ಹೆತ್ತ ಮಗುವನ್ನೇ ಮಾರಾಟ ಮಾಡಿದ ಪಾಪಿ ತಂದೆ..!!! ಕಾರಣ ಏನ್ ಗೊತ್ತಾ..?!!!

26 Feb 2019 4:56 PM | General
257 Report

ಹೆತ್ತ ಮಗುವನ್ನೇ ಸತ್ತಿದೆ ಎಂದು ಪತ್ನಿಯನ್ನು ನಂಬಿಸಿ ತಂದೆಯೇ ಮಗುವನ್ನು ಮಾರಾಟ ಮಾಡಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಜನವರಿ 12 ರಂದು ಲಲಿತಾ ಎಂಬುವವರಿಗೆ ಹೆಣ್ಣು ಮಗು ಜನಿಸಿತ್ತು.  ಆದರೆ ಲಲಿತಾ ಪತಿ ಬಿಸ್ವಪ್ ಗೆ ಆ ಮಗು ಬೇಡವಾಗಿತ್ತು. ಅದು ಹೆಣ್ಣು  ಮಗುವೆಂಬ ಕಾರಣಕ್ಕೆ ಆ ಮಗುವನ್ನೇ ಮಾರಾಟ ಮಾಡುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ಅಂದಹಾಗೇ ಲಲಿತಾಗೆ  ಮಗು ಸತ್ತಿದೆ ಎಂದು ಪತ್ನಿಯನ್ನು ನಂಬಿಸಿ ಸಂಜು ಬಿಸ್ವಪ್ ಎಂಬಾತ ಮಗುವನ್ನು ಮಾರಾಟ ಮಾಡಿದ್ದನು. ಬಳಿಕ ಆಸ್ಪತ್ರೆಯ ದಾಖಲಾತಿ ಪರಿಶೀಲಿಸಿದಾಗ ಮಗು ಜೀವಂತವಾಗಿರುವ ಜನನ ಪ್ರಮಾಣ ಪತ್ರ ಪತ್ತೆಯಾಗಿದೆ.

ಇದಾದ ಬಳಿಕ ಲಲಿತಾಗೆ ತನ್ನ ಮಗು ಬದುಕಿರುವ ವಿಚಾರ ತಿಳಿದಿದೆ. ಮಗು ಮಾರಾಟದ ಬಗ್ಗೆ ಅನುಮಾನ ಪಟ್ಟ ಲಲಿತಾ ತನ್ನ ಒಂದೂವರೆ ತಿಂಗಳ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ನಂತರ ಮಗು ಖರೀದಿ ಮಾಡಿದ ಹೆಂಗಸು  ಲಲಿತಾಗೆ ಕೈಗೆ ಸಿಕ್ಕಿಬಿದ್ದಿದ್ದಾರೆ. ನಯವಾಗಿಯೇ ಆಕೆಯ ಜೊತೆ ಮಾತನಾಡಿ, ಆಕೆಯ ವಿರುದ್ದ ಮತ್ತು ಪತಿ ವಿರುದ್ಧ ದೂರು ನೀಡಿದ್ದಾರೆ. ಆಡಿಯೋ ಕ್ಲಿಪ್ಪಿಂಗ್ ನ್ನು ಸಾಕ್ಷಿಯಾಗಿಯೇ ಇಟ್ಟುಕೊಂಡು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಇಬ್ಬರ ಮೇಲೂ ಕೇಸ್ ನೀಡಿದ್ದಾರೆ. ಸದ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ ಬಿಸ್ವಪ್ ತಲೆಮರೆಸಿಕೊಂಡಿದ್ದಾರೆ.ಇನ್ನು ಹೆಣ್ಣು –ಗಂಡು ಎಂಬ ತಾರತಮ್ಯ ಕಡಿಮೆಯಾಗಿಲ್ಲ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮಾರಾಟ ಇನ್ನು ಕಡಿಮೆಯಾಗಿಲ್ಲ. ಮೂಢ ನಂಬಿಕೆಯನ್ನು ಜನ ಬಿಟ್ಟಿಲ್ಲ.

Edited By

Kavya shree

Reported By

Kavya shree

Comments