ಪಿಎಫ್​ ದಾರರಿಗೆ ಬಿಗ್ ಶಾಕ್..!! ನಿಮ್ಮ ಹಣ ನಿಮ್ಮ ಕೈ ಸೇರುತ್ತಾ..?

15 Feb 2019 10:50 AM | General
346 Report

ತನ್ನ ಜೀವಮಾನವಿಡಿ ದುಡಿದ ಸಂಬಳದಲ್ಲಿ ಒಂದಿಷ್ಟು ಹಣವನ್ನು ಉಳಿಸಿದರೆ ಮುಮದೆ ನಮ್ಮ ಜೀವನದ ಕಷ್ಟಕ್ಕೆ ಆಗುತ್ತದೆ ಎಂಬ ಉದ್ದೇಶದಿಂದ ಕೆಲವರು ಕಷ್ಟ ಆದರೂ ಸರಿ ಎಂದು ಕೆಲಸಕ್ಕೆ ಹೋಗಿ ಒಂದಿಷ್ಟು ಹಣವನ್ನು ಉಳಿಸುತ್ತಾರೆ.. ನಿವೃತ್ತಿಯ ಬಳಿಕ ಪಿಎಫ್ ರೂಪದಲ್ಲಿ ಹಣ ಸಿಗುತ್ತದೆ ಎಂದುಕೊಂಡಿರುತ್ತಾರೆ.. ಆದರೆ ನಿವೃತ್ತಿ ನಂತರ ತಮ್ಮ ಪಿಎಫ್​ ಹಣ ನಿರೀಕ್ಷೆ ಮಾಡುತ್ತಿರುವವರಿಗೆ ಭಾರತೀಯರಿಗೆ ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್​ ಕಡೆಯಿಂದ ಶಾಕಿಂಗ್ ಸುದ್ಧಿಯೊಂದು ನೀಡಿದೆ..

ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್ ಭಾರತೀಯರ ಸಾವಿರಾರು ಕೋಟಿ ರೂಪಾಯಿ ಪಿಎಫ್​ ಹಣವನ್ನು IL&FS ಗ್ರೂಪ್​ನಲ್ಲಿ ಹೂಡಿಕೆ ಮಾಡಿದೆ. ಆದರೆ ಟ್ರಸ್ಟ್​ ಹೂಡಿದ ಈ ಹಣ ಅಸುರಕ್ಷಿತ ಸಾಲದ ಸಾಲಿಗೆ ಸೇರಿದ ಹಿನ್ನಲೆಯಲ್ಲಿ ಟ್ರಸ್ಟ್​ ತನ್ನೆಲ್ಲ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಒಂದು ವೇಳೆ ಟ್ರಸ್ಟ್​ ತನ್ನೆಲ್ಲ ಹಣವನ್ನು ಕಳೆದುಕೊಂಡರೆ ಹಲವಾರು ಪಿಎಫ್​ ದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಕುರಿತಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ವಿಚಾರಣ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ. ಕಷ್ಟ ಪಟ್ಟು ದುಡಿದ ಹಣ ನಮ್ಮ ಕೈ ಸೇರಲಿಲ್ಲ  ಅಂದರೆ ಆಗುವ ನೋವು ಅಷ್ಟಿಷ್ಟಲ್ಲ..ಹಾಗಾಗಿ ಇದರ ಬಗ್ಗೆ ವಿಚಾರಣೆಹೆ ಅರ್ಜಿ ಸಲ್ಲಿಸಲಾಗಿದೆ.

Edited By

Manjula M

Reported By

Manjula M

Comments