ಲವ್ ಬ್ರೇಕ್ಅಪ್ ಆದ ಗಾಯಕಿಗೆ ಪ್ರಪೋಸ್ ಮಾಡಿದ ಅಭಿಮಾನಿ...!

14 Feb 2019 4:11 PM | General
586 Report

ಇಂದು ಎಲ್ಲೆಡೆ ವ್ಯಾಲೆಂಟೇನ್ಟ್ ಡೇ ಸಂಭ್ರಮ.  ಅನೇಕ ಮಂದಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಉಡುಗೊರೆ ಕೊಡುವುದು, ಪತ್ರ ಬರೆಯುವುದರ ಮುಖಾಂತರ ಸಂಗಾತಿಗೆ ಪ್ರೀತಿ ಮನವಿ ಮಾಡಿಕೊಂಡಿದ್ದಾರೆ. ಹಾಡುಗಾರ್ತಿ ನೇಹಾ ಕುಕ್ಕರ್  ಕೂಡ ವ್ಯಾಲೆಂಟೇನ್ಸ್ ಡೇ  ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಅಂದಹಾಗೇ ಗಾಯಕಿ ನೇಹಾ ಕುಕ್ಕರ್ ಅವರು ಈ ಹಿಂದೆ ತಮ್ಮ ಪ್ರೀತಿ ಬ್ರೇಕ್ ಅಪ್  ಆಗಿದ್ದರ ಬಗ್ಗೆ ಅಭಿಮಾನಿಗಳೊಟ್ಟಿಗೆ  ಹಂಚಿಕೊಂಡಿದ್ದರು.

ಈ ಹಿಂದೆ ತಾನು ಸಾಮಾಜಿಕ ಜಾಲತಾಣಗಳಲ್ಲಿ ನೇಹಾ ಕುಕ್ಕರ್ ಬ್ರೇಕ್ ಅಪ್ ನೋವನ್ನು  ತೋಡಿಕೊಂಡಿದ್ದರು. ತಾನು ಮುರಿದು ಪ್ರೇಮದಿಂದಾಗಿ ನಾನು ತುಂಬಾ ಬೇಸರಿಸಿದ್ದೇನೆ, ನನಗೆ ಲವ್ ಬ್ರೇಕ್ ಅಪ್ ವಿಚಾರ ತುಂಬಾ ಮನನೊಂದಿದ್ದೇನೆ ಎಂದು  ಸೋಶಿಯಲ್ ಮಿಡಿಯಾದಲ್ಲಿ ಅಳಲು ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ವ್ಯಾಲೆಂಟೇನ್ಸ್ ಡೇ  ದಿನ ಪ್ರಯುಕ್ತ ನೇಹಾಗೆ ಖುಷಿ ನೀಡುವ  ಸಂಗತಿಯೊಂದು ನಡೆದಿದೆ. ಪ್ರೀತಿ ಕಳೆದುಕೊಂಡ ನೇಹಾ ನೇಹಾಗೆ  ಅಭಿಮಾನಿಯೊಬ್ಬರು ಖುಷಿ ನೀಡುವ ಪ್ರಯತ್ನ ಮಾಡಿದ್ದಾರೆ. ವ್ಯಾಲೆಂಟೈನ್ಸ್ ಡೇ ಹಿಂದಿನ ದಿನ, ನೇಹಾ ಮುಂದೆ ಮಂಡಿಯೂರಿ ಕುಳಿತು ಹೂ, ಉಡುಗೊರೆ ನೀಡಿದ್ದಾರೆ. ಅಂದಹಾಗೇ ನೇಹಾ ಈ ಸರ್ಪ್ರೈಸ್ಡ್ ಗೆ ಖುಷಿಯಾಗಿದ್ದು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಇದರ ಜೊತೆ ಅಭಿಮಾಣಿಗೆ ಅಭಿನಂದನೆ  ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments