ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕೋದಿಕ್ಕೆ ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇನೆ, ಯಾವ ತೀರ್ಮಾನವಾದ್ರೂ ತೆಗೆದುಕೊಳ್ಳಲೀ....

16 Feb 2019 2:58 PM | General
353 Report

ದೇಶಾದ್ಯಂತ ನಾಡಿನ ಮಕ್ಕಳ ನೆತ್ತರು ಹರಿದಿದೆ. ಉಗ್ರರ ರಾಕ್ಷಸ ತನಕ್ಕೆ ಭಾರತೀಯ ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಕೆಲ ರಾಜಕೀಯ ಪುಂಡರು ರಾಜಕೀಯ ನಡೆಸಿದ್ರೂ ಎಲ್ಲರ ಮನದಲ್ಲೂ ರಕ್ತ ಕುದಿಯುತ್ತಿದೆ. ಮದುವೆಯಾಗಿ  ವರ್ಷ ಕಳೆದಿಲ್ಲದ ಯುವಕ, ಮಗು ಮುಖ  ನೋಡದ ಯೋಧ, ತಂದೆ, ತಂದೆ –ತಾಯಿಗೆ ಆದಷ್ಟು ಬೇಗ ಬರುವುದಾಗಿ ಹೇಳಿ ಹೋದ ಅನೇಕ ಯೋಧರು ಭಾರತೀಯ ಮಣ್ಣು ಸೇರಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ನಾವು ಕ್ರಾಂತಿಯಿಂದಲೇ ತಕ್ಕ ಪಾಠ ಕಲಿಸಬೇಕು ಎಂದು ಘೋಷಣೆಗಳನ್ನು ಕೂಗುವುದರ ಮೂಲಕ ರಾಷ್ಟ್ರಾದ್ಯಂತ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ.

45 ಸಿಆರ್​ಪಿಎಫ್​ ಯೋಧರ ಹತ್ಯೆಗೆ ಕಾರಣವಾದ ಉಗ್ರರಿಗೆ ತಕ್ಕ ಶಾಸ್ತಿ ಮಾಡಲು ನಮ್ಮ ಯೋಧರೇ  ನಿರ್ಧರಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಮೋದಿ ದಾಳಿಯ ರೂವಾರಿ ಭಯೋತ್ಪಾದಕರಿಗೆ ಎಚ್ಚರಿಕೆ ನೀಡಿದರು. ಅವರ ಹುಟ್ಟು ಅಡಗಿಸಲು ನಾವು ನಿರ್ಧರಿಸಿದ್ದಾಗಿದೆ. ನಮ್ಮ ಸೈನಿಕರಿಗೆ ರಕ್ತ ಕುದಿಯುತ್ತಿದೆ, ನಮ್ಮವರನ್ನು ಕಳೆದುಕೊಂಡ ನೋವು, ನಮಗಾದ ಹಾಗೇ ಅವರಿಗೂ ಆಗಲಿದೆ. ಅದಕ್ಕಾಗಿಯೇ ಈಗಾಗಲೇ ಸನ್ನದ್ದರಾಗಿದ್ದೇವೆ, ಅವರಿಗೆ ಏನು ಮಾಡಬೇಕು, ಹೇಗೆ ಪಾಠ ಕಲಿಸಬೇಕೆಂದು ಈಗಾಗಲೇ ತೀರ್ಮಾನಿಸಿದ್ದಾಗಿದೆ  ಎಂದರು.ಪಾಕಿಸ್ತಾನದ ಮೇಲೆ ನಾವು ದಾಳಿಯನ್ನು ಆರಂಭಿಸಿದ್ದು, ಇದು ಭಯೋತ್ಪಾದನೆ ರೀತಿಯಲ್ಲೇ ಇರಲಿದೆ ಎಂದು ಗುಡುಗಿದರು.  

ದಿವಾಳಿ ಅಂಚಿನಲ್ಲಿದ್ದ ಪಾಕ್ ಈಗ ಭಯೋತ್ಪಾನೆಗೆ ಹೆಸರುವಾಸಿ ಆಗಿದೆ. ಅವರ ಪಾಪಕ್ಕೆ ಖಂಡಿತಾ ಬೆಲೆ ತೆತ್ತ ಬೇಕಾಗುತ್ತದೆ ಎಂದರು. ವೀರ ಯೋಧರಿಗೆ  ಎರಡು ನಿಮಿಷಗಳ ಕಾಲ ಮೌನಚಾರಣೆ ಮಾಡಿದ ಮೋದಿ ಭಾಷಣದುದ್ದಕ್ಕೂ ಪ್ರತೀಕಾರದ ಕೂಗು ಕೇಳುತ್ತಿತ್ತು. ಅವರಿಗೆ ಹೇಗೆ, ಎಲ್ಲಿ ಮಟ್ಟ ಹಾಕಬೇಕು ಎಂಬುದನ್ನು ನಮ್ಮ ಸೈನಿಕರೇ ನಿರ್ಧರಿಸಲಿದ್ದಾರೆ.ನಮ್ಮ ಯೋಧರಿಗೆ ಸಮಾಧಾನ ನಂಬಿಕೆ ಹಾಗೂ ತಾಳ್ಮೆ ಇರಲಿದೆ. ಸಿಆರ್​ಪಿಎಫ್​ ಯೋಧರ ಸಾವಿಗೆ ಕಾರಣರಾದವರ ಬಗ್ಗೆ ದೇಶದ ಜನರಲ್ಲಿ ಆಕ್ರೋಶ ಇದೆ. ಅದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ನಮ್ಮ ಯೋಧರಿಗೆ ಅವರನ್ನು ಶಿಕ್ಷಿಸುವ ಸಂಪೂರ್ಣ ಅಧಿಕಾರವನ್ನು ನಾನು ನೀಡಿದ್ದೇನೆ ಎಂದರು.

Edited By

Kavya shree

Reported By

Kavya shree

Comments