ಪುಲ್ವಾಮ ದಾಳಿಯಲ್ಲೂ ರಾಜಕೀಯ ನಡೆಸಿದ ಜಗ್ಗೆಶ್ ವಿರುದ್ಧ ಗರಂ ಆದ ನೆಟ್ಟಿಗರು….!

15 Feb 2019 12:23 PM | General
5204 Report

ನೆನ್ನೆ ಇಡೀ ದೇಶವೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದು ಹೋಗಿದೆ..  ಪುಲ್ವಾಮನಲ್ಲಿ  ಉಗ್ರನ ಆತ್ಮಾಹುತಿ ದಾಳಿಗೆ ಸಿಆರ್ ಪಿಎಫ್ 42 ಯೋಧರು ಹುತಾತ್ಮರಾಗಿದ್ದು, ಬಾಲಿವುಡ್ ಸೇರಿದಂತೆ ಸ್ಯಾಂಡಲ್ ವುಡ್ ನಟರು ಟ್ವೀಟರ್ ಮೂಲಕ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ ಯೋಧರ ನಿಧನಕ್ಕೆ ಇಡೀ ಸಿನಿಮಾ ರಂಗವೇ ಕಂಬನಿ ಮಿಡಿದಿದೆ.ಇದೇ ವೇಳೆ ಸ್ಯಾಂಡಲ್ ವುಡ್ ನಟ ಜಗ್ಗೇಶ್ ಅವರು ಪುಲ್ವಾಮ ದಾಳಿ ಕುರಿತಂತೆ ಮಾಡಿರುವ ಟ್ವೀಟ್ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ನೆನ್ನೆ ನಡೆದಂತಹ ಪುಲ್ವಾಮ ದಾಳಿ ಕುರಿತಂತೆ ಟ್ವೀಟ್ ಮಾಡಿರುವ ನಟ ಜಗ್ಗೇಶ್, ಭಾರತೀಯರೇ ನಾವು 2019 ರಲ್ಲಿ ಎಚ್ಚರ ತಪ್ಪಿ ಸ್ವಾರ್ಥಿಗಳ ನಾಟಕ ನಂಬಿ, ನತದೃಷ್ಟರಿಗೆ ದೇಶ ಅರ್ಪಿಸಿದರೆ ಇಂಥ ಅನಾಹುತಗಳು ದೇಶವ್ಯಾಪಿ ಮುಂದುವರೆಯುತ್ತದೆ ಎಚ್ಚರಿಕೆ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ಅವರ ಈ ಟ್ವೀಟ್ ಗೆ ಪರವಿರೋಧಗಳು ವ್ಯಕ್ತವಾಗಿದ್ದು, ಏನ್ ಸರ್ ನೀವು ನೋವಿನಲ್ಲೂ ರಾಜಕೀಯ ಬೇಕಿತ್ತಾ, ಈ ದೇಶಕ್ಕೆ ಯಾರು ಬೇಕು ಬೇಡ ಅದನ್ನು ಆಮೇಲೆ ಯೋಚಿಸೋಣ, ಇದು ಯೋಧರ ಕುಟುಂಬದ ನೋವಿನಲ್ಲೂ ಭಾಗಿಯಾಗೋ ಸಮಯ. ಈಗ ಅದನಷ್ಟೇ ಮಾಡೋಣ ಎಂದು ವ್ಯಕ್ತಿಯೊಬ್ಬರು ಕಮೆಂಟ್  ಕೂಡ ಮಾಡಿದ್ದಾರೆ. ರಾಜಕೀಯವನ್ನು ಎಲ್ಲಿ ಬೇಕಂದರಲ್ಲಿ ಬಳಸಿ ಅದಕ್ಕೆ ಅರ್ಥವೇ ಇಲ್ಲದಂತೆ ಆಗುತ್ತಿದೆ..

 

Edited By

Manjula M

Reported By

Manjula M

Comments