ನಿಮಗೆ ಧೈರ್ಯ ಇದ್ದರೆ ಒಂದು ಸಲ ಮಂಡ್ಯ ಕಡೆ ಹೋಗಿ ಎಂದು ರಮ್ಯಾಗೆ ಹೇಳಿದ್ಯಾರು ಗೊತ್ತಾ..?

05 Mar 2019 9:29 AM | General
250 Report

ಸ್ಯಾಂಡಲ್ ವುಡ್ ಪದ್ಮಾವತಿ ಏನ್ ಮಾಡಿದ್ರು ತಪ್ಪೆ ಎನ್ನುವ ರೀತಿ ಆಗಿಬಿಟ್ಟಿದೆ… ಸುಮ್ಮನಿದ್ದರೂ ಕಷ್ಟ… ಏನ್ ಮಾಡುದ್ರು ಕಷ್ಟ.. ಅದರಲ್ಲೂ ಮಂಡ್ಯ ಜನತೆ ಮಾತ್ರ ರಮ್ಯಳನ್ನು ಕಂಡರೆ ಕೆಂಡಾಮಂಡಲವಾಗುತ್ತಿದ್ದಾರೆ. ಅನಾರೋಗ್ದ ನೆನವೊಡ್ಡಿ ಅಂಬರೀಶ್ ಅವರನ್ನು ನೋಡಲು ಬಂದಿಲ್ಲ.. ಈ ರೀತಿಯ ಒಂದಿಷ್ಟು ಕೆಲಸಗಳಿಗೆ ರಮ್ಯ ಪದೇ ಪದೇ ಸುದ್ದಿಯಾಗುತ್ತಿದ್ದಾರೆ.. ಸಾಮಾಜಿಕ ಜಾಲತಾಣಗಳ ಮೂಲಕವು ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು… ಇದೀಗ ಮತ್ತೆ ನೆಟ್ಟಿಗರ ಕೈಗೆ ತಗುಲಿಹಾಕಿಕೊಂಡಿದ್ದಾರೆ.. ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಹಾಗೂ ನಟಿ ರಮ್ಯಾ ಅವರು ಟ್ವಿಟರ್ ನಲ್ಲಿ ಮತ್ತೆ ರಂಪಾಟ ಶುರು ಮಾಡಿಕೊಂಡಿದ್ದಾರೆ.. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ, ಏರ್ ಸ್ಟ್ರೈಕ್ ಹಾಗು  ವಿಂಗ್ ಕಮಾಂಡರ್ ಅಭಿನಂದನ್ ಅವರ ಪ್ರಕರಣದಲ್ಲಿ ಟ್ವೀಟ್ ಮಾಡಿದ್ದ ರಮ್ಯಾ ಟ್ವೀಟಿಗರ ಆಕ್ರೋಶಕ್ಕೆ ಒಳಗಾಗಿದ್ದರು.

ಇದೀಗ ಸೇನೆಯ ಕುರಿತಾಗಿ ರಮ್ಯಾ ಮತ್ತೊಂದು ಟ್ವೀಟ್ ಮಾಡಿದ್ದು ಮತ್ತೆ ನೆಟ್ಟಿಗರು  ತರಾಟೆಗೆ ತೆಗೆದುಕೊಂಡಿದ್ದಾರೆ...ಉಗ್ರರ ವಿರುದ್ಧ ದಾಳಿ ನಡೆಸಿದ ಭದ್ರತಾ ಪಡೆಯನ್ನು ಸಂಶಯದಿಂದ ನೋಡಲಾಗುತ್ತದೆ. ಸೇನೆಯ ಬಗ್ಗೆ ಹೆಮ್ಮೆ ಇರಬೇಕು ಎಂದು ಪ್ರಧಾನಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ ಹೇಳಿಕೆಯೊಂದನ್ನು ನೀಡಿದ್ದಾರೆ. ನಮ್ಮ ಸೇನೆಯ ಮೇಲೆ ನಮಗೆ ನಂಬಿಕೆ ಇದೆ. ಆದರೆ, ನಿಮ್ಮ ಮೇಲೆ ನಂಬಿಕೆ ಇಲ್ಲ.

ಸೇನೆ ದಾಖಲೆಯೊಂದಿಗೆ ಮಾತನಾಡುತ್ತದೆ. ನೀವು ದಾಖಲೆ ಇಲ್ಲದೆ ಸುಳ್ಳು ಹೇಳುತ್ತೀರಿ ಎಂದು ಪ್ರಧಾನಿ ಮೋದಿಯವರನ್ನು ರಮ್ಯಾ ಟೀಕಿಸಿದ್ದಾರೆ. ನೀವು ದಾಖಲೆ ಇಲ್ಲದೆ ಮಾತನಾಡುತ್ತೀರಿ ಎಂದು ಟೀಕಿಸಿದ್ದು, ಇದಕ್ಕೆ ಟ್ವಿಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುಖಾ ಸುಮ್ಮನೆ ನೀವು ಯಾಕೆ ಬಾಯಿ ಬಡಿದುಕೊಳ್ಳುತ್ತೀರಿ ನಿಮ್ಮ ಟ್ರ್ಯಾಕ್ ರೆಕಾರ್ಡ್ ಮಂಡ್ಯ ಜನತೆಗೆ ಚೆನ್ನಾಗಿ ಗೊತ್ತಿದೆ. ಧೈರ್ಯ ಇದ್ದರೆ ಒಂದು ಸಲ ಮಂಡ್ಯ ಕಡೆ ಹೋಗಿ ನೋಡಿ ಎಂದು  ಟ್ವೀಟ್ ಮಾಡಿದ್ದಾರೆ.. ಒಟ್ಟಾರೆ ರಮ್ಯಾ ಟ್ವೀಟ್ ಮಾಡುವ ಮುನ್ನ ಒಮ್ಮೆಯಾದರು ಯೋಚಿಸಬೇಕು,, ಇಲ್ಲವಾದರೂ ಈ ರೀತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ ಬಿಡುತ್ತೀರಾ..?

Edited By

Manjula M

Reported By

Manjula M

Comments