ಬ್ಯಾನ್ ಆಗಿದ್ದ ನೋವು ನಿವಾರಕ ಮಾತ್ರೆ ಮಾರುಕಟ್ಟೆಗೆ, ಯಾವುದು ಗೊತ್ತಾ..?!!

21 Feb 2019 5:50 PM | General
316 Report

ಅಂದಹಾಗೇ ಈಗಾಗಲೇ ಕೆಲ ಮಾತ್ರೆಗಳನ್ನು ಜೀವಕ್ಕೆ ಅಪಾಯಕಾರಿ  ಎಂದು ಒಂದಷ್ಟು ಪೇನ್ ಕಿಲ್ಲರ್ ಮಾತ್ರೆಗಳನ್ನು ನಿಷೇಧ ಮಾಡಲಾಗಿತ್ತು. ಈಗ ಆ ಮಾತ್ರೆ ಮಾರುಕಟ್ಟೆಗೆ ಬಂದಿದೆ.  ಪರಿಚಿತ ಮಾತ್ರೆಯೊಂದು ನಿಷೇಧ ಪಟ್ಟಿಯಿಂದ ಹೊರ ಬಿದ್ದಿರುವ ಮಾಹಿತಿ  ಈಗಷ್ಟೇ ಹೊರ ಬಿದ್ದಿದೆ. ಮಾತ್ರೆ ತಯಾರಿಸುವ ಕಂಪನಿ ಪಿರಾಮಲ್ ಎಂಟರ್ಪ್ರೈಸಸ್ ಲಿಮಿಡೆಟ್ ಮಹತ್ವದ ಮಾಹಿತಿಯೊಂದನ್ನು ನೀಡಿದೆ.ನೋವು ನಿವಾರಕ ಸ್ಯಾರಿಡಾನ್ ಮಾತ್ರೆಯನ್ನು ಸುಪ್ರೀಂ ಕೋರ್ಟ್ ನಿಷೇಧಿತ ಮಾತ್ರೆ ಪಟ್ಟಿಯಿಂದ ತೆಗೆದು ಹಾಕಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಸುಪ್ರೀಂ ಕೋರ್ಟ್ ಸ್ಯಾರಿಡಾನ್ ಪರವಾಗಿ ತೀರ್ಪು ನೀಡಿದೆ ಎಂದು ಕಂಪನಿ ಸ್ಟಾಕ್ ಮಾರುಕಟ್ಟೆಗೆ ಮಾಹಿತಿ ನೀಡಿದೆ.ಭಾರತದಲ್ಲಿ ಸರಿ ಸುಮಾರು 50 ವರ್ಷಗಳಿಂದ ಸ್ಯಾರಿಡಾನ್ ಮಾತ್ರೆಯಿದ್ದು, ಜನರ ವಿಶ್ವಾಸ ಗಳಿಸುವುದರಲ್ಲಿ ಮಾತ್ರೆ ಯಶಸ್ವಿಯಾಗಿತ್ತು. ಜನರು ಅದ್ರ ಮೇಲೆ ವಿಶ್ವಾಸ ಹೊಂದಿದ್ದಾರೆಂದು ಕಂಪನಿ ಹೇಳಿದೆ. ಕೋರ್ಟು ನಮ್ಮ ಪರವಾಗಿಯೇ ತೀರ್ಪು ನೀಡಿದೆ ಎಂದು ಕಂಪನಿ ಹೇಳಿಕೆ ನೀಡಿದೆ.

2020 ರೊಳಗೆ ಟಾಪ್ 3 ಕಂಪನಿಗಳಲ್ಲಿ ಪಿರಾಮಲ್ ಕಂಪನಿ ಒಂದಾಗಲಿದೆ ಎಂಬ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ. ಅಂದಹಾಗೇ 328 ಔಷಧಿಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು , ಅದರಲ್ಲಿ ಸಾರಿಡಾನ್ ಕೂಡ ಒಂದು.ಈ ವಿಚಾರವಾಗಿ ಕಂಪನಿ ಕೋರ್ಟು ಮೆಟ್ಟಿಲೇರಿತ್ತು. ಸದ್ಯ ಅದಕ್ಕೆಲ್ಲಾ ಬ್ರೇಕ್ ಬಿದ್ದಂತಿದೆ.

Edited By

Kavya shree

Reported By

Kavya shree

Comments