ಡಿಸಿಪಿ ಅಣ್ಣಾಮಲೈ ಹೆಸರು ವರ್ಗಾವಣೆ ಪಟ್ಟಿಯಲ್ಲಿ ಸೇರಿಕೊಂಡಿದ್ದು ಹೇಗೆ..?!

21 Feb 2019 3:41 PM | General
282 Report

ಗುರುವಾರ‍ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರು ಕೂಡ ಸೇರಿಕೊಂಡಿತ್ತು..ನಂತರ ವರ್ಗಾವಣೆಯಾದ ಬಳಿಕ ಯಾವುದೇ ಹುದ್ದೆಯನ್ನು ನೀಡಿರಲಿಲ್ಲ.. ಈ ವಿಚಾರವು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು…ಇದೀಗ  ನಗರದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲ್ಲ ಎಂದು ಸರ್ಕಾರ ತಿಳಿಸಿದೆ.. ವರ್ಗಾವಣೆಯಾದ ಬಳಿಕ ಅವರಿಗೆ ಯಾವುದೇ ಹುದ್ದೆ ನೀಡದೆ ಇರುವುದಕ್ಕೆಯೇ ಈ ವಿಷಯ ಇಷ್ಟು ಚರ್ಚೆಯಾಗಿತ್ತು..

ಈ ಕೂಡಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಅಣ್ಣಾಮಲೈ ವರ್ಗಾವಣೆಯನ್ನು ರದ್ದು ಮಾಡಿದೆ. ಅಧಿಕಾರಿಗಳ ಹೆಸರನ್ನು ಟೈಪ್ ಮಾಡುವ ವೇಳೆ ಸಿಬ್ಬಂದಿ ಎಡವಟ್ಟಿನಿಂದಾಗಿ ಅಣ್ಣಾಮಲೈ ಹೆಸರು ನಮೂದಾಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸಿಲಿಕಾನ್ ಸಿಟಿಯಲ್ಲಿ ಭೂ ಮಾಫಿಯಾ ಮಟ್ಟಹಾಕಲು ಸರ್ಕಾರ ಚಿಕ್ಕಮಗಳೂರಿನಲ್ಲಿ ಎಸ್‍ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಸಿತ್ತು. ಜನರ ನೋವುಗಳಿಗೆ ಕಷ್ಟಗಳಿಗೆ ಅಣ್ಣಾಮಲೈ ಸ್ಪಂದಿಸುತ್ತಿದ್ದರು..

Edited By

Manjula M

Reported By

Manjula M

Comments