ಗಡಿ ದಾಟಿ ಬಂದ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತ...!

27 Feb 2019 1:46 PM | General
771 Report

ಪುಲ್ವಾಮಾ ದಾಳಿಯ ನಂತರ ಇಂಡಿಯಾ-ಪಾಕ್ ವಾರ್ ಹೆಚ್ಚಾಗುತ್ತಿದೆ. ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ನಿನ್ನೆ ನಸುಕಿನಲ್ಲಿ ಭಾರತೀಯ ವಾಯುಸೇನೆ  ಜೆಟ್ ಯುದ್ಧ ವಿಮಾನಗಳನ್ನು ಬಳಸಿ ಪಾಕ್ ನ 300  ಉಗ್ರರನ್ನು ಸದೆಬಡಿಯಿತು. ಈ ವಿಚಾರ ತಿಳಿಯುತ್ತಿದ್ದಂತೇ ಪಾಕ್ ತನ್ನ ಸೇನೆ ಮುಖ್ಯಸ್ಥರ ತುರ್ತು ಸಭೆ ನಡೆಸಿ ಮತ್ತೆ ಹುಚ್ಚಾಟ ಆರಂಭಿಸಿದೆ. ಮೊದ ಮೊದಲು ಭಾರತೀಯ ಸೇನೆ ದಾಳಿ ಮಾಡಿದ್ದು ನಮಗೆ ಅವಮಾನವಾಗಿದೆ ಇದಕ್ಕೆ ನಾವು ಪ್ರತಿಕ್ರಿಯಿಸುತ್ತೇವೆಂದು ಪಾಕ್ ಹೇಳಿತು. ಅದರ ಬೆನ್ನಲ್ಲೇ ಭಾರತದ ಮೇಲೆ ದಾಳಿ ಮಾಡಲು ಶುರು ಮಾಡಿದೆ. ಭಾರತದ ಗಡಿ ದಾಟಿ ಬಂದ ಪಾಕ್ ವಾಯು ಸೇನೆ ಎಫ್-16 ಯುದ್ದವಿಮಾನವನ್ನು ಭಾರತ ವಾಯು ಸೇನೆ ಸುಖೋಯ್ 30 ಯುದ್ಧ ವಿಮಾನ ಹೊಡೆದುರುಳಿಸಿರುವ ಬಗ್ಗೆ ಮಾಹಿತಿ ಬಂದಿದೆ.

ಇದೀಗ ಬಂದಿರುವ ಮಾಹಿತಿಯ ಪ್ರಕಾರ ಹೊಡೆದುರುಳಿಸಿದ ಪಾಕ್ ಯುದ್ಧ ವಿಮಾನದಲ್ಲಿದ್ದ ಪೈಲೆಟ್ ಪ್ಯಾರಾಶೂಟ್ ಬಳಸಿ ಜಿಗಿದಿದ್ದಾನೆ, ಆತನ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಿಲ್ಲ. ಪಾಕಿಸ್ತಾನ ದಾಳಿ ತೀವ್ರವಾಗುತ್ತಿದ್ದಂತೇ ಅಮೃತಸರದ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಮತ್ತು ಅಂತರಾಷ್ಟ್ರೀಯ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಪಾಕ್ ಮತ್ತು ಭಾರತದ  ಪರಿಸ್ಥಿತಿ, ಸೇಡು-ದ್ವೇಷ ಉಲ್ಬಣವಾಗುವ ಪರಿಸ್ಥಿತಿ  ಕಂಡುಬಂದಿರುವುದರಿಂದ  ರಾಷ್ಟ್ರಗಳ ನಡುವೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಕೂಡ ಸ್ಥಗಿತವಾಗಿದೆ. ಈಗಾಗಲೇ ಪಾಕ್'ನ ವಾಯುಸೇನೆ ಜಮ್ಮು-ಕಾಶ್ಮೀರದಲ್ಲಿ ನೌಶೇರಾ ಬಾಂಬ್ ದಾಳಿ ನಡೆಸಿದ್ದಾರೆ. ಆದರೆ ಯಾವ ಪ್ರಾಣಿಹಾನಿ ಸಂಭವಿಸಿಲ್ಲ, ಆದರೆ 9 ವರ್ಷದ ಬಾಲಕನಿಗೆ ಗಾಯವಾಗಿದೆ ಎಂಬ ಮಾಹಿತಿ ಮಾತ್ರ ತಿಳಿದು ಬಂದಿದೆ. ಬಾಲಕೋಟ್, ಮುಜಫರಾಬಾದ್ ಮತ್ತು ಡಾಕೋಟಿಯಲ್ಲಿ ಭಾರತದ ವಾಯುಸೇನೆ ಮಂಗಳವಾರ ಉಗ್ರರ ನೆಲೆಗಳನ್ನು ನಾಶ ಮಾಡಿದ ಮೇಲೆ ಪಾಕಿಸ್ತಾನ ಪ್ರಥಮ ಬಾರಿಗೆ ಪ್ರತಿದಾಳಿ ಮಾಡಿದೆ.

Edited By

Kavya shree

Reported By

Kavya shree

Comments