ಮೀಟೂ ಯಿಂದ ನಾನು ಬಚಾವ್, ಯಾರು ನನ್ನ ಮೇಲೆ ಆರೋಪ ಮಾಡಿಲ್ಲ : ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ...!!!

07 Feb 2019 12:54 PM | General
235 Report

ಒಂದಷ್ಟು ದಿನಗಳ ಕಾಲ ಮೀಟೂ ಬಿಸಿ ಸಾಕಷ್ಟು ಸುದ್ದಿ ಮಾಡಿತ್ತು. ಸಿನಿಮಾ ತಾರೆಯರಿಂದಿಡಿದೂ ರಾಜಕಾರಣಿಗಳ ಮುಖದಲ್ಲಿ ಬೆವರಿಳಿಸಿದ ಮೀಟೂ ಬಗ್ಗೆ  ಬಿಜೆಪಿ ಮುಖಂಡಹೇಳಿರುವ ಹೇಳಿಕೆಯೊಂದು ಭಾರೀ ಸದ್ದಾಗುತ್ತಿದೆ. ಹಲವು ಸ್ಟಾರ್ ಗಳ ಮತ್ತು ನಿರ್ದೇಶಕ, ರಾಜಕಾರಣಿಗಳ ನಿದ್ದೆ ಕೆಡಿಸಿದ್ದ ಮೀಟೂ ಆರೋಪ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡಂದಂತಿದೆ. ಅಂದಹಾಗೇ ಈಗ ಬಿಜೆಪಿ ಮುಖಂಡರೊಬ್ಬರು ಮೀಟೂ ಯಿಂದ ನಾನ್ ಬಚಾವ್ ಆಗಿದ್ದೀನಿ. ಮೀಟೂ ಆರೋಪವನ್ನು ನನ್ನ ಮೇಲೆ ಯಾರು ಮಾಡಿಲ್ಲವೆಂದು  ಹೇಳಿರುವ  ಹೇಳಿಕೆ ಸದ್ಯ ವಿವಾದಕ್ಕೆ ಸಿಲುಕಿದೆ.

ಅಂದಹಾಗೇ ಆ ರೀತಿ ಹೇಳಿಕೆ ಕೊಟ್ಟಿದ್ದು ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ. ಅವರು ಆಡಿದ ಮಾತಿನಿಂದಾಗಿ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಿನ್ಹಾ ಯಾಕೆ ಈ ಮಾತನ್ನು ಹೇಳಿದ್ದಾರೆ. ಮಾತನಾಡುವ ಭರದಲ್ಲಿ ಏನಾದ್ರೂ ಈ ರೀತಿ ಮಾತನಾಡಿದ್ದಾರೋ, ಅಥವಾ ತಮಾಷೆ ಮಾಡಲೆಂದು ಹೀಗೆ ಹೇಳಿದ್ದಾರೋ …ಎಂಬುದು ಸಾಕಷ್ಟು ಅಪಾರ್ಥಗಳಿಗೆ ಎಡೆ ಮಾಡಿಕೊಟ್ಟಿದೆ. "ನಾನು ನಿಜಕ್ಕೂ ಅದೃಷ್ಟವಂತ ಎಂದು ನಾನೇ ಹೇಳಿಕೊಳ್ಳುತ್ತೇನೆ. ಏಕೆಂದರೆ ನನ್ನ ಮೇಲೆ ಯಾರೂ ಮೀಟೂ ಆರೋಪ ಮಾಡಲಿಲ್ಲ" ಎಂದು ಸಿನ್ಹಾ ಹೇಳಿದ್ದರು.

ಅಂದಹಾಗೇ ಅವರ ಈ ಹೇಳಿಕೆಯಿಂದ ಹಲವು ಅನುಮಾನದ ಪ್ರಶ್ನೆಗಳು ಎದ್ದಿವೆ. ಅವರ ಹೇಳಿಕೆಯ ಹಿಂದಿರುವ ಉದ್ದೇಶ  ತಪ್ಪು ಮಾಡಿ ಸಿಕ್ಕಿ ಹಾಕಿಕೊಳ್ಳಲಿಲ್ಲ ಎಂಬುದೇ…? ಮೀಟೂ ಆದಾರ ರಹಿತವೆಂಬುದೇ…? ಗೊತ್ತಾಗುತ್ತಿಲ್ಲ. "ಪ್ರತಿಯೊಬ್ಬ ಯಶಸ್ವೀ ಪುರುಷನ ಸೋಲಿನ ಹಿಂದೆಯೂ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಮೀಟೂ ಆಂದೋಲನದಿಂದ ತಿಳಿದಿದೆ. ನನ್ನ ಮೇಲೆ ಮೀಟೂ ಆರೋಪ ಮಾಡುವುದಕ್ಕೆ ಯಾರಾದರೂ ಯೋಚಿಸಿದ್ದರೆ, ದಯವಿಟ್ಟು ಮಾಡಬೇಡಿ" ಎಂದು ಅವರು ಹೇಳಿದರು. ಅಂದಹಾಗೇ ಯಾವಾಗ ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ತಮ್ಮ ಹೇಳಿಕೆ ಸದ್ದಾಯ್ತೋ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ. ದಯಮಾಡಿ ಯಾರು ತಪ್ಪು  ತಿಳಿಬೇಡಿ, ನಾನು ತಮಾಷೆಗಾಗಿ ಹೇಳಿದ್ದೀನಿ. ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲವೆಂದಿದ್ದಾರೆ. ಆದರೆ ಈ ಬಗ್ಗೆ ಮಾತ್ರ ಚರ್ಚೆಗಳು ನಿಂತಿಲ್ಲ ಈ ಹೇಳಿಕೆ ಹಿಂದೆ ಸಿನ್ಹಾ ಉದ್ದೇಶ ಏನಿತ್ತು ಎಂಬುದೇ ನಿಗೂಢ.

Edited By

Kavya shree

Reported By

Kavya shree

Comments