ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆ ಬಳಸಿದ ಶಸ್ತ್ರಾಸ್ತ್ರಗಳ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ…?!!!

27 Feb 2019 10:54 AM | General
136 Report

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ನಡೆಸಿದ ಬಾಂಬ್ ದಾಳಿಗೆ ಸುಮಾರು 300 ರಿಂದ 350 ಉಗ್ರರು ಹತರಾಗಿದ್ದಾರೆ. ಪುಲ್ವಾಮಾ ದಾಳಿಯ ನಂತರವೂ ಗಡಿ ಉಲ್ಲಂಘನೆ ಮಾಡಿ ಪಾಕ್ ಭಾರತೀಯರನ್ನು ಕೆಣಕುತ್ತಲೇ ಇತ್ತು. ಭಾರತೀಯ ಮನದಲ್ಲೆ ಪುಲ್ವಾಮಾ ದಾಳಿಯ ಸೇಡಿನ ಜ್ವಾಲೆ ಉರಿಯುತ್ತಿತ್ತು. ಪ್ರಧಾನಿಯ ಅನುವಿನಂತೆ ಭಾರತೀಯ ವಾಯು ಸೇನೆ ಪಾಕ್ ಉಗ್ರರ ಮುಖ್ಯ ತಾಣಗಳ ಮೇಲೆ  12 ಮಿರಾಜ್ ಯುದ್ಧ ವಿಮಾನಗಳನ್ನು ಬಳಸಿ 12 ನಿಮಿಷಗಳ ಕಾಲ ಉಗ್ರರನ್ನು ಉಡೀಸ್ ಮಾಡಲಾಗಿದೆ. ಈ ಪಾಕಿಗಳಿಗೆ ಪಾಠ ಕಲಿಸಲು ಭಾರತೀಯ ವಾಯು ಸೇನೆ ಬಳಸಿದ ಯುದ್ಧ ವಿಮಾನ ಶಸ್ತ್ರಾಸ್ತ್ರಗಳ ಬೆಲೆ ಬರೋಬ್ಬರಿ ಎಷ್ಟು ಗೊತ್ತಾ..?

ರೂ.6300 ಕೋಟಿ. ಉಗ್ರರನ್ನು ಸದೆ ಬಡಿಯಲು ಇಷ್ಟು ಅಧಿಕ ಮೊತ್ತ ಮೌಲ್ಯದ ಯುದ್ಧ ಸಾಮಾಗ್ರಿಗಳು ಬಳಕೆಯಾಗಿದೆ ಎನ್ನಲಾಗ್ತಿದೆ. ಪಾಕಿಸ್ತಾನದ ಬಾಲಕೋಟ್ ನಲ್ಲಿ  ನಿನ್ನೆ ನಡೆದ ದಾಳಿ ಭಾರತದ ಅತೀ ದೊಡ್ಡ ದಾಳಿಯಾಗಿದೆ ಎನ್ನಲಾಗ್ತಿದೆ. ಈ ಹಿಂದೆ 2016 ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್’ಗಿಂತಲೂ ಇದು ದೊಡ್ಡ ದಾಳಿ ಎನ್ನಲಾಗ್ತಿದೆ.ದಾಳಿಗೆ ವಾಯು ಸೇನೆ 6300 ಕೋಟಿ ಮೌಲ್ಯದ ಯುದ್ಧ ಸಾಮಗ್ರಿ ಬಳಸಿಕೊಂಡಿದ್ದು, ಅದರಲ್ಲಿ 2568 ಕೋಟಿ ರೂಪಾಯಿ ಮೌಲ್ಯದ ಯುದ್ಧ ವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳು. ಭಾರತೀಯ ವಾಯುಸೇನೆ ಇವುಗಳನ್ನು ಪಾಕಿಸ್ತಾನದೊಳಗೆ ನುಸುಳಿಸಿತು. ಉಗ್ರರ ಕ್ಯಾಂಪ್​ನ ಮೇಲೆ ಬರೋಬ್ಬರಿ 1 ಸಾವಿರ ಕೆಜಿ ತೂಕದ ಬಾಂಬ್‌ಗಳನ್ನು ಹಾಕಿ 300 ರಿಂದ 350 ಉಗ್ರರನ್ನು ನೆಲಕ್ಕುರುಳಿಸಿದೆ. ಈ ಬಾಂಬ್’ಗಳ ಬೆಲೆ ಬಂದು ತಲಾ 56 ಲಕ್ಷ ರೂಪಾಯಿ ಮೌಲ್ಯ. ಜೈಷ್‌ ಎ ಮೊಹಮದ್‌ ಸಂಘಟನೆಯನ್ನ ಮುಗಿಸಲೆಂದೇ 1.7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಪಾಕಿಗಳಿಗೆ ಬುದ್ಧಿ ಕಲಿಸಲು ಭಾರತೀಯ ವಾಯು ಸೇನೆ ಮಿರಾಜ್‌ ಯುದ್ಧ ವಿಮಾನಗಳಿಗೆ ಬದಲಾಗಿ ಸುಖೋಯ್‌ 30 ಎಂಕೆಐ, ಮಿಗ್‌ 29ಎಸ್‌ ವಿಮಾನಗಳನ್ನ ಬಳಸಬಹುದಿತ್ತು. ಆದರೆ ಪಾಪಿ ಪಾಕಿಗಳನ್ನು ನಿರ್ನಾಮ ಮಾಡಲು ಮಿರಾಜ್ ಜೆಟ್ ವಿಮಾನಗಳನ್ನೇ ಬಳಸುವುದು ಲೇಸೆಂದು ಯೋಚಿಸಿ, ಬಳಸಿ ಉಗ್ರರನ್ನು  ಸದೆಬಡಿದಿವೆ. 

Edited By

Kavya shree

Reported By

Kavya shree

Comments