ಏರ್ ಶೋ ತರಬೇತಿ  ವೇಳೆ ಸೂರ್ಯ ಕಿರಣ್ ವಿಮಾನ ಡಿಕ್ಕಿ: ಓರ್ವ ಪೈಲೆಟ್ ಸಾವು

19 Feb 2019 3:06 PM | General
214 Report

ನಾಳೆ ಅಂದರೆ ಫೆಬ್ರವರಿ 20 ರಂದು ಬೆಂಗಳೂರಿನಲ್ಲಿ ಏರ್ ಷೋ ನಡೆಯಲಿದ್ದು, ಇದರ ಸಲುವಾಗಿ ನಾಳೆ ದೇಶ ವಿದೇಶಗಳಿಂದ ವಿಮಾನ ಕಂಪನಿಗಳು ಆಗಮಿಸಿದ್ದವು…ಏರ್ ಶೋ ಪ್ರಾರಂಭಕ್ಕೂ ಮೊದಲೇ ಇಂದು ತರಬೇತಿ ನಡೆಯುತ್ತಿದ್ದ ಸಮಯದಲ್ಲಿ ಎರಡು ಲಘು ಯುದ್ದ ವಿಮಾನಗಳ ನಡುವೆ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಓರ್ವ ಪೈಲೆಟ್ ಸಾವನ್ನಪ್ಪಿ ಇಬ್ಬರು ಪೈಲೆಟ್ ಗಳು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಇದರ ನಡುವೆ ಅಪಘಾತ ಸಂಭವಿಸಿದ ನಂತರ ಪೈಲೆಟ್ ಗಳಿಬ್ಬರು ಅಪಾಯವನ್ನು ತಿಳಿದ ನಂತರ ಪ್ಯಾರಾಚೂಟ್ ಬಳಸಿ ಹೊರ ಬಂದಿದ್ದಾರೆ, ಕೆಳಗಿಳಿಯುವ ಸಮಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ವಿಮಾನ ಅಪಘಾತವನ್ನು ದೃಶ್ಯವನ್ನು ಕಣ್ಣಾರೆ ಕಂಡ ಕೆಲವರು ಪೈಲೆಟ್ ಗಳು ಬಿದ್ದ ಸ್ಥಳಕ್ಕೆ ಕೂಡಲೇ ಅಲ್ಲಿನ ಜನ ಅಲ್ಲಿಗೆ ಬಂದು ಪೈಲೆಟ್ ಗಳನ್ನು ಮಾತನಾಡಿಸಿ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ. ಓರ್ವ ವ್ಯಕ್ತಿ, ಗಾಯಗೊಂಡ ಪೈಲೆಟ್ ಕೈ ಹಿಡಿದು ನಿಮಗೇನು ಆಗಿಲ್ಲ ಸರ್. ಮಾಹಿತಿ ರವಾನಿಸಿದ್ದೇವೆ. ಅಂಬುಲೆನ್ಸ್ ಈಗ ಬರಲಿದೆ ಎಂದು ಹೇಳುತ್ತಿದ್ದರೆ, ಮತ್ತೊಬ್ಬರು ನೀರು ತಂದು ಕೊಡಲು ಮುಂದಾಗಿದ್ದಾರೆ. ಈ ವಿಡಿಯೋವನ್ನು ಮಾಧ್ಯಮಗಳಲ್ಲಿ ವೀಕ್ಷಣೆ ಮಾಡಿದವರು, ಸ್ಥಳೀಯರ ಕಾರ್ಯಕ್ಕೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.ಗಾಯಗೊಂಡ ಪೈಲೆಟ್ ಗಳನ್ನು ಈಗ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. ನಾಳೆ ಬೆಂಗಳೂರಿನಲ್ಲಿ ಏರ್ ಷೋ ನಡೆಯಲಿದೆ.

Edited By

Manjula M

Reported By

Manjula M

Comments