ಸ್ವಂತ ವ್ಯಾಪಾರ ಮಾಡಲು ನಿಮಗೆ ಸಿಗುತ್ತೆ 10 ಲಕ್ಷ..!!  ಹೇಗೆ ಅಂತೀರಾ..?

14 Feb 2019 11:15 AM | General
1170 Report

ನಿರುದ್ಯೋಗ ಸಮಸ್ಯೆ ಎನ್ನುವುದು ಬಹಳ  ವರ್ಷಗಳಿಂದ ತಲೆ ಎತ್ತಿದೆ . ಉನ್ನತ ಶಿಕ್ಷಣ ಪಡೆದರೂ ಕೂಡ ಉದ್ಯೋಗದ ಅವಕಾಶಗಳಿಲ್ಲದೆ ಅದೆಷ್ಟೋ ಕನಸುಗಳು ನನಸಾಗದೆ ಹಾಗೆ ಉಳಿದಿವೆ.. ಒಮದು ವೇಳೆ ನೀವು ಸ್ವಂತ ವ್ಯಾಪಾರ ಮಾಡಬೇಕು ಅಂದಿದ್ದರೆ ಬಂಡವಾಳಕ್ಕೆ ನೀವು ಹೆದರುವ ಅವಶ್ಯಕತೆ ಇಲ್ಲ..ನಿಮ್ಮಲ್ಲಿ ಯಾವುದಾದರೂ ವ್ಯಾಪಾರ ಆರಂಭಿಸುವ ಯೋಚನೆ ಇದ್ದರೆ ನೀವು ಖಂಡಿತ ಹೆದರುವ ಅವಶ್ಯಕತೆ ಇಲ್ಲ. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಬಗ್ಗೆ ನೀವು ಕೇಳಿರಬಹುದು ಇಲ್ಲಿ ನಿಮಗೆ ಸೂಕ್ತ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.ಇದನ್ನು ಸದುಪಯೋಗ ಪಡಿಸಿಕೊಳ್ಳಿ..

ಆದರೆ ಈ ಸಾಲವನ್ನು ಪಡೆಯುವಾಗ ನೀವು ಕೆಲ ಅಂಶಗಳನ್ನು ನೆನಪಿನಲ್ಲಿ ಇಡಬೇಕಾಗುತ್ತದೆ.. ಯಾವುದೇ ಬ್ಯಾಂಕಿನಲ್ಲಿ ವಿಚಾರಿಸಿದರೂ ಕೂಡ ನಿಮಗೆ ಸಾಲದ ಬಗ್ಗೆ ಮಾಹಿತಿ ದೊರೆಯುತ್ತದೆ.ದೇಶದ ಯುವ ಸಮುದಾಯದಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಮತ್ತು ಈಗಾಗಲೇ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ಒದಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಬೇಕಾದ ದಾಖಲೆಗಳನ್ನು ಬ್ಯಾಂಕ್ ಗೆ ಒದಗಿಸಿ ಸಾಲ ಸೌಲಭ್ಯ ಪಡೆಯಬಹುದು.. ನೀವು ವ್ಯವಹಾರ ಮಾಡುವ ಯಾವುದಾದರು ಉತ್ತಮ ಬ್ಯಾಂಕ್ ಇದ್ದಾರೆ ಅಲ್ಲಿಯೇ ವಿಚಾರಿಸಿ,ಮತ್ತು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಅಲ್ಲಿ ನೀವು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡಿದ ದಾಖಲೆಗಳನ್ನು ಇಟ್ಟುಕೊಳ್ಳಿ.ಒಟ್ಟಾರೆಯಾಗಿ ನೀವು ನೀಡುವ ದಾಖಲೆಗಳು ಪಾರದರ್ಶಕವಾಗಿರಬೇಕು. ಆಗ ನಿಮಗೆ 10 ಲಕ್ಷದವರೆಗೂ ಕೂಡ ಸಾಲ ಸಿಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ..

Edited By

Manjula M

Reported By

Manjula M

Comments