ಪಾಕಿಗಳ ಮೇಲೆ ಕಣ್ಣು ಹಾಕಿದರೇ ಕಣ್ಣುಗುಡ್ಡೆ ಹೊರಬರುತ್ತೆ ಎಂದ ಪಾಕ್ ಸಚಿವ, ಈಗ ಹೇಳೋದೇನು ಗೊತ್ತಾ...?!!!

27 Feb 2019 6:03 PM | General
876 Report

ಅಂದಹಾಗೇ ಎಪ್ಪತ್ತೆರಡು ಗಂಟೆಗಳಲ್ಲಿ ಏನು ಬೇಕಾದರೂ ಆಗಬಹುದು. ಇಂಡಿಯಾ –ಪಾಕ್ ವಾರ್  ಹೆಚ್ಚಾಗುತ್ತಿದೆ. ಪಾಕ್ ಕೆಣಕಿ ಯದ್ಧ ಮಾಡಲು ಸಿದ್ಧವಾಗುತ್ತಿದೆ. ಮುಂದಿನ ಮೂರು ದಿನಗಳಲ್ಲಿ ನಿರೀಕ್ಷಿಸಲಾಗದ ಘಟನೆ ನಡೆಯಲೂ ಬಹುದು. ಒಂದು ವೇಳೆ ಭಾರತದ ಜೊತೆ ಯುದ್ಧವಾದರೇ ಅದು ಎರಡನೇ ವಿಶ್ವ ಯುದ್ಧದ ನಂತರ ಅತೀ ದೊಡ್ಡ ಯುದ್ಧವಾಗುತ್ತದೆ ಎಂದು ಪಾಕ್ ನ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಹೇಳಿದ್ದಾರೆ.

ಒಂದು ವೇಳೆ ಯುದ್ಧವೇ ನಡೆದರೆ ಇದು ಘೋರ ಯುದ್ಧವಾಗಿರಲಿದೆ. ಏಕೆಂದರೆ ಪಾಕಿಸ್ತಾನ ಪೂರ್ಣ ಸನ್ನದ್ಧವಾಗಿದೆ. ಒಂದು ವೇಳೆ ಪಾಕ್'ಗೆ ಯುದ್ಧ ಅನಿವಾರ್ಯವಾದರೇ ಯುದ್ಧ ಮಾಡಿಯೇ ತೀರುತ್ತಾರೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಾಗಿ ಏನನ್ನೂ ಹೇಳಲಾಗುವುದಿಲ್ಲ. ಎರಡು ದೇಶಗಳ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಸೇಡು-ದ್ವೇಷ ಹೆಚ್ಚಾಗುತ್ತಿದೆ. ಯುದ್ಧನಾ ಅಥವಾ ಶಾಂತಿಯೋ ಮುಂದಿನ ಎಪ್ಪತ್ತೆರಡು ಗಂಟೆಯನ್ನು ನಿರ್ಧಾರ ಆಗಲಿದೆ ಎಂದು ಅವರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಅಹ್ಮದ್ ಮಾತನಾಡುತ್ತಾ ಹೇಳಿದ್ದೇನೆಂದರೆ, ಯಾರಾದರೂ ಪಾಕಿಸ್ತಾನದ ಕಡೆಗೆ ನಕಾರಾತ್ಮಕ ರೀತಿಯಲ್ಲಿ ನೋಡಿದರೆ ಅವರ ಕಣ್ಣನ್ನು ಕಿತ್ತು ಆಚೆ ತೆಗೆಯಲಾಗುತ್ತದೆ. ಹುಲ್ಲು ಕೂಡ ಬೆಳೆಯಲ್ಲ. ಪಕ್ಷಿಗಳ ಕಲರವ ಕೇಳಲ್ಲ. ದೇವಾಲಯಗಳಲ್ಲಿ ಗಂಟೆಯ ಶಬ್ದ ಕೇಳಲ್ಲ ಎಂಬ ಸುದ್ದಿಯಾಗಿತ್ತು.

Edited By

Kavya shree

Reported By

Kavya shree

Comments