ವಿರಾಟ್ ಕೊಹ್ಲಿ ಸೋಶಿಯಲ್ ಮಿಡಿಯಾದಲ್ಲಿ ಗಳಿಸುವ ಸಂಪಾದನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ...!!!

13 Feb 2019 10:51 AM | General
166 Report

ಟೀಂ ಇಂಡಿಯಾ ನಾಯಕ ವಿರಾಟ್​​​ ಕೊಹ್ಲಿ ಫೀಲ್ಡ್ ಗೆ ಬಂದ್ರೆ ಎದುರಾಳಿ ಬೌಲರ್​​​ ಎಷ್ಟೇ ಪ್ರಭಾವಿಯಾಗಿದ್ರೂ ಒಮ್ಮೆ ಬೆಚ್ಚಿ ಬೀಳ್ತಾನೆ.ಕಾರಣ ಸದ್ಯ ವಿಶ್ವ ಕ್ರಿಕೆಟ್​​​​​ನ ನಂಬರ್​​ 1 ಬ್ಯಾಟ್ಸ್​​​ಮನ್​ ಆಗಿರುವ ಕೊಹ್ಲಿ ವಿಶ್ವದ ಘಟಾನುಘಟಿ ಬೌಲರ್​​ಗಳನ್ನೂ ಇನ್ನಿಲ್ಲದಂತೆ ದಂಡಿಸಿದ್ದಾರೆ. ವಿರಾಟ್ ಕೊಹ್ಲಿ ಆಟದಲ್ಲಷ್ಟೇ ಅಲ್ಲಾ, ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಅಂದಹಾಗೇ ಕೆಲ ಕ್ರಿಕೆಟ್ ಸ್ಟಾರ್’ಗಳು, ಸಿನಿಮಾ ಸ್ಟಾರ್’ಗಳು ಸಾಮಾಜಿಕ ಜಾಲತಾಣಗಳಲ್ಲಿ  ಆ್ಯಕ್ಟೀವ್ ಆಗಿರುತ್ತಾರೆ ಅದರಲ್ಲೂ ವಿರಾಟ್ ಕೊಹ್ಲಿ ಒಂದಿಲ್ಲೊಂದು ವಿಚಾರದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ  ಕ್ರಿಕೆಟಿಗ ವಿರಾಟ್ ಕೊಹ್ಲಿ ಗಳಿಸುವ ಸಂಪಾದನೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ...! ಸ್ಟಾರ್ ಅನುಷ್ಕಾ ಶರ್ಮಾ ಜೊತೆ ಮದುವೆಯಾದ ಬಳಿಕ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಕೊಹ್ಲಿ ಕ್ರೀಡಾಂಗಣದಲ್ಲಿ ಎಷ್ಟು ಪ್ರಭಾವಿಯೋ, ಸೋಶಿಯಲ್ ಮಿಡಿಯಾದಲ್ಲಿ ಅಷ್ಟೇ ಆ್ಯಕ್ಟೀವ್. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಳಿಸುವ ಕ್ರೀಡಾಪಟುಗಳ ಪೈಕಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಒಬ್ಬರಾಗಿದ್ದಾರೆ. ಎಂಬ ಮಾಹಿತಿ ಇತ್ತೀಚಿಗಷ್ಟೇ ಹೊರ ಬಿದ್ದಿದೆ. HopperHQ ಬಿಡುಗಡೆ ಮಾಡಿದ ವರದಿಯಲ್ಲಿ 9 ನೆಯ ಸ್ಥಾನವನ್ನು ಪಡೆದಿದ್ದಾರೆ.ತನ್ನ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಫೇಸ್ಬುಕ್ ಸ್ವಾಮ್ಯದ ಫೋಟೋ ಹಂಚಿಕೆ ಅಪ್ಲಿಕೇಶನ್  Instagram ನಲ್ಲಿ ಕೊಹ್ಲಿ 17ನೇ ಸ್ಥಾನ ಪಡೆದಿದ್ದಾರೆ.ಪ್ರತಿ ಪ್ರಮೋಶನಲ್ ಪೊಸ್ಟಗೆ ಅವ್ರು ಅಂದಾಜು 8,400,000 ಕೋಟಿ ರೂ ಗಳನ್ನ ಗಳಿಸುತ್ತಾರೆ. ಅಂದಹಾಗೇ ಕಳೆದ ವರ್ಷ ವಿರಾಟ್ ಕೋಹ್ಲಿ ಬರೋಬ್ಬರಿ 228.09 ಕೋಟಿ ರೂಪಾಯಿ ಗಳನ್ನು ಪಡೆದಿದ್ದರು.  ಇದನ್ನು ದಿನದ ಆದಾಯದಂತೆ ಲೆಕ್ಕ ಮಾಡಿದರೆ ಅವರ ಒಂದು ದಿನದ ಗಳಿಕೆ 67.85 ಲಕ್ಷ ರೂಪಾಯಿಗಳು. ಇದು ಸಾಮಾನ್ಯ ಜನತೆ ಕನಸಿನಲ್ಲಿಯೂ ನಿರೀಕ್ಷಿಸಲಾಗದ ಮೊತ್ತ ಎಂಬುದಂತೂ ಕಟು ಸತ್ಯ.ಕೊಹ್ಲಿ ಅವರು ಒಂದು ವರ್ಷದಲ್ಲಿ Instagram ಪೋಸ್ಟ್ಗೆ ಅಂದಾಜು 85,41,060.00 ಸಂಪಾದಿಸುತ್ತಾರೆ.

Edited By

Kavya shree

Reported By

Kavya shree

Comments