‘ದಾಳಿಯಾಗುವಾಗ ನೀವು ನಿದ್ದೆ ಮಾಡ್ತಿದ್ರಾ’..!! ಎಂದು ಮೋದಿಯನ್ನು ಟ್ವೀಟ್  ಮೂಲಕ ಟೀಕಿಸಿದ ‘ಪದ್ಮಾವತಿ’..!

28 Feb 2019 11:12 AM | General
173 Report

ಅದ್ಯಾಕೋ ಗೊತ್ತಿಲ್ಲ… ಸ್ಯಾಂಡಲ್ವುಡ್ ನ ಪದ್ಮಾವತಿ ಸುಮ್ ಸುಮ್ನೆ ಎಲ್ಲಾ ವಿಚಾರಕ್ಕೂ ಸುದ್ದಿಯಾಗುತ್ತಿದ್ದಾರೆ…ಇತ್ತಿಚಿಗಂತೂ ರಮ್ಯಾ ನೆಟ್ಟಿಗರ ಕೆಂಗಣ್ಣಿಗೆ ಅದೆಷ್ಟು ಬಾರಿ ಗುರಿಯಾಗಿದ್ದಾರೋ ಗೊತ್ತಿಲ್ಲ… ಆದರೂ ಕೂಡ ರಮ್ಯ ಯಾಕೋ ಬುದ್ದಿ ಕಲಿತಾ ಆಗೆ ಕಾಣುತ್ತಿಲ್ಲ.. ಹಿಂದೆ ಒಂದು ಬಾರಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದು ಭಾರೀ ಚರ್ಚೆಯಾಗಿತ್ತು.. ಆದರೆ ಇದೀಗ ಮತ್ತೊಮ್ಮೆ ರಮ್ಯ ಪ್ರಧಾನಿಯನ್ನು ಟೀಕಿಸಿ ಸುದ್ದಿಯಾಗಿದ್ದಾರೆ… ಪ್ರತಿಬಾರಿಯೂ ಪ್ರಧಾನಿಯವರನ್ನು ಟೀಕಿಸಿ ರಮ್ಯ ಟ್ವೀಟ್ ಮಾಡುತ್ತಲೇ ಇರುತ್ತಾರೆ..

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ರಮ್ಯಾ ಮತ್ತೆ ನರೇಂದ್ರ ಮೋದಿಯವರ ಕಾಲೆಳೆದು ಟ್ವೀಟ್ ಮಾಡಿದ್ದಾರೆ. ಭಾರತೀಯ ವಾಯುಸೇನೆ ದಾಳಿಯ ನಂತರ ಪಾಕಿಸ್ತಾನದಿಂದ ಪ್ರತಿದಾಳಿಯಾಗುತ್ತೆ ಎಂದು ಗೊತ್ತಿದ್ದರೂ ಕೂಡ ಮೋದಿ ನಿದ್ರಿಸುತ್ತಿದ್ದರೆ ಎಂದು ರಮ್ಯ ಕಿಡಿ ಕಾರಿದ್ದಾರೆ. ದಾಳಿಯ ವಿಷಯವಾಗಿ  ಟ್ವೀಟ್ ಮಾಡಿರುವ ರಮ್ಯಾ, ಭಾರತದ ಪೈಲಟ್ ಒಬ್ಬರನ್ನು ಪಾಕ್ ಬಂಧಿಸಿದೆ, ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ನೀವು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದೀರಿ. ಪ್ರತಿದಾಳಿ ಮಾಡಬಹುದು ಎಂಬ ವಿಚಾರ ನಿಮಗೆ ಗೊತ್ತಿರಲಿಲ್ಲವೆ ಅಥವಾ ನಿಮಗೆ ಗೊತ್ತಿದ್ದರೂ ನಿದ್ರೆ ಮಾಡುತ್ತಿದ್ದೀರಾ ..ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಪೈಲಟ್ ಬಗ್ಗೆ ಒಂದೇ ಒಂದು ಟ್ವೀಟ್ ಸಹ ಮಾಡಿಲ್ಲ..' ಎಂದು ರಮ್ಯಾ ಟ್ವೀಟ್ ಮೂಲಕ ಪ್ರಧಾನಿಯವರನ್ನು ಟೀಕಿಸಿದ್ದಾರೆ.

Edited By

Manjula M

Reported By

Manjula M

Comments