ನಟ ಡಾ. ರಾಜ್ ಹೆಸರಿನ ಕೋಚಿಂಗ್ ಸೆಂಟರ್’ನಲ್ಲಿ ಮೊದಲ ವರ್ಷವೇ 16 ವಿದ್ಯಾರ್ಥಿಗಳು IAS ಪಾಸ್..!

06 Mar 2019 12:27 PM | General
405 Report

2017 ರಲ್ಲಿ ಆರಂಭವಾದ  ಡಾ. ರಾಜ್ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ ಪ್ರತಿಭಾವಂತ ಹಾಗೂ ಬಡ  ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದ್ದು, ಪ್ರತೀ ವರ್ಷ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪ್ರಥಮ ವರ್ಷದಲ್ಲೇ ಈ ಕೋಚಿಂಗ್ ಸೆಂಟರ್ ನಲ್ಲಿ  ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ 16 ಜನ ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೂ ಆಯ್ಕೆಯಾಗಿದ್ದಾರೆ.  2018 ನೇ ಬ್ಯಾಚ್ ನಲ್ಲಿ 800 ವಿದ್ಯಾರ್ಥಿಗಳ ಪೈಕಿ ಕನ್ನಡ ಸಾಹಿತ್ಯ, ಮಾನವ ಶಾಸ್ತ್ರ, ಭೂಗೋಳ ಶಾಸ್ತ್ರ, ರಾಜಕೀಯ ಶಾಸ್ರ್ತ ವಿಷಯಗಳ ಬಗ್ಗೆ ಕೋಚಿಂಗ್​ ನೀಡುತ್ತಿದೆ. ಈ ಪೈಕಿ 150 ವಿದ್ಯಾರ್ಥಿಗಳು 2018ನೇ ಕೆಪಿಎಸ್​​ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿದ್ದಾರೆ.  ಸದ್ಯ ಎರಡು ಬ್ಯಾಚ್ ‘ನ್ನು ಯಶಸ್ವಿಯಾಗಿ ಪೂರೈಸಿದೆ. ಈ ಕೋಚಿಂಗ್ ಸೆಂಟರ್ ಈ ವರ್ಷದ ಮೂರನೇ ಬ್ಯಾಚ್  ಆರಂಭಿಸಲು ರೆಡಿಯಾಗಿದೆ.

ಇದೇ ತಿಂಗಳಲ್ಲಿ ಆರಂಭವಾಗುವ ಮೂರನೇ ಬ್ಯಾಚ್ ಕುರಿತು ನಟ ರಾಘವೇಂದ್ರ ರಾಜ್ ಕುಮಾರ್ ಅವರ ಭಾವಿ ಸೊಸೆ ಮತ್ತು ಅಕಾಡೆಮಿಯಲ್ಲಿ ಒಬ್ಬರಾಗಿರುವ ಗಿರೀಶ್ ಇಂದು ಖಾಸಗಿ ಹೋಟೆಲ್​​ನಲ್ಲಿ ಮಾಹಿತಿ ನೀಡಿದ್ರು. ಈ ಬಗ್ಗೆ ರಾಜ್ ಕುಟುಂಬದವರು ಆರಂಭಿಸಿರುವ  ಈ ಅಕಾಡೆಮಿ ಬಗ್ಗೆ ಸಾಕಷ್ಟು ಭರವಸೆಗಳು ಮೂಡಿದ್ದೂ ಇದು ದೊಡ್ಡಮಟ್ಟದಲ್ಲಿ ಹೆಸರು ಮಾಡಬೇಕು, ಇದೇ ದಾರಿಯಲ್ಲಿ ಹಲವು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದರು. ಅಲ್ಲದೇ ಅಕಾಡೆಮಿಯ ಬಗ್ಗೆ ಮಾಹಿತಿ ಕೂಡ ತಿಳಿಸಿದ್ರು. ಇದೇ ಮಾರ್ಚ್ 20 ರಂದು ಬೆಂಗಳೂರು, ಧಾರವಾಡ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಇದಕ್ಕೆ ಹಾಜರಾಗಲು ಬಯಸುವವರು 'www.drrajkumaracademy.com' ವೆಬ್ ಸೈಟ್​​ನಲ್ಲಿ ತಮ್ಮ ಪೂರ್ಣ ವಿಳಾಸ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಹ ಸಿಗಲಿದೆ. ಅದರ ಜತೆ ವಿಕಲಚೇತನರಿಗೂ ಕೂಡ ಡಾ.ರಾಜ್ ಕುಮಾರ್ ಸಿವಿಲ್ ಸರ್ವಿಸ್​​ ಅಕಾಡೆಮಿ ಉಚಿತ ಶಿಕ್ಷಣ ನೀಡಲಿದೆ. 

Edited By

Kavya shree

Reported By

Kavya shree

Comments