ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನೆ ಜಪ್ತಿ..!!!

06 Mar 2019 5:05 PM | General
140 Report

ಕನ್ನಡ ಪರ ಹೋರಾಟ ಎಂದರೆ ಥಟ್ಟನೆ ನೆನಪಾಗೋದು ವಾಟಾಳ್ ನಾಗರಾಜ್.. ವಿಭಿನ್ನವಾಗಿ ಪ್ರತಿಭಟನೆ ಮಾಡುವುದರ ಮೂಲಕ  ಗಮನ ಸೆಳೆಯುತ್ತಿದ್ದ ವಾಟಾಳ್ ನಾಗರಾಜ್ ಅವರು ಪುಲ್ವಾಮಾ ದಾಳಿಯಲ್ಲಿಯೂ ಸುದ್ದಿಯಾಗಿದ್ದರು.  ಪುಲ್ವಾಮಾ ದಾಳಿಗೆ ಪ್ರತೀಯಾಗಿ ಕರ್ನಾಟಕ ಬಂದ್ ಮಾಡುವುದಾಗಿ ಕರೆ ನೀಡಿದ್ದ ವಾಟಾಳ್ಗೆ ಭಾರೀ ವಿರೋಧ ವ್ಯಕ್ತವಾಯ್ತು. ಸಾಮಾಜಿಕ ಜಾಲತಾಣಗಳಲ್ಲಿ ವಾಟಾಳ್ ನಾಗರಾಜ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ರು. ಮಂಡ್ಯದ ಯುವಕನೊಬ್ಬ ತಾಕತ್ತಿದ್ದರೇ ನನ್ನೊಂದಿಗೆ ನೀವೂ ಜಮ್ಮುವಿಗೆ ಬನ್ನಿ, ಅದೂ ಬಿಟ್ಟು ಕೆಲಸಕ್ಕೆ ಬಾರದ ರಾಜ್ಯ ಬಂದ್ ಮಾಡುವುದು ಸರಿಯೇ ಎಂದು ಟಾಂಗ್ ನೀಡಿದ್ದನು.

ಆ ನಂತರ ವಾಟಾಳ್ ತಮ್ಮ ಕರೆಯನ್ನು ವಾಪಸ್ ಪಡೆದಿದ್ದೂ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯ್ತು. ಸದ್ಯ ಅದೇ ವಾಟಾಳ್ ನಾಗರಾಜ್ ಮನೆಯನ್ನು ಜಪ್ತಿ ಮಾಡಲಾಗಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಮನೆಯನ್ನು ಬ್ಯಾಂಕ್ ನ ಸಿಬ್ಬಂಧಿಗಳು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ವಾಟಾಳ್ ನಾಗರಾಜ್ ಅವರು ವಿಜಯಾ ಬ್ಯಾಂಕಿನಿಂದ 12 ಲಕ್ಷ ರೂ. ವನ್ನು ಗೃಹಸಾಲವನ್ನು ಪಡೆದಿದ್ರು. ಬ್ಯಾಂಕಿನ ಹಣವನ್ನು ನಿಗಧಿತ ಅವಧಿಯೊಳಗೆ ಪಾವತಿಸ ಬೇಕಿತ್ತು. ಈ ಹಿನ್ನಲೆಯಲ್ಲಿ ಬ್ಯಾಂಕ್ ಅನೇಕ ಬಾರಿ ವಾಟಾಳ್ ನಾಗರಾಜ್ ಅವರಿಗೆ ನೋಟೀಸ್ ಜಾರಿ ಮಾಡಿದ್ದರೂ ನಾಗರಾಜ್ ಬ್ಯಾಂಕ್ ಗೆ ಉತ್ತರಿಸದ ಕಾರಣ ನಿನ್ನೆ ವಿಜಯಾ ಬ್ಯಾಂಕಿನ ಸಿಬ್ಬಂದಿಯವರು ಮನೆ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. 

Edited By

Kavya shree

Reported By

Kavya shree

Comments