ಲೈಂಗಿಕ ಸುಖಕ್ಕಾಗಿ ಈತ ಮಹಿಳೆಯರ ಬೂಟು ಕದಿಯುತ್ತಿದ್ದನಂತೆ : ಅವುಗಳಿಂದ ಏನು ಮಾಡುತ್ತಿದ್ದ ಗೊತ್ತಾ…?

08 Feb 2019 10:06 AM | General
6000 Report

ಅಂದಹಾಗೇ ಸಮಾಜದಲ್ಲಿ ಎಂಥಹ ವಿಚಿತ್ರ ಜನರು ಇರುತ್ತಾರೆ ಗೊತ್ತಾ…?ಇಲ್ಲೊಬ್ಬ ವ್ಯಕ್ತಿ ತನ್ನ ಲೈಂಗಿಕ ಆಸೆ ತೀರಿಸಿಕೊಳ್ಳಲು ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ! ಕೆಲ ವ್ಯಕ್ತಿಗಳು ಮಹಿಳೆಯರ ಒಳ ಉಡುಪುಗಳನ್ನು ಕದಿಯುವುದು, ಅವುಗಳಿಂದ ಲೈಂಗಿಕ ಸುಖ ಅನುಭವಿಸುವುದನ್ನು ನಾವು ನೋಡಿದ್ದೇವೆ. ಆದರೆ ಜಪಾನಿನ ಈ ವ್ಯಕ್ತಿ ಮಹಿಳೆಯರು ಧರಿಸುವ ಬೂಟುಗಳನ್ನು ಕದಿಯುತ್ತಿದ್ದನಂತೆ.ಅದರಿಂದ ಲೈಗಿಂಕ ತೃಪ್ತಿ ಪಡೆಯುತ್ತಿದ್ದನಂತೆ. ಈ ವಿಚಿತ್ರವಾದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. 

ಮಕೊಟೊ( 40) ಮಹಿಳೆಯರ ಬೂಟ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಹೆಚ್ಚಾಗಿ ಮಹಿಳೆಯ ಶೂಗಳನ್ನು ಕಳ್ಳತನ ಮಾಡುತ್ತಿದ್ದುನು. ಅವುಗಳನ್ನು ಒಂದು ಕಡೆ ಸಂಗ್ರಹಿಸಿ  ಅದರಿಂದ ಬರುವ ವಾಸನೆಯಿಂದ ಆತ ಲೈಂಗಿಕ ಸುಖ ಪಡೆಯುತ್ತಿದ್ದನಂತೆ. ತುಂಬಾ ಸಮಯ ಬೂಟುಗಳನ್ನು ಪಕ್ಕದಲ್ಲಿ ಇರಿಸಿಕೊಂಡು ಬರುವ ವಾಸನೆ ಪಡೆದುಕೊಳ್ಳುತ್ತಿದ್ದನಂತೆ. ಅದರಲ್ಲೂ ಹಳೆ ಶೂನಿಂದ ಬರ್ತಿದ್ದ ವಾಸನೆ ಆತನಿಗೆ ಹೆಚ್ಚು ಸುಖ ನೀಡುತ್ತಿದ್ದವಂತೆ.  ಕಾರಣ ಆತ ಮಹಿಳೆಯರ ಹಳೆ ಶೂ ಅನ್ನೇ ಹೆಚ್ಚು ಕಳ್ಳತನ ಮಾಡುತ್ತಿದ್ದನಂತೆ. ಒಂದು ವೇಳೆ ಮಹಿಳೆಯರ ಶೂ ಸಿಗದಿದ್ದಾಗ ಪುರುಷರ ಶೂ ಕಳ್ಳತನ ಮಾಡುತ್ತಿದ್ದನಂತೆ. ಹೀಗೆ ಮಹಿಳೆಯ ಶೂ ಕಳ್ಳತನ ಮಾಡುತ್ತಿದ್ದ ಮಕೊಟೊವನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮಕೊಟೊ ಮನೆಯಲ್ಲಿದ್ದ 70 ಜೊತೆ ಶೂಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಕೊಟೊ ಕದ್ದಿದ್ದ ಶೂ ಬೆಲೆ 1 ಲಕ್ಷ 94 ಸಾವಿರ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ.

Edited By

Manjula M

Reported By

Kavya shree

Comments