ಪಾಪಿ ಪಾಕ್ ಜೊತೆ ಕ್ರಿಕೆಟ್ ಅಷ್ಟೇ ಅಲ್ಲಾ, ಯಾವ ಆಟನೂ ಆಡಬಾರದು ...!!!

21 Feb 2019 1:34 PM | General
158 Report

ಭಾರತದ ಮೇಲೆ ಉಗ್ರರು ದಾಳಿ ಮಾಡಿದ ಹಿನ್ನಲೆಯಲ್ಲಿ ಅನೇಕ ಯೋಧರು ವೀರ ಮರಣ ಹೊಂದಿದ್ದಾರೆ. ಈಗಾಗಲೇ ಪಾಕ್ ಮೇಲೆ ಪ್ರತೀಕಾರ ಜ್ವಾಲೆ ಹೊತ್ತಿ ಉರಿಯುತ್ತಿದೆ. ಈ  ಮಧ್ಯೆ ಪಾಕ್ – ಭಾರತದ ನಡುವೆ ಇರುವ ಸಂಬಂಧಗಳನ್ನು ಕಡಿತಗೊಳಿಸಬೇಕಕು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ನಾವು ಅವರೊಂದಿಗೆ ಯಾವ ಸಂಬಂಧವನ್ನು ಇಟ್ಟುಕೊಳ್ಳಲು ಇಷ್ಟವಿಲ್ಲ, ಪದೇ ಪದೇ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ.

ಈಗಾಗಲೇ ಅವರ ರಕ್ಕಸ ದಾಳಿಗೆ ನಮ್ಮವರ ನೆತ್ತರು ಹರಿದಿದೆ.ವಿಶ್ವಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧದ ಪಂದ್ಯ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಗಂಗೂಲಿ ಕೂಡ ದನಿಗೂಡಿಸಿದ್ದಾರೆ. ಕ್ರಿಕೆಟ್​ ಅಷ್ಟೇ ಅಲ್ಲದೇ ಪುಟ್ಬಾಲ್ ಹಾಕಿ ಸೇರಿದಂತೆ ಪಾಕ್ ಜೊತೆಗೆ ಯಾವುದೇ ಕ್ರೀಡೆಯನ್ನ ಭಾರತ ಆಡಬಾರದು ಎಂದಿದ್ದಾರೆ. ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಮ್ಯಾಚ್ ಆಡದಿದ್ದರೆ ಆಗುವ ನಷ್ಟ ಏನಿಲ್ಲ. ಅಲ್ಲದೇ ಐಸಿಸಿಗೆ ಭಾರತವನ್ನ ವಿಶ್ವಕಪ್​ನಿಂದ ಹೊರಗಿಡೋಕೆ ಸಾಧ್ಯವಿಲ್ಲ. ಇದರಿಂದ ಭಾರತ ಪಾಕ್​ ಜೊತೆಗಿನ ಪಂದ್ಯ ಆಡದೇ, ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕು ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗಂಗೂಲಿ ಹೇಳಿದ್ದಾರೆ.

Edited By

Kavya shree

Reported By

Kavya shree

Comments