ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡಲು ಚಾಲೆಂಜ್ ಸ್ವೀಕರಿಸಿ, ಗೆದ್ದ ಕ್ರಿಕೆಟ್ ದೇವರು...!

25 Feb 2019 1:22 PM | General
174 Report

ಫೆ.14 ರಂದು ನಡೆದ ಪುಲ್ವಾಮಾ ದಾಳಿಯಿಂದಾಗಿ ಭಾರತದ ಅನೇಕ ಯೋಧರು ಸಾವನಪ್ಪಿದ್ದಾರೆ. ಉಗ್ರ ದಾಳಿಯಿಂದಾಗಿ ಅನೇಕ ಅಮಾಯಕರು ನೆತ್ತರು ಹರಿಸಿದ್ದರು. ಈಗಾಗಲೇ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡಲು ಎಲ್ಲಾ ವಲಯದವರು  ಮುಂದು ಬರುತ್ತಿದ್ದಾರೆ.ಚಿತ್ರರಂಗ ಮತ್ತು ಕ್ರಿಕೆಟ್ ಎನ್ನದೇ ಎಲ್ಲಾ ವಲಯದವರು ಕೂಡ ಸಹಾಯ ಹಸ್ತ ಚಾಚುವುದರ ಮೂಲಕ ನೊಂದ ಕುಟುಂಬಗಳಿಗೆ ನೆರವು ನೀಡುತ್ತಿದ್ದಾರೆ. ಕ್ರಿಕೆಟ್, ಸಿನಿಮಾ, ರಾಜಕೀಯ , ವಿದ್ಯಾರ್ಥಿಗಳೆನ್ನದೇ ಅನೇಕರು ತಾವು ದುಡಿದ, ದುಡಿಯುತ್ತಿರುವ ಸಂಪಾದನೆಯಲ್ಲಿ ಕೈಲಾದಷ್ಟು ಕೊಟ್ಟು ಭಾರತೀಯ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರ ಕುಟುಂಬಗಳಿಗೆ ದೇಣಿಗೆ ನೀಡುವ ಸಲುವಾಗಿ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಸಾವಿರಾರು ಜನರ ಜತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹ ಹೆಜ್ಜೆ ಹಾಕಿದರು.  ಸಾವಿರಾರು ಜನರು ಇದರಲ್ಲಿ ಪಾಲ್ಗೊಂಡಿದ್ದರು.ಇಲ್ಲಿನ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಆರಂಭವಾಗುವ ಮುನ್ನ, ‘ಕೀಪ್ ಮೂವಿಂಗ್ ಪುಷ್ ಅಪ್ ಚಾಲೆಂಜ್’ ಸ್ವೀಕರಿಸಿದ ಸಚಿನ್, 10 ಪುಷ್ ಅಪ್ ಮಾಡಿದರು. ಈ ವೇಳೆ ರೂ15 ಲಕ್ಷ ಸಂಗ್ರಹವಾಗಿದ್ದು, ಈ ಮೊತ್ತವನ್ನು ಯೋಧರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಓಟದ ಆಯೋಜಕರು ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments