ರೈತರಿಗೆ ಸಿಕ್ತು ಬಂಪರ್..!! ಇನ್ಮೇಲೆ ಓಲಾ,ಉಬರ್ ಶೈಲಿಯಲ್ಲಿಯೇ ಸಿಗಲಿದೆ ಟ್ರಾಕ್ಟರ್..!!!

26 Feb 2019 10:10 AM | General
397 Report

ಮೊದಲಾದರೂ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಎಲ್ಲಿಗಾದರೂ ಹೋಗಬೇಕು ಎಂದರೆ ಬಸ್’ಗಾಗಿ ಕಾಯುತ್ತಿದ್ದರು… ಆ ಬಸ್’ನಲ್ಲಿ ಜನ ಜಂಗುಳಿ… ಸೀಟು ಸಿಕ್ಕಿದವರೆ ಪುಣ್ಯವಂತರು… ಸಿಕ್ಕಾಪಟ್ಟೆ ಟಾಪ್ರಿಕ್.. ಬಸ್ ಇಳಿಯುಷ್ಟರಲ್ಲಿ ಸಾಕಪ್ಪ ಸಾಕು ಈ ಬಸ್ ಸಹವಾಸ ಎನ್ನುವಂತಿತ್ತು.. ಆದರೆ ಕೆಲವು ವರ್ಷಗಳಿಂದ ನಗರವಾಸಿಗಳಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದಂತಾಗಿದೆ..  ಓಲಾ , ಉಬರ್ ಬಂದ ಮೇಲೆ ನಗರ ವಾಸಿಗಳಿಗೆ ಸ್ವಲ್ಪ  ನಿರಾಳವಾಗಿದೆ. ತಮ್ಮ ತಮ್ಮ ಮೊಬೈಲ್‍ ನಲ್ಲಿ ಕ್ಯಾಬ್‍ ಬುಕ್‍ ಮಾಡಿದ್ರೆ, ಅವರಿದ್ದಲ್ಲಿಗೆ ಕ್ಯಾಬ್‍ ಬಂದು ಅವರನ್ನು ಕರೆದುಕೊಂಡು ಹೋಗುತ್ತದೆ..  ಈ ವ್ಯವಸ್ಥೆಯು ನಿಜವಾಗಿಯೂ ಸಾರ್ವಜನಿಕರಿಗೆ ಅನುಕೂಲವಾಗುವಂತಿದೆ.

ಟ್ರಾಫಿಕ್‍’ನಲ್ಲಿ ಸ್ವಂತ ವಾಹನ ಓಡಿಸಿಕೊಂಡು ಬರಲಾಗದವರು, ಕೆಲವೊಂದು ತುರ್ತು ಸಂದರ್ಭಗಳಲ್ಲಿ ಕಾರುಗಳ ಅವಶ್ಯಕತೆ ಇದ್ದಾಗ ಓಲಾ, ಉಬರ್ ಕ್ಯಾಬ್ ಗಳು ಜನರಿಗೆ ಬಹಳಷ್ಟು ಅನುಕೂಲಕರವಾಗಿವೆ..  ಇದೀಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಓಲಾ, ಉಬರ್ ಮಾದರಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಟ್ರಾಕ್ಟರ್ ಗಳನ್ನು ಪರಿಚಯಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ತಾವು ಬೆಳೆದ ಬೆಳೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ರೈತರು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ…

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈ ಸಮಸ್ಯೆ ನಿವಾರಣೆಗೆ ಓಲಾ, ಉಬರ್ ಕ್ಯಾಬ್‍ ಗಳಂತೆ ಆಪ್ ಮೂಲಕ ಟ್ರ್ಯಾಕ್ಟರ್ ಗಳನ್ನು ಬುಕ್ ಮಾಡಲು ಯೋಜನೆ ರೆಡಿಯಾಗ್ತಿದೆ.ಇದಕ್ಕಾಗಿ ಆಪ್ ಕೂಡಾ ರೆಡಿಯಾಗುತ್ತಿದೆ..ಈ ಆ್ಯಪ್ ಅತೀ ಶೀಘ್ರದಲ್ಲೇ ಪ್ಲೇಸ್ಟೋರ್ ನಲ್ಲಿ ಲಭ್ಯವಾಗಲಿದ್ದು, ಆದಷ್ಟು ಬೇಗ ರೈತರು ಡೌನ್‍ಲೋಡ್‍ ಮಾಡಿ ತಮ್ಮ ಉತ್ಪನ್ನಗಳನ್ನು ಸಾಗಿಸಲು ಟ್ರ್ಯಾಕ್ಟರ್ ಬುಕ್‍ ಮಾಡಬಹುದಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿಳಿಸಿದ್ದಾರೆ. 

 

Edited By

Manjula M

Reported By

Manjula M

Comments