ಭಾರತೀಯರಿಗೆ ಗುಡ್ ನ್ಯೂಸ್ : ಕೊನೆಗೂ ತಲೆಬಾಗಿದ ಪಾಕಿ ಪಾಕ್..?!!!

28 Feb 2019 5:51 PM | General
488 Report

ಪಾಕಿಸ್ತಾನದ ಸೇನಯ ವಶದಲ್ಲಿ ನಮ್ಮ ಭಾರತೀಯ ಪೈಲೆಟ್ ಅಭಿನಂದನ್ ವರ್ಧಮಾನ್ ಸೆರೆಯಾಗಿರುವ ಘಟನೆ ಭಾರತೀಯರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನಮ್ಮ ವಾಯುಪಡೆಯ ಪೈಲೆಟ್’ನನ್ನು ಸುರಕ್ಷಿತವಾಗಿ ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡರೂ ಪಾಕ್ ಷರತ್ತುಗಳಿಗೆ ಒಪ್ಪಿದ್ರೆ ನಾವು ನಿಮ್ಮ ಸೈನಿಕನನ್ನು ಕಳುಹಿಸಿಕೊಡುತ್ತೇವೆ ಎಂದಿತ್ತು. ಆದರೆ ನಾವು ಹೇಡಿಗಳಲ್ಲ, ಅವರಿಗೆ ಹೆದರಿ ಅವರ ಷರತ್ತಿಗೆ ತಲೆ ಬಾಗಿ ಗಡಿಯಲ್ಲಿರುವ ನಮ್ಮ ಸೈನ್ಯವನ್ನು ನಾವು ವಾಪಸ್ ತೆಗೆದುಕೊಳ್ಳಲ್ಲ  ಎಂದು ಪಾಕ್ ವಿದೇಶಾಂಗ ಸಚಿವನಿಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿತ್ತು. ಜೊತೆಗೆ ಅಷ್ಟೇ ಖಡಕ್ ಆಗಿಯೇ ನಮ್ಮ ಪೈಲೆಟ್ ನನ್ನು ನಮಗೆ ಸುರಕ್ಷಿತವಾಗಿ ವಾಪಸ್ ಕೊಟ್ಟಿಲ್ಲವೆಂದರೇ ಪರಿಣಾಮ ನೆಟ್ಟಗಿರಲ್ಲ, ಪ್ರತೀದಾಳಿ ಹೆದರಿಸಬೇಕಾಗುತ್ತದೆ ಎಂದು ವಾರ್ನ್ ಕೂಡ ಮಾಡಿತ್ತು.

ಕೊನೆಗೂ ಪಾಕ್ ಭಾರತಕ್ಕೆ ತಲೆಬಾಗಿದೆ. ನಾಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದೆ. ನಾಳೆ ಅಂದರೆ ಶುಕ್ರವಾರ  ವರ್ಧಮಾನ್ ನನ್ನು ಭಾರತಕ್ಕೆ ವಾಪಸ್ ಕಳುಹಿಸುವುದಾಗಿ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ತಿಳಿಸಿದ್ದಾರೆ. ಅಂದಹಾಗೇ ನಾಳೆ ಅಭಿನಂದನ್ ವರ್ಧಮಾನ್ ಅವರು ಸುರಕ್ಷಿತವಾಗಿ ವಾಘಾ ಗಡಿ ದಾಟಿ ಭಾರತಕ್ಕೆ ಪ್ರವೇಶಿಸಲಿದ್ದಾರೆಂದು ಪಾಕಿಸ್ತಾನ ಪ್ರಕಟಿಸಿರುವುದಾಗಿ ವರದಿಗಳು  ಹೇಳಿವೆ. ಅಷ್ಟೇ ಅಲ್ಲದೇ ಪಾಕಿಸ್ತಾನ ರಕ್ಷಣಾ ಅಟಾಶೆ ಅವರು ಅಭಿನಂದನ್ ಅವರನ್ನು ವಾಘಾ ಗಡಿ ಬಳಿ ತಾವೇ ಖುದ್ದು ಕರೆದುಕೊಂಡು ಬಂದು ಭಾರತೀಯ ಸೇನೆಗೆ ಒಪ್ಪಿಸುವುದಾಗಿ ಪಾಕ್ ಹೇಳಿಕೆ ನೀಡಿದೆ.ಭಾರತೀಯ ಯುದ್ಧ ವಿಮಾನದ ಮೇಲೆ ಪಾಕ್ ದಾಳಿ ನಡೆಸಿದಾಗ ಪೈಲೆಟ್ ಅಭಿನಂದನ್ ಅವರು ಪಾಕ್ ಗಡಿಯೊಳಗೆ ಬಿದ್ದು ಗಾಯಗೊಂಡರು. ತಕ್ಷಣವೇ ಪಾಕ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ನಮ್ಮ ಪೈಲೆಟ್ ನನ್ನು ಸುರಕ್ಷಿತವಾಗಿಯೇ ಒಪ್ಪಿಸಬೇಕೆಂದು  ಭಾರತ ಮನವಿ ಮಾಡಿಕೊಂಡಿದ್ದರೂ ಪಾಕ್  ಮಾತ್ರ ಒಪ್ಪಿಕೊಂಡಿರಲಿಲ್ಲ. ರಾಜಾತಾಂತ್ರಿಕ ಮೂಲಕ ಕೊನೆಗೂ ಪೈಲೆಟ್ ಅಭಿನಂದನ್ ಭಾರತಕ್ಕೆ ಪ್ರವೇಶಿಸಲಿದ್ದಾರೆ. ಇದು ಭಾರತೀಯರಿಗೆ ಸಿಕ್ಕ ಜಯ.

Edited By

Kavya shree

Reported By

Kavya shree

Comments