ಬಿ ಟೌನ್ ನಲ್ಲಿ ಮಿಂಚುತ್ತಿದ್ದ ಪಾಕ್ ನಟ-ನಟಿಯರಿಗೆ ಸಂಕಷ್ಟ: ಪುಲ್ವಾಮ ದಾಳಿಗೆ ಫಿಲ್ಮಿ ಮಂಡಳಿ ಕ್ರಮ…!!!

18 Feb 2019 4:22 PM | General
304 Report

ಯೋಧರ ಸಾವಿನಿಂದ ಈಗಾಗಲೇ ಭಾರತದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ಕಡೆ ಕಿಡಿಗೇಡಿ ಪಾಕ್  ನಮ್ಮ ವೀರ ಯೋಧರನ್ನು  ಕೆಣಕುತ್ತಿದೆ.ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸಿದ ಕೃತ್ಯಕ್ಕೆ ಭಾರತೀಯ ಸಿನಿ ತಂಡ ಕೂಡ ಆ್ಯಕ್ಷನ್ ತೆಗೆದುಕೊಂಡಿದೆ. ಅಂದಹಾಗೇ ನಮ್ಮ ಹಿಂದಿ ಸಿನಿಮಾದಲ್ಲಿ ಪಾಕ್ ಚಲನಚಿತ್ರ ನಟರು ನಟಿಸೋದನ್ನು ಬ್ಯಾನ್ ಮಾಡಿದ್ದಾರೆ. ಕೆಲ ದಿನಗಳಿಮದಲೂ ಒಬ್ಬರ ಮೇಲೆ ಒಬ್ಬರು ಭಾರತೀಯ ಸೇನೆ ಯೋಧರು ವಿರ ಮರಣ ಹೊಂದುತ್ತಿದ್ದಾರೆ. ಈಗಾಗಲೇ ಪ್ರಧಾನಿ ಪಾಕ್ ಗೆ ಬುದ್ಧಿ ಕಲಿಸಲು ಕ್ರಮ ತೆಗೆದುಕೊಂಡಿದೆ.

ಇಂಡಿಯನ್ ಫಿಲ್ಮ್ ಮಂಡಳಿ ಬಿಡುಗಡೆ ಮಾಡಿರುವ ಪತ್ರದ ಪ್ರಕಾರ, ಬಾಲಿವುಡ್ ನಲ್ಲಿ ಪಾಕ್ ನ ನಟ, ನಟಿಯರು ನಟಿಸುವುದನ್ನು ನಿಷೇಧಿಸಿದೆ. ಒಂದು ವೇಳೆ ಯಾವುದೇ ಅಸೋಸಿಯೇಷನ್ ಆಗಲಿ, ಸಿನಿಮಾ ನಿರ್ದೇಶಕ, ನಿರ್ಮಾಪಕರಾಗಲಿ ಪಾಕ್ ನಟರಿಗೆ ಹಿಂದಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರೆ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಬಾಲಿವುಡ್ ಚಿತ್ರರಂಗದಿಂದಮರನ ಹೊಂದಿದ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರ ಮಂಡಳಿ ಕಡೆಯಿಂದ ಯೋಧರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಕೂಡ ಘೋಷಿಸಿದೆ. ಬಿ ಟೌನ್ ನ ಬಿಗ್ ಬಿ, ದಿಲ್ಮೀತ್ ಸೇರಿದಂತೆ ಅನೇಕ ನಟರು ಯೊಧರ ಕುಟುಂಬವನ್ನು ಭೇಟಿ ಮಾಡಿದ್ದಾರೆ.

Edited By

Kavya shree

Reported By

Kavya shree

Comments