ಭಾರತೀಯ ಪೈಲೆಟ್ ಅಭಿನಂದನ್’ನ ಬಿಡುಗಡೆ ಮಾಡಿ…!! ಪಾಕ್ ಲೇಖಕಿಯ ಭಾವನಾತ್ಮಕ ಲೇಖನ..!!

28 Feb 2019 10:11 AM | General
508 Report

ಪುಲ್ವಾಮ ದಾಳಿಯ ನಂತರ ಇಡೀ ದೇಶದಲ್ಲಿಯೇ ಬಿಗುವಿನ ವಾತವರಣ ಸೃಷ್ಟಿಯಾಗಿದೆ… ಆ ದಾಳಿಗೆ ಪ್ರತ್ಯುತ್ತರ ಕೊಟ್ಟ ನಮ್ಮ ಭಾರತ ಸೇನೆ ಪಡೆ ಉಗ್ರರ ಮೇಲೆ ದಾಳಿ ನಡೆಸಿ ಸುಮಾರು 300 ಉಗ್ರರನ್ನು ಸದೆ ಬಡಿದು ಸೇಡು ತೀರಿಸಿಕೊಂಡಿದ್ದರು.. ಯುದ್ದ  ಮಾಡಲೇ ಬೇಕು ಎಂದು ಪಣ ತೊಟ್ಟು ಪಾಕಿಸ್ತಾನ ಯುದ್ದ ವಿಮಾನಗಳನ್ನು ನಮ್ಮ ಭಾರತದೊಳಗೆ ಕಳಿಸಿದರು ಅದು ಸಫಲವಗಲಿಲ್ಲ.. ನಮ್ಮ ವೀರ ಯೋಧರು ಅವುಗಳನ್ನು ಹೊಡೆದುರುಳಿಸಿದರು…

ಆದರೆ ನೆನ್ನೆ ಭಾರತದ ಎರಡು ಯುದ್ದ ವಿಮಾನಗಳನ್ನು ಹೊಡೆದುರುಳಿದ್ದೇವೆ ಹಾಗೂ ಓರ್ವ ಪೈಲೆಟ್ ಅನ್ನು ಬಂಧಿಸಿದ್ಧೇವೆ ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ. ಅದರಂತೆ ನಮ್ಮ ಭಾರತದ ಮಿಗ್ ವಿಮಾನದ ಪೈಲೆಟ್ ಆದ ಅಭಿನಂದನ್ ಅವರನ್ನು ಪಾಕ್ ಬಂಧಿಸಿದೆ.. ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಎಂದು ನಮ್ಮ ಭಾರತವು ಆಗ್ರಹಿಸುತ್ತಿದೆ..

ಆದರೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಪೈಲೆಟ್ ಅನ್ನು ಬಿಡುಗಡೆ ಮಾಡಿ ಎಂದು ಸ್ವತಹ ಪಾಕಿಸ್ತಾನದ ಲೇಖಕಿ ಹಾಗೂ  ಮಾಜಿ ಪ್ರಧಾನಿಯಾದ ಜುಲಿಫ್ಕಾರ್ ಅಲಿ ಭುಟ್ಟೋ ಅವರ ಮಗಳು ಫಾತಿಮಾ ಭುಟ್ಟೋ ಒತ್ತಾಯಿಸಿದ್ದಾರೆ..ನಮಗೆಲ್ಲಾ ಬೇಕಾಗಿರುವುದು ಶಾಂತಿ ಮಾತ್ರ, ಅದನ್ನ ಬಿಟ್ಟು ಯುದ್ದ ಮಾಡಿದರೆ ಏನು ಸಿಗುತ್ತದೆ ..ಕೇವಲ ಸಾವಷ್ಟೆ ಸಿಗುತ್ತದೆ.. ನಮಗೆ ಶಾಂತಿ ಮಾನವೀಯತೆ ಘನತೆ ಮುಖ್ಯ ಎಂದು ನ್ಯೂಯಾರ್ಕ್ ಟೈಮ್ಸ್ ಒಪೆಡ್ ಪುಟದಲ್ಲಿ ಬರೆದಿದ್ದಾರೆ,. ಪಾಕಿಸ್ತಾನದ ಹಲವು ಯುವಕರು ಕೂಡ ಅಭಿನಂದನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Edited By

Manjula M

Reported By

Manjula M

Comments