ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳು….?!!!

ದೋಸ್ತಿ ಸರ್ಕಾರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ. ಹಿಂದಿನ ಕೆಲ ಯೋಜನೆಗಳನ್ನು ಈ ವರ್ಷಕ್ಕೂ ಮುಂದುವರೆಸಲಾಗಿದೆ. ರೈತರನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಈ ಬಾರಿ ಬಜೆಟ್ ಮಂಡನೆ ಮಾಡಲಾಗಿದೆ. ಸಿರಿಧಾನ್ಯ ಬೆಳೆಯಲು ಈ ಭಾರಿ ಹೆಚ್ಚು ಒತ್ತು ನೀಡಲಾಗಿದೆ. ಬಜೆಟ್ ನಲ್ಲಿ ರೇಷ್ಮೆ ಸೀರೆಗಳ ನೇಯ್ಗೆಗೆ ಆದ್ಯತೆ ಕೊಡಲಾಗಿದೆ.
- ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ 1200 ಕೋಟಿ ಅನುದಾನ
- ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ ಅನುದಾನ
- ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ
- ರೇಷ್ಮೆ ಕೃಷಿಕರಿಗೆ 2 ಸಾವಿರ ರೂ ಗೌರವ ಧನ
- ನಾಟಿ ಕೋಳಿ ಸಾಕಣೆ ಉತ್ತೇಜನಕ್ಕೆ 5 ಕೋಟಿ
- ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ 5 ರಿಂದ 6.ರೂಗಳಿಗೆ ಹೆಚ್ಚಳ.
- ಹಾಲು ಉತ್ಪಾದಕರ ಪ್ರೋತ್ಸಾಹಕ್ಕೆ 2.500 ಕೋಟಿ ಅನುದಾನ
- ಮಂಗನ ಕಾಯಿಲೆ ಔಷಧಿ ತಯಾರಿಕೆಗೆ 5 ಕೋಟಿ ಮೀಸಲು
- ರೈತ ಮಹಿಳೆಯರಿಗೆ ಗೃಹಲಕ್ಷ್ಮಿ ಬೆಳೆಸಾಲ ಯೋಜನೆ
- ರೈತ ಮಹಿಳೆಯರ ಚಿನ್ನದ ಮೇಲೆ ಶೇ.3 ರಷ್ಟು ಬಡ್ಡಿದರದಲ್ಲಿ ಸಾಲ
- ಕೆರೆ ತುಂಬಿಸಲು 1680 ಕೋಟಿ
- ತೋಟಗಾರಿಕೆಗೆ 150 ಕೋಟಿ ಬಜೆಟ್
- 200 ಕೋಟಿಯಲ್ಲಿ ಮಳವಳ್ಳಿಯಲ್ಲಿ ನೀರಾವರಿ ಯೋಜನೆ
- 400 ಕೋಟಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ನಾಲಾ ಯೋಜನೆ
Comments