ಬೆಸ್ಟ್ ಟಾಯ್ಲೆಟ್ ಪೇಪರ್ ಅಂತಾ ಸರ್ಚ್ ಮಾಡಿದ್ರೆ ಸಿಗೋದು ಪಾಕ್ ಬಾವುಟ : ಇದೆಲ್ಲಾ ಹೇಗೆ ಅಂತೀರಾ…?!!

19 Feb 2019 12:06 PM | General
340 Report

ಪುಲ್ವಾಮಾ ದಾಳಿಗೆ ಭಾರತೀಯ ಸೈನಿಕರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ನಮ್ಮ  ಯೋಧರ ನೆತ್ತರು ಹರಿಸಿದ ಪಾಕ್ ಉಗ್ರರಿಗೆ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜಾಗುತ್ತಿದೆ. ಹೀಗಿದ್ದಾಗ್ಯೂ ಪಾಕ್ ತನ್ನ ಕಿಡಿಗೇಡಿತನ ಬಿಡುತ್ತಿಲ್ಲ. ಅಂದಹಾಗೇ  ಪಾಕ್ ಅನ್ನು ಹೇಗೆ ಮಟ್ಟ ಹಾಕಬೇಕೋ ಹಾಗೆಲ್ಲಾ ಮಣ್ಣು ಮುಕ್ಕಿಸಲು ನಮ್ಮ ವೀರ ಯೋಧರು ರೆಡಿಯಾಗಿದ್ದಾರೆ. ಈಗಾಗಲೇ ಕಾರ್ಯಚರಣೆ ಕೂಡ ನಡೆಯುತ್ತಿದೆ. ಅಂದಹಾಗೇ , ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ ಒಂದು ದೇಶದ ಬಾವುಟ ವಿಶ್ವದ ಉತ್ತಮ ಟಾಯ್ಲೆಟ್ ಪೇಪರ್ ಎಂದರೆ ನಿಮಗೆ ಅಚ್ಚರಿಯಾಗಬಹುದು ಅಲ್ಲವೇ.

ಆದರೆ ಅದೂ ಸತ್ಯ. ವಿಶ್ವದ ಅತ್ಯುತ್ತಮ ಟಾಯ್ಲೆಟ್ ಪೇಪರ್’ಗಳಲ್ಲಿ ಪಾಕ್ ಬಾವುಟ ಕೂಡ ಒಂದು. ಅದು ಎಲ್ಲಿ ಹೇಗೆ ಅಂತೀರಾ..?!ಅಂದಹಾಗೇ ನೀವು ನಂಬಲೇಬೇಕಾದರೇ ಪ್ರಾಯೋಗಿಕವಾಗಿ ನೀವೇ ನೋಡಿ. ಗೂಗಲ್’ನಲ್ಲಿ ಬೆಸ್ಟ್ ಟಾಯ್ಲೆಟ್ ಪೇಪರ್ ಇನ್ ದಿ ವರ್ಲ್ಡ್ ಅಂತಾ ಟೈಪ್ ಮಾಡಿ ನಿಮಗೆ ಉತ್ತರ ಸಿಗುತ್ತದೆ. ಅಂದಹಾಗೇ ಅದರಲ್ಲಿ ಪಾಕ್ ಬಾವುಟದ ಚಿತ್ರಗಳು ಸಿಗುತ್ತವೆ. ಸದ್ಯ ಲಭ್ಯವಾಗುತ್ತಿರುವ ನೂತನ ಸರ್ಚ್ ರಿಸಲ್ಟ್ ನಲ್ಲಿ  ಪಾಕ್ ಬಾವುಟವನ್ನು ದಿ ಬೆಸ್ಟ್ ಟಾಯ್ಲೆಟ್ ಪೇಪರ್ ಅಂತಾ ಗುರುತಿಸಲಾಗುತ್ತಿದೆ.ಗೂಗಲ್ ಸರ್ಚ್ ರಿಸಲ್ಟ್ ಅಂತರ್ಜಾಲದಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಆಧರಿಸಿ ಇರುತ್ತದೆ. ಯಾರೋ ಪಾಕಿಸ್ತಾನದ ಫ್ಲಾಗ್ ನ್ನು ಬೆಸ್ಟ್ ಟಾಯ್ಲೆಟ್ ಪೇಪರ್ ಇನ್ ದಿ ವರ್ಲ್ಡ್ ಎಂದು ಸರ್ಚ್ ಇಂಜಿನ್ನಿನ  ಬಳಸಿ ಮಾಡಿದ್ದಾರೆ ಮತ್ತು ಅದು ಗೂಗಲ್ ಸರ್ಚ್ ರಿಸಲ್ಟ್ ನಲ್ಲಿ ರಿಫ್ಲೆಕ್ಟ್ ಆಗಿದೆ.

ಅಂದಹಾಗೇ ಪಾಕ್ ಬಾವುಟವನ್ನು ಟಾಯ್ಲೆಟ್ ಪೇಪರ್  ಆಗಿ ಕನ್ವರ್ಟ್ ಮಾಡ್ತಿದ್ದಾರೆ. ಇಂತಹ ಹಲವು ಉದಾಹರಣೆಗಳು ಗೂಗಲ್ ನಲ್ಲಿ ಇದೀಗ ಲಭ್ಯವಾಗುತ್ತಿದೆ. ಹಲವಾರು ಬಳಕೆದಾರರು ಈ ರೀತಿಯ ಬದಲಾವಣೆಗಳನ್ನು ಮಾಡಿದ್ದಾರೆ. ಹ್ಯಾಕರ್ಗಳು ಪಾಕ್ ವೆಬ್ ಸೈಟ್ ಗಳ ಕೀ ವರ್ಡ್ ಗಳನ್ನು ಬಳಸಿ ಇ ರೀತಿ ಮಾಡುತ್ತಿದ್ದಾರೆ.ಕೆಲವರು ಪಾಕಿಸ್ತಾನಿ ವೆಬ್ ಸೈಟ್ ಗಳನ್ನು ಕೂಡ ಹ್ಯಾಕ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ಅಟ್ಯಾಕ್ ಗೆ ಪ್ರತೀಕಾರವೆಂಬಂತೆ ಪಾಕಿಸ್ತಾನವನ್ನು ಬಗ್ಗುಬಡಿಯುವ ಪ್ರಯತ್ನಗಳು ಅಂತರ್ಜಾಲದಲ್ಲಿ ಸತತವಾಗಿ ನಡೆಯುತ್ತಿದೆ

Edited By

Kavya shree

Reported By

Kavya shree

Comments