತ್ತೊಂದು ವಿಶೇಷತೆ ಏನಪ್ಪಾ ಅಂದ್ರೆ ಆ ಸ್ಲೈಡ್ಗಳಲ್ಲಿ ಭಾರತದ ಮೇರಿಕೋಂ, ಐಎಫ್ಎಸ್ ಅಧಿಕಾರಿಯಾಗಿರುವ  ಬೆನೋ ಜೆಫೈನ್  ಇಬ್ಬರ ಕೋಟ್ಗಳು ಕೂಡ ಇವೆ.

Edited By

Kavya shree

Reported By

Kavya shree

Comments