ಯೋಧ ಗುರು ಸಾವಿನ ಸೂತಕ ಕಳೆದೇ ಇಲ್ಲ..? ಆಗಲೇ ಶುರುವಾಯ್ತು ಕುಟುಂಬದಲ್ಲಿ ಕಲಹ..!!

27 Feb 2019 10:37 AM | General
296 Report

ಫೆ. 14, ಭಾರತಕ್ಕೆ ಅಂದು ಕರಾಳ ದಿನ. ನಮ್ಮ ಗಡಿ ಕಾಯೋ ಅನೇಕ ಯೋಧರ ದೇಹ ಛಿದ್ರ ಛಿದ್ರವಾಗಿತ್ತು. ಪುಲ್ವಾಮಾ ದಲ್ಲಿ ಭಾರತೀಯ ಯೋಧರ ರಕ್ತದ ಕೋಡಿ ಹರಿದಿತ್ತು. ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಬಾಂಬ್ ಸ್ಫೋಟಿಸಿ ಅಮಾಯಕ ಯೋಧರ ನೆತ್ತರು ಹರಿಸಿದರು ಆ ಪಾಕಿ ಉಗ್ರರು. ಆ ಘಟನೆಗೆ ಇಡೀ ಭಾರತವೇ ಶೋಕ ಸಾಗರದಲ್ಲಿ ಮುಳುಗಿ ಹೋಯ್ತು. ಹುತಾತ್ಮರಾದ ಸೈನಿಕರ ಪೈಕಿ ಕರ್ನಾಟಕದ ಮಂಡ್ಯ ಜಿಲ್ಲೆಯ ಗುಡಿಗೆರೆ ಗ್ರಾಮದ ಯೋಧ ಗುರು ಕೂಡ ಒಬ್ಬರು.. ಇದೀಗ ಯೋಧ ಗುರು ಕುಟುಂಬದಲ್ಲಿ ಕಲಹ ಶುರುವಾಗಿದೆ.

ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೆರವಿನ ರೂಪದಲ್ಲಿ ಬಂದ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಕುಟುಂಬದಲ್ಲೇ ಕಲಹ ಉಂಟಾಗಿದೆ.ಕಲಾವತಿ ಖಾತೆಗೆ ಬಂದ ನೆರವು. ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಕಲಹ ಆರಂಭವಾಗಿದೆ. ವಿದೇಶ ಉದ್ಯಮಿಯೊಬ್ಬರಿಂದಲೇ 1 ಕೋಟಿ ನೆರವು ಬಂದಿದ್ದು, ಸರ್ಕಾರದಿಂದ 25 ಲಕ್ಷ,ಇನ್ಫೋಸಿಸ್ ಫೌಂಡೇಷನ್​ನಿಂದ 10 ಲಕ್ಷ, ನ್ಯಾಷನಲ್ ಟ್ರಾವೆಲ್ಸ್​ನಿಂದ 10 ಲಕ್ಷ ಹೀಗೆ ಸಾಕಷ್ಟು ಹಣ ಸಂಗ್ರಹವಾಗಿದೆ..

ಹಣ ಹಂಚಿಕೆ ವಿಚಾರದಲ್ಲಿ ಗುರು ಪತ್ನಿ, ತಂದೆ-ತಾಯಿ, ಸಹೋದರರ ನಡುವೆ ಘರ್ಷಣೆಯಾಗಿದ್ದು. ನೆರವಿನ ಹಣ ಹಂಚಿಕೆ ವಿಚಾರವಾಗಿ ಮನೆಯಲ್ಲಿ ತಡರಾತ್ರಿವರೆಗೂ ನಡೆದಿರುವ ಕಲಹ ಗುಡಿಗೆರೆ ಕಾಲೋನಿಯಲ್ಲಿ ತೀವ್ರ ಚರ್ಚೆಗೆ ಗುರಿಯಾಗಿರುವ ಕುಟುಂಬದ ಘರ್ಷಣೆ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ ಕುಟುಂಬಕ್ಕೆಪೊಲೀಸ್​ರು ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಇನ್ನೂ ಗುರು ಮನೆಯಲ್ಲಿ ಸೂತಕದ ಛಾಯೆ ಹೋಗೆ ಇಲ್ಲ.. ಆಗಲೇ ಹಣಕ್ಕಾಗಿ ಅವರ ಕುಟುಂಬದಲ್ಲಿ ಕಲಹ ಉಂಟಾಗಿದೆ..

Edited By

Manjula M

Reported By

Manjula M

Comments