ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!! ಏನಂತಿರಾ..?

12 Feb 2019 1:13 PM | General
1301 Report

ಇದೀಗ ಎಸೆಸೆಲ್ಸಿ ಅಂಕಪಟ್ಟಿ ತಿದ್ದುಪಡಿ ಮಾಡುವ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಂಪೂರ್ಣ ಡಿಜಿಟಲೀಕರಣ ಮಾಡಲು ಮುಂದಾಗಿದೆ.ಅರ್ಜಿಯನ್ನು  ಸಲ್ಲಿಸಿದ ಕೆಲವೇ ದಿನಗಳಲ್ಲಿ ಪರಿಷ್ಕೃತ ಅಂಕಪಟ್ಟಿಗಳು ಅಭ್ಯರ್ಥಿಗಳ ಕೈ ಸೇರಲು ವ್ಯವಸ್ಥೆ ಮಾಡಲಾಗಿದೆ. ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಹೆಸರು, ಜನ್ಮ ದಿನಾಂಕ, ತಂದೆ -ತಾಯಿ ಹೆಸರುಗಳು ಸೇರಿದಂತೆ ವಿವರಗಳನ್ನು ತಿದ್ದುಪಡಿ ಮಾಡುವ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಕಾರಣಗಳಿಂದ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಹೆಸರು, ಇನಿಷಿಯಲ್ಸ್, ಸರ್ ನೇಮ್ ಜನ್ಮದಿನಾಂಕ, ವಿಳಾಸ ಮೊದಲಾದವು ತಪ್ಪಾಗಿ ಅಥವಾ ಹಿಂದೆ ಮುಂದೆ ಆಗುವುದು, ಬಿಟ್ಟು ಹೋಗುವುದು ಸರ್ವೆ ಸಾಮಾನ್ಯವಾಗಿದೆ. ಇಂತಹ ತಪ್ಪುಗಳ ತಿದ್ದುಪಡಿಗೆ ಅಗತ್ಯ ದಾಖಲೆಗಳೊಂದಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಗೆ ಅರ್ಜಿ ಸಲ್ಲಿಸಲಾಗುತ್ತದೆ. ಇಂತಹ ತಿದ್ದುಪಡಿ ವ್ಯವಸ್ಥೆಯನ್ನು ಡಿಜಿಟಲ್ ಮಾಡಿದ್ದು. ಅರ್ಜಿ ಸಲ್ಲಿಸಿದ ಕೆಲವೇ ದಿನದಲ್ಲಿ ಪರಿಷ್ಕೃತ ಮಾರ್ಕ್ಸ್ ಕಾರ್ಡ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವ್ಯವಸ್ಥೆಯಿಂದ ವಿಧ್ಯಾರ್ಥಿಗಳಿಗೆ ಖುಷಿಯಾಗಿದೆ. ಅಲ್ಲಿ ಇಲ್ಲಿ ತಿದ್ದುವ ಗೊಂದಲವಿರುವುದಿಲ್ಲ…

Sponsored

Edited By

Manjula M

Reported By

Manjula M

Comments