ಮೈತ್ರಿ ಸರ್ಕಾರದ ಬಜೆಟ್ ಬ್ರೇಕಿಂಗ್: ಯಾರಿಗೆ ಅನುಕೂಲ, ಯಾರಿಗೆ ಅನಾನುಕೂಲ…?!!!

08 Feb 2019 12:51 PM | General
1566 Report

ಬಿಜೆಪಿ ನಾಯಕರ ಗದ್ದಲದ ನಡುವೆಯೇ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡಿದ್ದಾರೆ ಸಿಎಂ ಕುಮಾರಸ್ವಾಮಿ. ಈ ಬಾರಿ ರಾಜ್ಯದ ಜನರು ನಿರೀಕ್ಷೆ ಮಾಡಿದಷ್ಟು ಬಜೆಟ್’ನಿಂದ ಅನುಕೂಲ ಆಗಿದ್ಯಾ..? ಬಜೆಟ್ ಮಂಡನೆ ವೇಳೆ ಮಧ್ಯೆದಲ್ಲಿಯೇ ಬಿಜೆಪಿ ನಾಯಕರು ಅಡ್ಡಿ ವ್ಯಕ್ತಪಡಿಸಿದ್ದರು. ಗದ್ದಲದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದಾರೆ.

ಈ ಬಾರಿ ಬರ ಪರಿಹಾರ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಬರ ಪರಿಹಾರ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಆಯಾ ಜಿಲ್ಲಾಧಿಕಾರಿಗಳಿಗೆ 300 ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ತಿಳಿಸಲಾಗುತ್ತದೆ.

  • ವಾಣಿಜ್ಯ ಖಾಸಗಿ ಬ್ಯಾಂಕುಗಳಲ್ಲಿ ಸಲಾಮನ್ನಾ.  ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡಲಾಗುವುದು. ಈ ಬಾರಿಯೂ ನಾವು ರೈತರನ್ನು ಗಮನದಲ್ಲಿಟ್ಟುಕೊಂಡಿದ್ದೇವೆ, ಕೃಷಿಕರಿಗೆ ಅನುಕೂಲವಾಗುವಂತೆ ನೀರಾವರಿಯನ್ನು ವಿಸ್ತರಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.
  • ಬೀದಿಬದಿಯ ವ್ಯಾಪಾರಿಗಳಿಗೆ 7.5 ಕೋಟಿ ಸಾಲ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. 
  • 840 ನಿರಾಸ್ರಿತರಿಗೆ ಮನೆ ನಿರ್ಮಾಣ ಮಾಡಲಾಗುವುದು.
  • 2 ನೇ ಮೆಟ್ರೋ ಹಂತದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
  • ರಸ್ತೆಗಳ ರಭಿವೃದ್ದಿಗೆ 10,405 ಕೋಟಿ ಅನುದಾನ
  • ಬೆಂಗಳೂರು ಅಭಿವೃದ್ದೀಗೆ 8.015 ಕೋಟಿ ಅನುದಾನ
  • ಮಾತೃಶ್ರೀ ಯೋಜನೆ ಜಾರಿ ಈ ವರ್ಷವೂ ಮುಂದುವರೆಯುತ್ತದೆ (ಬಾಣಂತಿಯರಿಗೆ ಮಾಸಿಕ ರೂ. 6000)
  • 1.15 ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ
  • ಸಂಧ್ಯಾ ಸುರಕ್ಷಾ ಮಾಸಾಸನ 600 ರೂ.ನಿಂದ 1000 ರೂ. ಏರಿಕೆ
  • ಕೃಷಿ ಹೊಂಡಾ ನಿರ್ಮಿಸಲು 250 ಕೋಟಿ.ರೂ ಅನುನುದಾನ
  • ಕೃಷಿ ವಿವಿಗಳಿ 40 ಕೋಟಿ ಅನುದಾನ.
  • ಕೃಷಿ ಉದ್ಯಮಿಗಳಿಗೆ ಶೇ.50 ರಷ್ಟು ಪ್ರೋತ್ಸಾಹ ಧನ
  • ಸಿರಿಧಾನ್ಯ ಬೆಳೆಯುವ ಕೃಷಿಕರಿಗೆ 10.ಸಾವಿರದ ರೂ. ನೆರವು
  • ಹನಿ ನೀರಾವರಿಗೆ368 ಕೋಟಿ ರೂ. ಅನುದಾನ
  • ಭತ್ತ ಬೆಳೆಯುವ ರೈತರಿಗೆ ಪ್ರತೀ ಹೆಕ್ಟೇರ್ಗೆ 7.500 ಪ್ರೋತ್ಸಾಹ ಧನ

Edited By

Kavya shree

Reported By

Kavya shree

Comments