ಪತಿಯ ಶವದ ಮುಂದೆ ಕೂತರೂ ಕಣ್ಣಲ್ಲಿ ಹನಿ ನೀರು ಹಾಕಲಿಲ್ಲ ಆ ಗಟ್ಟಿಗಿತ್ತಿ ಯೋಧನ ಪತ್ನಿ…?!!! ವಿಡಿಯೋ ವೈರಲ್.....

19 Feb 2019 1:23 PM | General
10240 Report

ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧನ ಪತ್ನಿಯೊಬ್ಬರುಪತಿಯಂತೇ ದಿಟ್ಟತನ ಮೆರೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಪತಿಯ ಶವ ಕಣ್ಮುಂದಿದೆ, ಮನದಲ್ಲಿ ಅಗಾಧವಾದ ನೋವನ್ನು ಅಲ್ಲಿಯೇ ನುಂಗಿಕೊಂಡು. ಪತಿಯ ಶವವನ್ನು ಬಿಟ್ಟ ಕಣ್ಣು ಬಿಟ್ಟಂತೇ ನೋಡುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಸೋಮವಾರ ಪುಲ್ವಾಮಾ ದಾಳಿಯಲ್ಲಿ ಉಗ್ರರ ಎನ್ ಕೌಂಟರ್  ನಡೆಯಿತು. ಈ ಘಟನೆಯಲ್ಲಿ  ಉತ್ತರಾಖಂಡದ ಡೆಹ್ರಾಡಾನ್ ಮೇಜರ್ ವಿ ಎಸ್ ಧೌಂಡಿಯಾಳ್  ಹುತಾತ್ಮರಾದರು.

ಪತಿಯ ಕಳೆಬರದ ಪಕ್ಕ ಕುಳಿತು, ಅವರನ್ನೇ ನೋಡುತ್ತಾ, ಮನದಲ್ಲಿ ಗುನುಗುತ್ತಾ…ಮುತ್ತಿಕ್ಕುತ್ತಿದ್ದ ದೃಶ್ಯ ಸುತ್ತಲ್ಲಿದ್ದವರ ಕಣ್ಣಲ್ಲಿ ನೀರು ತರಿಸುತ್ತಿತ್ತು. ಪತಿಯ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಆದರೆ ವಾಸ್ತವದಲ್ಲಿ ಅವರ ಮೇಲೆ ಅಪಾರ ಪ್ರೀತಿ –ವಾತ್ಸಲ್ಯ ತುಂಬುತ್ತಿದೆ. ದುಃಖ ಉಮ್ಮಳಿಸಿ ಬರುತ್ತಿದೆ. ಅದನ್ನು ತಡೆದು ಗಂಡನಿಗೆ ಮುತ್ತಿಕ್ಕುತ್ತಾ, ಅವರನ್ನೇ ದಿಟ್ಟಿಸಿ ನೋಡುತ್ತಾ , ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ ಆಕೆಯನ್ನು ನೋಡುತ್ತಿದ್ದರೇ ಎಂಥವರ ಎದೆಯು ಕರಗುತ್ತಿತ್ತು.ಮನಸ್ಸಲ್ಲಿ ದುಃಖದ ಮೂಟೆ ಹೊಡೆಯುತ್ತಿದೆ.

ಆದರೆ ಅದನ್ನು ತೋರಿಸಿಕೊಳ್ಳದೇ ಗಂಡನಿಗೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಪತಿಯ ಕಳೇಬರದ ಮುಂದೆ ಕಲ್ಲಿನಂತೆ ನಿಂತ ಆಕೆಯನ್ನು ಕಂಡರೆ ಇದೆಂಥ ವಿಚಿತ್ರ ಅನ್ನಿಸೋದು ಸಹಜ. ಆದರೆ ಎದೆಯಲ್ಲಿ ಹುದುಗಿದ ದುಃಖವನ್ನು ಕಣ್ಣೀರಾಗಿ ಹರಿಬಿಡದೆ ರಣಧೀರ ಪತಿಗೆ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಈಕೆ.ಫೆ. 14ಪುಲ್ವಾಮಾ ದಾಳಿಯಲ್ಲಿ ಒಂದು ರೂಪಿತ ಸಂಚು. ಎಷ್ಟೋ ಅಮಾಯಕ ದೇಶದ ಸೈನಿಕರು ನಮ್ಮವರಿಗಾಗಿ ಪ್ರಾಣ ಬಿಟ್ಟರು. ಇಡೀ ಏಶವೇ ಉಗ್ರ ರಾಕ್ಷಸ ತನಕ್ಕೆ ಸಿಡಿದೆದ್ದರು. ಪ್ರತೀಕಾರ ಬಿಟ್ಟರೇ ಅವರಿಗೆ ಬುದ್ಧಿ ಕಲಿಸಲಾಗದು ಎಂದು ಪಣ ತೊಟ್ಟರು. ಅದರಂತೇ ದಾಳಿಗೆ ಪ್ರೀದಾಳಿ ನಡೆಸಲಾಗುತ್ತಿದೆ.

Edited By

Kavya shree

Reported By

Kavya shree

Comments