ಭಾರತದ ಎರಡು ಯುದ್ಧ ವಿಮಾನ ಪತನಗೊಳಿಸಿದ್ದೇವೆ ಎಂದ ಪಾಕ್: ಓರ್ವ ಭಾರತೀಯ ಪೈಲೆಟ್ ಬಂಧನ..!!

27 Feb 2019 1:11 PM | General
845 Report

ಇತ್ತಿಚಿಗಷ್ಟೆ ಇಡೀ ದೇಶವೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದೆ ಹೋಗಿದೆ.. ದೇಶವನ್ನೆ ಬೆಚ್ಚಿ ಬೀಳಿಸಿದ ಪುಲ್ವಾಮ ಉಗ್ರದಾಳಿ ನಿಜಕ್ಕೂ ಇಡೀ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.. ಪುಲ್ವಾಮ ದಾಳಿಯಲ್ಲಿ ಸುಮಾರು ಭಾರತೀಯ 42 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟರು.. ಇದೀಗ ಅದೇ ಹಿನ್ನಲೆಯಲ್ಲಿ ನೆನ್ನೆ ಅಷ್ಟೆ ನಮ್ಮ ಭಾರತೀಯ ಯೋಧರು ಸುಮಾರು 350 ಉಗ್ರರನ್ನು ಸದೆ ಬಡಿದಿದ್ದರು..

"ಪಾಕಿಸ್ತಾನದ ವಾಯು ಪ್ರದೇಶದೊಳಗೆ ಎರಡು ಭಾರತೀಯ ವಾಯುಪಡೆಗಳು ಪ್ರವೇಶ ಮಾಡಿದ್ದವು.. ಆದರೆ ಅವುಗಳನ್ನು ನಾವು ಹೊಡೆದು ಉರುಳಿಸಿದ್ದೇವೆ. ಗಡಿ ರೇಖೆ ಉಲ್ಲಂಘಿಸಿ ಪಾಕಿಸ್ತಾನದೊಳಗೆ ಬಂದಿದ್ದ ವಿಮಾನವನ್ನು ಹೊಡೆದುರುಳಿಸಿ ಓರ್ವ ಪೈಲಟ್‌ನನ್ನು ಬಂಧಿಸಿದ್ದೇವೆ" ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

ಪಾಕ್ ಉಗ್ರರನ್ನ ಸದೆ ಬಡಿಯಲು ಭಾರತೀಯ ಸೈನಿಕರು ಹಗಲು ರಾತ್ರಿ ಎನ್ನದೆ ಕಾರ್ಯಚರಣೆ ನಡೆಸುತ್ತಿದ್ದಾರೆ.. ಪಾಪಿ ಪಾಕ್ ಗೆ ತಕ್ಕ ಪಾಠ ಕಳಿಸಲು ಭಾರತ ತೊಡೆ ತಟ್ಟಿ ನಿಂತಿದೆ.

Edited By

Manjula M

Reported By

Manjula M

Comments